Depression: ಮೆದುಳಿನಲ್ಲಿ ಸಿರೊಟೋನಿನ್ ಮಟ್ಟ ಕಡಿಮೆಯಾಗುವುದು ಖಿನ್ನತೆಗೆ ಕಾರಣವಲ್ಲ, ನಿಜವಾದ ಕಾರಣವೇನು? ಅಧ್ಯಯನ ಏನು ಹೇಳುತ್ತೆ?
ಮೆದುಳಿನಲ್ಲಿ ಸಿರೊಟೋನಿನ್ ಮಟ್ಟ ಕಡಿಮೆಯಾಗುವುದರಿಂದ ಖಿನ್ನತೆಯುಂಟಾಗುತ್ತದೆ ಎಂದು ಭಾವಿಸಲಾಗಿದೆ. ಆದರೆ ಹೊಸ ಅಧ್ಯಯನದ ಪ್ರಕಾರ ಸಿರೊಟೋನಿನ್ ಮಟ್ಟ ಹಾಗೂ ಮೆದುಳು ಕಡಿಮೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗಿದೆ
ಮೆದುಳಿನಲ್ಲಿ ಸಿರೊಟೋನಿನ್ ಮಟ್ಟ ಕಡಿಮೆಯಾಗುವುದರಿಂದ ಖಿನ್ನತೆಯುಂಟಾಗುತ್ತದೆ ಎಂದು ಭಾವಿಸಲಾಗಿದೆ. ಆದರೆ ಹೊಸ ಅಧ್ಯಯನದ ಪ್ರಕಾರ ಸಿರೊಟೋನಿನ್ ಮಟ್ಟ ಹಾಗೂ ಮೆದುಳು ಕಡಿಮೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗಿದೆ. ಮೆದುಳಿನಲ್ಲಿ 5-HT ಎಂದೂ ಕರೆಯಲ್ಪಡುವ ಸಿರೊಟೋನಿನ್‌ನ ಮಟ್ಟ ಕಡಿಮೆಯಾದಾಗ ಖಿನ್ನತೆ ಉಂಟಾಗುತ್ತದೆ ಎಂದು ಅದು ಹೇಳುತ್ತದೆ.
ಈ ವಿಚಾರವು 1960 ರ ದಶಕದಲ್ಲಿಯೇ ಹುಟ್ಟಿಕೊಂಡಿದೆ. ವೈದ್ಯರು ಇಪ್ರೋನಿಯಾಜಿಡ್ ಮೂಡ್ ವರ್ಧಕಗಳಂತಹ ಔಷಧಿಗಳನ್ನು ಬಳಸಿದಾಗ, ಮೆದುಳಿನಲ್ಲಿ ಸಿರೊಟೋನಿನ್ ಸಾಂದ್ರತೆಯನ್ನು ಹೆಚ್ಚಿಸುವ ಮೂಲಕ ಖಿನ್ನತೆ ಕಡಿಮೆ ಮಾಡಬಹುದು ಎಂದು ನಂಬಿದ್ದರು.
ಅಂದಿನಿಂದ, ಈ ಕಲ್ಪನೆಯು ಖಿನ್ನತೆಗೆ ಸರಳವಾದ ವಿವರಣೆಯಾಗಿ ಮುಂದುವರೆಯುತ್ತಾ ಬಂದಿದೆ. ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಪ್ರೊಜಾಕ್‌ನಂತಹ SSRI ಗಳನ್ನು (ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್‌ಗಳು) ತೆಗೆದುಕೊಳ್ಳಲಾಗುತ್ತಿತ್ತು.
ಸಿರೊಟೋನಿನ್ ಹಾಗೂ ಖಿನ್ನತೆಗೆ ಸಂಬಂಧವಿಲ್ಲ
ಹೊಸ ಸಂಶೋಧನೆಯಲ್ಲಿ ಸಿರೊಟೋನಿನ್ ಹಾಗೂ ಖಿನ್ನತೆಗೆ ಸಂಬಂಧವಿಲ್ಲ ಎನ್ನಲಾಗಿದೆ. ಸಿರೊಟೋನಿನ್ ಮಟ್ಟ ಕಡಿಮೆಯಾಗುವುದು ಖಿನ್ನತೆಗೆ ಕಾರಣವಾಗುತ್ತವೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ ಎಂದು ಹೇಳಿದೆ.
ಅಧ್ಯಯನವು ಖಿನ್ನತೆ ಮತ್ತು ರಕ್ತದಲ್ಲಿನ ಸಿರೊಟೋನಿನ್ ಮಟ್ಟಗಳ ನಡುವೆ ಯಾವುದೇ ಸಂಬಂಧವನ್ನು ಕಂಡುಕೊಂಡಿಲ್ಲ. ಅಂತೆಯೇ, ಅದರ ಹಿಂದಿನ ಸಂಶೋಧಕರು ಖಿನ್ನತೆಯಿಲ್ಲದ ಜನರ ಮಿದುಳಿಗೆ ಹೋಲಿಸಿದರೆ ಖಿನ್ನತೆಯಿರುವ ಜನರ ಮೆದುಳಿನಲ್ಲಿ ಸಿರೊಟೋನಿನ್ ಗ್ರಾಹಕಗಳು ಅಥವಾ ಟ್ರಾನ್ಸ್ಪೋರ್ಟರ್ಗಳಲ್ಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ ಎಂದು ಹೇಳಲಾಗಿದೆ.
“ಖಿನ್ನತೆಯು ಹಲವಾರು ವಿಭಿನ್ನ ಲಕ್ಷಣಗಳನ್ನು ಹೊಂದಿದೆ, ಮತ್ತು ಖಿನ್ನತೆಯ ಎಲ್ಲಾ ಕಾರಣಗಳು ಸಿರೊಟೋನಿನ್‌ನಲ್ಲಿನ ಸರಳ ರಾಸಾಯನಿಕ ಅಸಮತೋಲನದಿಂದ ಉಂಟಾಗುತ್ತವೆ ಎಂದು ಭಾವಿಸುವುದು ತಪ್ಪು ಎಂದು ಹೇಳಲಾಗಿದೆ.
ಮೆದುಳಿನಲ್ಲಿ ಸಿರೊಟೋನಿನ್ ರೀಅಪ್ಟೇಕ್ ಅನ್ನು ತಡೆಯುವ ಮೂಲಕ ಕೆಲಸ ಮಾಡುವ ಪ್ರೊಜಾಕ್‌ನಂತಹ SSRI ಖಿನ್ನತೆ-ಶಮನಕಾರಿಗಳನ್ನು ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಬಾರದು ಎಂದು ಅಧ್ಯಯನವು ಸೂಚಿಸುತ್ತದೆ.
ಖಿನ್ನತೆಯಿಂದ ಬಳಲುತ್ತಿರುವವರು ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಕೆಲವು ಅಸಹಜತೆಯನ್ನು ಹೊಂದಿರುತ್ತಾರೆ ಎಂಬುದು ಸ್ಪಷ್ಟವಾಗಿದೆ ಖಿನ್ನತೆ ಸೆರೊಟೋನಿನ್ ಕಾರಣ ಅಲ್ಲ ಜೀವನದಲ್ಲಿ ನಡೆದ ಕೆಲವು ಘಟನೆಗಳು ಖಿನ್ನತೆಯನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಖಿನ್ನತೆ ಎಂದರೇನು? ಕೆಲವೊಮ್ಮೆ ಜೀವನದಲ್ಲಿ ಬೇಸರವಾಗುವ/ ಕಹಿಯಾದ ಘಟನೆಗಳು ನಡೆದಾಗ ನಮಗೆ ದುಃಖವಾಗುವುದು ಸಹಜ. ಆದರೆ ಈ ಭಾವನೆ ತುಂಬಾ ದಿನಗಳವರೆಗೆ ಇದ್ದು ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡರೆ ನಮ್ಮ ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು.
ಹೀಗೆ ಭಾವನಾತ್ಮಕವಾಗಿ ಯಾವುದೇ ಆಶಯವೂ ಇಲ್ಲದೆ ಇರುವ ಮಾನಸಿಕ ಸ್ಥಿತಿಯನ್ನು ಖಿನ್ನತೆ ಎಂದು ಹೇಳಲಾಗುತ್ತದೆ. ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುತ್ತದೆ. ಖಿನ್ನತೆಯು ವೃತ್ತಿ, ಶಿಕ್ಷಣ, ಊಟ, ನಿದ್ರೆ, ಭಾವನೆಗಳು, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.
ಖಿನ್ನತೆ ಒಂದು ಆರೋಗ್ಯ ಸಮಸ್ಯೆ ನಿಜವಾಗಿ ಹೇಳಬೇಕೆಂದರೆ ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ. ಇದು ಡಯಾಬಿಟೀಸ್, ರಕ್ತದ ಒತ್ತಡ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಖಾಯಿಲೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು.
ಇತರ ಆರೋಗ್ಯ ಸಮಸ್ಯೆಗಳಂತೆಯೇ ಖಿನ್ನತೆಯೂ ಒಂದು ಸಮಸ್ಯೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗೋಪಾಯಗಳು ಇರುವಂತೆ ಇದಕ್ಕೂ ಪರಿಹಾರವಿದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯ ಸಂಬಂಧಿತ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Fri, 5 August 22