
ಬಾಹ್ಯಾಕಾಶದಲ್ಲಿ (Space) ಆಗೊಮ್ಮೆ ಈಗೊಮ್ಮೆ ಅದ್ಭುತ ಪವಾಡಗಳು ನಡೆಯುತ್ತಿರುತ್ತವೆ. ಗ್ರಹಗಳ ಸಂಯೋಜನೆಯಿಂದ ಈ ಹಿಂದೆಯೂ ಇಂತಹ ಸಾಕಷ್ಟು ಅದ್ಭುತಗಳು (phenomenon) ನಡೆದಿವೆ. ಅದೇ ರೀತಿ ಏಪ್ರಿಲ್ 25 ರಂದು ಅಂದರೆ ನಾಳೆ ಆಕಾಶದಲ್ಲಿ ಅದ್ಭುತ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ಹೌದು ನಾಳೆ ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಹಯೋಗದಿಂದ ಆಕಾಶದಲ್ಲಿ ನಗು ಮುಖ ಬೆಳಗಲಿದೆ. ಈ ಮೂರು ಗ್ರಹಗಳ ಅಪರೂಪದ ಜೋಡಣೆಯಿಂದ ಆಗಸದಲ್ಲಿ ‘ಸ್ಮೈಲಿ ಫೇಸ್‘ (Smiley Face )ಗೋಚರಿಸಲಿದ್ದು, ಈ ಖಗೋಳ ಅದ್ಭುತ ಯಾವಾಗ ಗೋಚರಿಸಲಿದೆ, ಅದನ್ನು ಹೇಗೆ ವೀಕ್ಷಿಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಏಪ್ರಿಲ್ 25, 2025 ರಂದು ಅಂದರೆ ನಾಳೆ ಬೆಳಗಿನ ಜಾವ 5:30 ರ ಸುಮಾರಿಗೆ ಆಕಾಶದಲ್ಲಿ ‘ಸ್ಮೈಲಿ ಫೇಸ್’ ಕಾಣಿಸಲಿದೆ. ಬೆಳಗಿನ ಜಾವದ ವೇಳೆಗೆ ಈ ಖಗೋಳ ಅದ್ಭುತ ಗೋಚರಿಸಲಿದ್ದು, ಆಕಾಶದಲ್ಲಿ ಕಾಣಿಸುವ ಈ ನಗು ಮುಖವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ. ಕೇವಲ ಒಂದು ಗಂಟೆ ಮಾತ್ರ ಈ ಖಗೋಳ ಅಧ್ಬುತ ಗೋಚರಿಸಲಿದೆ. ಶುಕ್ರ, ಶನಿ ಗ್ರಹ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ ಸ್ಮೈಲಿ ಫೇಸ್ ರಚನೆಯಾಗಲಿದೆ. ಶುಕ್ರ ಮತ್ತು ಶನಿ ಕಣ್ಣಿನಂತೆ ಇದ್ದರೆ, ಅರ್ಧ ಚಂದ್ರ ಬಾಯಿಯ ಆಕಾರದಲ್ಲಿ ಕಾಣಿಸಲಿದೆ.
ಇದನ್ನೂ ಓದಿ: ಒಂದು ಸಣ್ಣ ಸಹಾಯ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು; ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ
ಏಪ್ರಿಲ್ 25, 2025 ರ ಮುಂಜಾನೆ ಶುಕ್ರ, ಶನಿ ಮತ್ತು ಅರ್ಧಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಸೂರ್ಯೋದಯಕ್ಕೂ ಮುನ್ನ ಪೂರ್ವ ದಿಕ್ಕಿನಲ್ಲಿ ಈ ಸ್ಮೈಲಿ ಫೇಸ್ ನ ಸ್ಪಷ್ಟ ನೋಟವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು. ಹೀಗೆ ಮೂರು ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತ್ರಿವಳಿ ಸಂಯೋಗ ಅಂತಾನು ಕರಿತಾರೆ. ನಾಳೆ ಮುಂಜಾನೆ ಶುಕ್ರ, ಶನಿ ಗ್ರಹ ಮತ್ತು ಚಂದ್ರನ ತ್ರಿವಳಿ ಸಂಯೋಗದಿಂದ ಆಕಾಶದಲ್ಲಿ ಸ್ಮೈಲಿ ಫೇಸ್ ಕಾಣಿಸಲಿದೆ. ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು. ಜೊತೆಗೆ ಉತ್ತಮ ನೋಟಕ್ಕಾಗಿ ನೀವು ದೂರದರ್ಶಕ ಅಥವಾ ಬೈನಾಕ್ಯುಲರ್‌ನಿಂದ ವೀಕ್ಷಿಸಬಹುದು. ಇದಕ್ಕೂ ಮೊದಲು, 2008 ರಲ್ಲಿ ಶುಕ್ರ, ಗುರು ಮತ್ತು ಚಂದ್ರ ಒಟ್ಟಿಗೆ ಕಾಣಿಸಿಕೊಂಡಾಗ ಇದೇ ರೀತಿಯ ದೃಶ್ಯ ಆಕಾಶದಲ್ಲಿ ಕಂಡುಬಂದಿತ್ತು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ