AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dementia: ನಿಮ್ಮ ಆರೋಗ್ಯವನ್ನು ಹೀಗೆ ನೋಡಿಕೊಂಡರೆ ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರದು

ನೀವು ಉತ್ತಮ ಆಹಾರವನ್ನು ಸೇವಿಸಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡರೆ ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರುವುದನ್ನು ತಪ್ಪಿಸಬಹುದು.

Dementia: ನಿಮ್ಮ ಆರೋಗ್ಯವನ್ನು ಹೀಗೆ ನೋಡಿಕೊಂಡರೆ ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರದು
Dementia
Follow us
TV9 Web
| Updated By: ನಯನಾ ರಾಜೀವ್

Updated on:Aug 05, 2022 | 2:40 PM

ನೀವು ಉತ್ತಮ ಆಹಾರವನ್ನು ಸೇವಿಸಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಂಡರೆ ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರುವುದನ್ನು ತಪ್ಪಿಸಬಹುದು. ಸಾಮಾನ್ಯವಾಗಿ ವೈದ್ಯರು ಧೂಮಪಾನ ಮಾಡಬೇಡಿ, ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ, ಆರೋಗ್ಯಕರ ಆಹಾರವನ್ನು ಸೇವಿಸಿ, ತೂಕವನ್ನು ಕಾಪಾಡಿಕೊಳ್ಳಿ ಮತ್ತು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ ಎಂದು ಹೇಳಿಯೇ ಹೇಳುತ್ತಾರೆ.

ಏಪ್ರಿಲ್ 13, 2022 ರಂದು BMJ ಪ್ರಕಟಿಸಿದ ಅಧ್ಯಯನದಲ್ಲಿ ಹಲವಾರು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹೆಚ್ಚು ಕಾಲ ಬದುಕುತ್ತಾರೆ ಹಾಗೆಯೇ ಮರೆವಿನ ಸಮಸ್ಯೆ ಕೂಡ ಅವರ ಬಳಿ ಸುಳಿಯುವುದಿಲ್ಲ ಎಂದು ಹೇಳಿದೆ.

ಹಾರ್ವರ್ಡ್ ಹೆಲ್ತ್ ನಿಯತಕಾಲಿಕದ ಪ್ರಕಾರ, ಜೀವನಶೈಲಿಯು ನಿಮ್ಮ ಆಯಸ್ಸನ್ನು ಮಾತ್ರ ಹೆಚ್ಚಿಸುತ್ತದೆ. ಆದರೆ ನೀವು ಮರೆವಿನ ಕಾಯಿಲೆಯಿಂದ ದೂರವಿರಬೇಕಾದರೆ ಕೆಲವು ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು.

ಮರೆವಿನ ಕಾಯಿಲೆ ಬಾರದಂತೆ ನೋಡಿಕೊಳ್ಳಲು ಏನು ಮಾಡಬೇಕು?

-ಸಸ್ಯಾಧಾರಿತ ಆಹಾರ ಸೇವನೆ -ಮೆದುಳಿಗೆ ಸವಾಲು ಹಾಕುವ ಚಟುವಟಿಕೆಗಳನ್ನು ಮಾಡುವುದು (ಕಾರ್ಡ್‌ಗಳನ್ನು ಆಡುವುದು, ಕ್ರಾಸ್‌ವರ್ಡ್ ಪದಬಂಧ ಮಾಡುವುದು ಅಥವಾ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವುದು), -ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡಿ. – ಧೂಮಪಾನ, ಮದ್ಯಪಾನ ತ್ಯಜಿಸಿ

ಅಧ್ಯಯನದಲ್ಲಿ ಏನಿದೆ? ಈ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ 65 ವರ್ಷದ ಮಹಿಳೆಯರು 24 ವರ್ಷಗಳ ಹೆಚ್ಚಿನ ಜೀವಿತಾವಧಿಯನ್ನು ಹೊಂದಿದ್ದರು.

4 ಅಥವಾ 5 ಆರೋಗ್ಯಕರ ಜೀವನಶೈಲಿಯ ಅಂಶಗಳೊಂದಿಗೆ 65 ವರ್ಷ ವಯಸ್ಸಿನ ಪುರುಷರು 23 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದರು.

-ವಯಸ್ಸಾದ ಮೇಲೆ ಬರುವ ಮರೆವಿನ ಕಾಯಿಲೆಗಳಿಗೆ ಔಷಧವಿಲ್ಲ. -ಮರೆವಿನ ಕಾಯಿಲೆ ಒಂದು ರೋಗವಲ್ಲ, ಒಬ್ಬ ವ್ಯಕ್ತಿ ಅಥವಾ ಅವನ ದೇಹ ಮತ್ತು ಮೆದುಳಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.

ಮರೆವಿನ ಕಾಯಿಲೆ ಎಂದರೇನು?

ಮರೆವಿನ ಕಾಯಿಲೆ ಎಂಬುದು ಏಕಾಏಕಿ ಆಗುವುದಲ್ಲ ಕ್ರಮೇಣವಾಗಿ ಅಷ್ಟಷ್ಟೇ ಸ್ಮರಣ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಮರೆಗುಳಿತನದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅಲ್ಝೈಮರ್ (ಮರೆವಿನ ಕಾಯಿಲೆ) ಕಾಯಿಲೆಯು ಮರೆಗುಳಿತನದ ಸಾಮಾನ್ಯ ರೂಪವಾಗಿದೆ.

ಮರೆಗುಳಿತನದ ಅಪಾಯ ಹೆಚ್ಚಾಗಳು ಯಾವ ಅಂಶಗಳು ಕಾರಣ ಬಹುಶಃ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದ ಅತ್ಯಂತ ಅಧ್ಯಯನ ಮಾಡಿದ ಆಹಾರವೆಂದರೆ ‘ಮೈಂಡ್’ ಡಯಟ್. ಇದರಲ್ಲಿ ಹತ್ತು ಆರೋಗ್ಯಕರ ಆಹಾರಗಳನ್ನು ಒಳಗೊಂಡಿದೆ ಮತ್ತು ಮೈಂಡ್ ಡಯಟ್ ಗೆ ಬದ್ಧರಾಗಿರುವುದನ್ನು ಅನೇಕ ಅಧ್ಯಯನಗಳಲ್ಲಿ ತೋರಿಸಲಾಗಿದೆ, ಇದನ್ನು ಕಟ್ಟುನಿಟ್ಟಾಗಿ ಅನುಸರಿಸಿದಾಗ ಅಲ್ಝೈಮರ್ ನ ಅಪಾಯವನ್ನು 53% ರಷ್ಟು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ವಯಸ್ಸು ಆಗುವುದು, ಜೆನೆಟಿಕ್ಸ್ ಮತ್ತು ಜನಾಂಗೀಯತೆ ಎಲ್ಲವೂ ಮರೆಗುಳಿತನದ ಅಪಾಯವನ್ನು ಹೆಚ್ಚಿಸುತ್ತದೆ. ಮರೆಗುಳಿತನಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ ನೀವು ಇದನ್ನು ನಿಯಂತ್ರಿಸಬಹುದು.

ನಿಮ್ಮ ಮೆದುಳಿನ ಆರೋಗ್ಯದಲ್ಲಿ ನಿಮ್ಮ ಜೀವನಶೈಲಿಯ ಆಯ್ಕೆಗಳು ದೊಡ್ಡ ಪಾತ್ರ ವಹಿಸುತ್ತವೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ನಿಮ್ಮ ಯಾವ ಆಹಾರವನ್ನು ಹೇಗೆ ಸೇವಿಸುವಿರಿ ಎಂಬುದು ಮೊದಲ ಹೆಜ್ಜೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:40 pm, Fri, 5 August 22

ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ