Sign In

By signing in or creating an account, you agree with Associated Broadcasting Company's Terms & Conditions and Privacy Policy.

Low Sugar Diet: ಲೋ ಶುಗರ್ ಡಯೆಟ್ ಎಂದರೇನು? ತೂಕ ಇಳಿಕೆಗೆ ನಿಜವಾಗಿಯೂ ಸಹಕಾರಿಯೇ?

ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳು ಹೆಗಲೇರುತ್ತವೆ. ಅಧ್ಯಯನಗಳ ಪ್ರಕಾರ, ನಿಮ್ಮ ಒಟ್ಟು ದೈನಂದಿನ ಕ್ಯಾಲೊರಿಗಳ ಶೇಕಡಾ 5 ಕ್ಕಿಂತ ಹೆಚ್ಚು ನಿಮ್ಮ ಸಕ್ಕರೆ ಸೇವನೆಯನ್ನು ನೀವು ಮೀರಬಾರದು.

Low Sugar Diet: ಲೋ ಶುಗರ್ ಡಯೆಟ್ ಎಂದರೇನು? ತೂಕ ಇಳಿಕೆಗೆ ನಿಜವಾಗಿಯೂ ಸಹಕಾರಿಯೇ?
Low Sugar Diet
Follow us
TV9 Web
| Updated By: ನಯನಾ ರಾಜೀವ್

Updated on: Aug 04, 2022 | 11:04 AM

ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅನೇಕ ರೋಗಗಳು ನಿಮ್ಮ  ಹೆಗಲೇರುತ್ತವೆ. ಅಧ್ಯಯನಗಳ ಪ್ರಕಾರ, ನಿಮ್ಮ  ದೈನಂದಿನ ಒಟ್ಟು ಕ್ಯಾಲೊರಿಗಳ ಶೇಕಡಾ 5 ಕ್ಕಿಂತ ಹೆಚ್ಚು ನಿಮ್ಮ ಸಕ್ಕರೆ ಸೇವನೆಯನ್ನು ನೀವು ಮೀರಬಾರದು. ಇದರರ್ಥ ಸಾಮಾನ್ಯ ವಯಸ್ಕರ ಸಕ್ಕರೆ ಸೇವನೆಯು ದಿನಕ್ಕೆ 30 ಗ್ರಾಂ ಮೀರಬಾರದು.

ಪಾನೀಯಗಳು, ಹಣ್ಣಿನ ರಸ, ಬಿಸ್ಕತ್ತು, ಕೇಕ್​ಗಳು ಮತ್ತು ಚಾಕೊಲೇಟ್​ಗಳಲ್ಲಿ ಅತಿಯಾದ ಸಕ್ಕರೆ ಅಂಶವಿರುತ್ತದೆ.

 ಸಕ್ಕರೆ ಸೇವನೆ ಕಡಿಮೆ ಮಾಡುವುದರಿಂದ ಆಗುವ ಪ್ರಯೋಜನಗಳೇನು?

ತೂಕ ಇಳಿಕೆ ಸಕ್ಕರೆ ಬಳಕೆಯನ್ನು ಕಡಿಮೆ ಮಾಡುವುದರಿಂದ ತೂಕ ಇಳಿಕೆ ಮಾಡಬಹುದು, ತಿಂಡಿ ತಿಂದ ಬಳಿಕವೂ ನಿಮಗೆ ಹೊಟ್ಟೆ ತುಂಬಿದ ಅನುಭವವಾಗದಿದ್ದರೆ ಇದರರ್ಥ ನೀವು ನಿಮ್ಮ ಅಗತ್ಯವಿರುವ ದೈನಂದಿನ ಕ್ಯಾಲೊರಿ ಪ್ರಮಾಣವನ್ನು ಮೀರುವ ಸಾಧ್ಯತೆ ಹೆಚ್ಚು, ಇದು ದೀರ್ಘಾವಧಿಯಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಹಲ್ಲುಗಳ ಆರೋಗ್ಯ ಹಲ್ಲುಗಳ ಆರೋಗ್ಯ ಕಾಪಾಡಲು ನೀವು ಸಕ್ಕರೆ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ನೀವು ದೇಹರಚನೆಯನ್ನು ಉತ್ತಮವಾಗಿರಿಸಿಕೊಳ್ಳಲು ಮತ್ತು ಆರೋಗ್ಯಕರವಾಗಿರಲು ಸಕ್ಕರೆ ಭರಿತ ಆಹಾರ ಸೇವನೆ ಕಡಿಮೆ ಮಾಡಿ.

ಲೋ ಶುಗರ್ ಡಯೆಟ್ ಫಾಲೋ ಮಾಡುವುದು ಹೇಗೆ? ನೀವು ನಿತ್ಯ ಸೇವಿಸುವ ಹಲವು ಆಹಾರಗಳಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು.

ಫುಡ್ ಲೇಬಲ್ ಮೇಲೆ ಗಮನವಿರಲಿ ನೀವು ಯಾವುದೇ ಪ್ಯಾಕ್ಡ್​ ಫುಡ್, ಪಾನೀಯಗಳನ್ನು ಸೇವಿಸುತ್ತಿದ್ದರೆ, ಲೇಬಲ್​ಗಳ ಮೇಲೆ ಎಷ್ಟು ಕ್ಯಾಲೊರಿ ಸಕ್ಕರೆ ಇದೆ ಎಂಬುದನ್ನು ಪರಿಶೀಲಿಸಬೇಕು. ಕಡಿಮೆ ಸಕ್ಕರೆ ಅಂಶವಿರುವ ಪದಾರ್ಥಗಳನ್ನೇ ತಿನ್ನಬೇಕು.

ಸಕ್ಕರೆ ಅಂಶವಿರುವ ಪಾನೀಯಗಳಿಂದ ದೂರವಿರಿ ಲೋ ಶುಗರಿ ಡಯೆಟ್​ ಮಾಡಬೇಕು ಎಂದುಕೊಂಡವರು ಸಕ್ಕರೆ ಭರಿತ ಪಾನೀಯಗಳಿಂದ ದೂರವಿರಿ. ಆರೋಗ್ಯಕರ ಸ್ಮೂದಿಗಳು, ಜ್ಯೂಸ್​ಗಳನ್ನು ಸೇವನೆ ಮಾಡಿ.

ಯಾವ ರೀತಿ ಆಹಾರ ಸೇವಿಸಬೇಕು ಎಂಬುದನ್ನು ಪ್ಲ್ಯಾನ್ ಮಾಡಿ ನಿಮ್ಮ ಆರೋಗ್ಯಕ್ಕೆ ಯಾವ ರೀತಿ ಆಹಾರವನ್ನು ಸೇವಿಸಿದರೆ ಒಳಿತು ಎಂಬುದರ ಕಡೆಗೆ ಮೊದಲೇ ಪ್ಲ್ಯಾನ್ ಮಾಡಬೇಕು. ಪ್ರೊಸೆಸ್ಡ್​ ಫುಡ್​ಗಳನ್ನು ತಿನ್ನುವುದನ್ನು ನಿಲ್ಲಿಸಿ, ಸಾಧ್ಯವಾದಷ್ಟು ನಿಮ್ಮ ಆಹಾರವನ್ನು ನೀವೇ ಸಿದ್ಧಪಡಿಸಿಕೊಳ್ಳಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.