ಗೊರಕೆ ಹೊಡೆಯುವ ಸಮಸ್ಯೆಯೂ ನಿಮಗಿದ್ದು ಬಿಟ್ಟರೆ, ಹೆಚ್ಚಿನ ಸಂದರ್ಭಗಳಲ್ಲಿ ಮುಜುಗರಕ್ಕೆ ಈಡಾಗುವ ಸನ್ನಿವೇಶವೇ ಹೆಚ್ಚು. ಅದರಲ್ಲಿ ಮನೆಗೆ ಯಾರದರೂ ಅತಿಥಿಗಳು ಬಂದು ಬಿಟ್ಟರೆ, ನಿಮ್ಮಿಂದ ಅವರಿಗೂ ನಿದ್ದೆ ಅನ್ನೋದೇ ಇಲ್ಲ. ಆದರೆ ಗೊರಕೆಯೂ ಉಸಿರುಗಟ್ಟುವಿಕೆ, ಬಾಯಿ, ಗಂಟಲು, ಆಯಾಸ, ಸ್ಥೂಲಕಾಯ, ಉಸಿರಿನ ಸಮಸ್ಯೆ ಹಾಗೂ ನಿದ್ರಾಹೀನತೆ ಸಮಸ್ಯೆಯ ಲಕ್ಷಣವು ಆಗಿರಬಹುದು. ಆದರೆ ಈ ಸಮಸ್ಯೆಯಿಂದ ಮುಜುಗರಕ್ಕೆ ಒಳಗಾಗುತ್ತಿದ್ದರೆ ಈ ಮನೆ ಮದ್ದನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಗೊರಕೆ ಸಮಸ್ಯೆ ನಿವಾರಣೆಗೆ ಸರಳ ಮನೆಮದ್ದುಗಳು
- ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ಒಂದು ಲೋಟ ನೀರಿಗೆ ಒಂದು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ದಿನನಿತ್ಯ ಕುಡಿಯುವುದರಿಂದ ಗೊರಕೆ ಸಮಸ್ಯೆ ದೂರವಾಗುತ್ತದೆ.
- ಗೊರಕೆ ಹೊಡೆಯುವವರು ಹಸುವಿನ ಹಾಲು ಕುಡಿಯುವ ಬದಲು ಸೋಯಾ ಹಾಲನ್ನು ಕುಡಿಯುವುದರಿಂದ ಪರಿಣಾಮಕಾರಿಯಾಗಿದೆ.
- ಮಲಗುವ ಮುನ್ನ ಸ್ವಲ್ಪ ಹಸಿ ಅವಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಂಡು ಮಲಗಿದರೆ ಗೊರಕೆಯೂ ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.
- ಒಂದು ಚಮಚ ಜೇನು ತುಪ್ಪ ಮತ್ತು ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಗೊರಕೆ ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
- ಗೊರಕೆ ಸಮಸ್ಯೆ ಇರುವವರು ಮಲಗುವ ಭಂಗಿಯನ್ನು ಬದಲಾಯಿಸುವುದು ಒಳ್ಳೆಯದು. ಮುಖವನ್ನು ಮೇಲಕ್ಕೆ ಮಾಡಿ ಮಲಗುವ ಬದಲು ಬಲಗಡೆ ಅಥವಾ ಎಡಗಡೆ ತಿರುಗಿ ಮಲಗಿದರೆ ಈ ಸಮಸ್ಯೆಯೂ ಕಾಡುವುದಿಲ್ಲ.
- ದಿನಕ್ಕೆ ಎರಡು ಬಾರಿ ಶುಂಠಿ ಹಾಗೂ ಜೇನುತುಪ್ಪದ ಚಹಾ ಮಾಡಿ ಕುಡಿಯುವುದರಿಂದ ನಿದ್ರೆಯ ವೇಳೆ ಗೊರಕೆ ಸಮಸ್ಯೆಯನ್ನು ತಪ್ಪಿಸಬಹುದು.
- ಗೊರಕೆಯಿಲ್ಲದೆ ಉತ್ತಮ ನಿದ್ದೆ ಮಾಡಲು ಆಹಾರದಲ್ಲಿ ಹೆಚ್ಚು ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ.
- ಮಲಗುವ ಮುನ್ನ ಕಾಫಿ ಅಥವಾ ಟೀ ಕುಡಿದು ಮಲಗಿದರೆ ಗೊರಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯಗತ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: