ಸೋಲು ಶಾಶ್ವತವಲ್ಲ, ಗೆಲುವಿನ ದಾರಿಯ ಆಯ್ದುಕೊಳ್ಳುವ ಸ್ವಾತಂತ್ರ್ಯ ಕೂಡ ನಿಮ್ಮದೇ, ಆತ್ಮವಿಶ್ವಾಸ ಹೆಚ್ಚಿಸಲು ಸಲಹೆಗಳು ಇಲ್ಲಿವೆ

ಜೀವನದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ, ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ, ಆದರೆ ಕೆಲವೊಬ್ಬರ ಜೀವನದಲ್ಲಿ ಕೆಲವೊಮ್ಮೆ ಕೇವಲ ಸೋಲನ್ನು ಮಾತ್ರವೇ ಕಾಣುತ್ತಿರುತ್ತಾರೆ. ಆಗ ಸೋತೆ ಎಂದು ಕೊರಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು, ಗೆಲುವು ನಿಮ್ಮದಾಗಿಸಿಕೊಳ್ಳುವುದು ಹೇಗೆ, ನೀವು ಎಡವಿದ್ದೆಲ್ಲಿ ಎಂಬುದರ ಬಗ್ಗೆ ಆಲೋಚಿಸಬೇಕು.

ಸೋಲು ಶಾಶ್ವತವಲ್ಲ, ಗೆಲುವಿನ ದಾರಿಯ ಆಯ್ದುಕೊಳ್ಳುವ ಸ್ವಾತಂತ್ರ್ಯ ಕೂಡ ನಿಮ್ಮದೇ, ಆತ್ಮವಿಶ್ವಾಸ ಹೆಚ್ಚಿಸಲು ಸಲಹೆಗಳು ಇಲ್ಲಿವೆ
ಆತ್ಮವಿಶ್ವಾಸ
Image Credit source: Healthshots.com

Updated on: Sep 15, 2023 | 3:00 PM

ಜೀವನದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ, ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ, ಆದರೆ ಕೆಲವೊಬ್ಬರ ಜೀವನದಲ್ಲಿ ಕೆಲವೊಮ್ಮೆ ಕೇವಲ ಸೋಲನ್ನು ಮಾತ್ರವೇ ಕಾಣುತ್ತಿರುತ್ತಾರೆ. ಆಗ ಸೋತೆ ಎಂದು ಕೊರಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು, ಗೆಲುವು ನಿಮ್ಮದಾಗಿಸಿಕೊಳ್ಳುವುದು ಹೇಗೆ, ನೀವು ಎಡವಿದ್ದೆಲ್ಲಿ ಎಂಬುದರ ಬಗ್ಗೆ ಆಲೋಚಿಸಬೇಕು.

ಆತ್ಮವಿಶ್ವಾಸ, ಛಲ ನಿಮ್ಮಲ್ಲಿದ್ದರೆ ಅಸಾಧ್ಯವಾದುದ್ದನ್ನು ಕೂಡ ಸಾಧಿಸಿ ತೋರಿಸಬಹುದು. ಜರ್ನಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ಸೈಕಾಲಜಿ ಪ್ರಕಾರ, ಆತ್ಮ ವಿಶ್ವಾಸವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ
ಬೇರೆಯವರ ಸೌಂದರ್ಯ, ಬಣ್ಣ, ಮೈಕಟ್ಟು, ಆಸ್ತಿ ಎಲ್ಲದಕ್ಕೂ ಹೋಲಿಕೆ ಮಾಡಲು ಹೋಗಿ, ತಮ್ಮ ಬಳಿ ಇಲ್ಲವಲ್ಲ ಎಂದು ಕೊರಗುತ್ತಾರೆ. ಆದರೆ ಹೋಲಿಕೆ ಕೊನೆಯದಾಗಿ ಅಸೂಯೆಯಾಗಿ ಬದಲಾಗುತ್ತದೆ.

ನಿಮ್ಮನ್ನು ನಿರಾಸೆಗೊಳಿಸುವಂತಹ ಸ್ನೇಹಿತರನ್ನು ಬಿಟ್ಟುಬಿಡಿ
ನಿಮ್ಮನ್ನು ನಿರಾಸೆಗೊಳಿಸುವಂತಹ ಸ್ನೇಹಿತರನ್ನು ಬಿಡಿ. ಸಕಾರಾತ್ಮಕ ಚಿಂತನೆಯ ಜನರ ಸಹವಾಸವನ್ನು ಯಾವಾಗಲೂ ಒಪ್ಪಿಕೊಳ್ಳಬೇಕು. ನೀವು ಸಮಯ ಕಳೆಯುವ ಜನರು ನಿಮ್ಮ ಆಲೋಚನೆಗಳು ಮತ್ತು ದೃಷ್ಟಿಕೋನವನ್ನು ಪ್ರಭಾವಿಸಬಹುದು.

ಮತ್ತಷ್ಟು ಓದಿ: ಮನೆಗೆಲಸ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು! ಹೇಗೆ ಎಂದು ತಿಳಿದುಕೊಳ್ಳಿ

ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ
ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಮೊದಲು, ನಿಮ್ಮ ಬಗ್ಗೆ ನೀವು ಕಾಳಜಿವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪೌಷ್ಠಿಕಾಂಶಯುಕ್ತ ಆಹಾರ, ಆರೋಗ್ಯಕರ ಜೀವನಶೈಲಿ ನಿಮ್ಮದಾಗಬೇಕು, ಜತೆಗೆ ಸ್ವಲ್ಪ ವ್ಯಾಯಾಮ ಕೂಡ ದಿನದ ಒಂದು ಭಾಗವಾಗಿರಬೇಕು.

ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ
ನೀವು ತಪ್ಪು ಮಾಡಿದಾಗ ಅದು ನಿಮ್ಮ ಅರಿವಿಗೆ ಬಂದಾಗ ಮತ್ತೆ ತಪ್ಪಾಗದಂತೆ ಎಚ್ಚರವಹಿಸಿ.

ಸಕಾರಾತ್ಮಕ ಮಾತು
ನೀವಾಡುವ ಮಾತಿಗೆ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಕುಗ್ಗಿಸಲು ಎರಡೂ ಶಕ್ತಿಯೂ ಇದೆ, ಎಂದೂ ಬೇರೆಯವರಿಗೆ ನೋವಾಗುವಂತೆ ಮಾತನಾಡಬೇಡಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಕಾರಾತ್ಮಕ ಚರ್ಚೆ ಹಾಗೂ ಸಂಭಾಷಣೆ ಇರಲಿ, ಅದರೊಂದಿಗೆ ಮುನ್ನಡೆಯಿರಿ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us