AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Teachers’ Day 2025: ಶಿಕ್ಷಕರ ದಿನಾಚರಣೆಯಂದು ನಿಮ್ಮ ನೆಚ್ಚಿನ ಗುರುಗಳಿಗೆ ಈ ಗಿಫ್ಟ್‌ ನೀಡಿ

ಪ್ರತಿಯೊಬ್ಬರಿಗೂ ಒಬ್ರು ನೆಚ್ಚಿನ ಗುರುಗಳು ಇದ್ದೇ ಇರುತ್ತಾರೆ. ಕೆಲವರಿಗೆ ಶಾಲೆಯಲ್ಲಿ ಶಿಕ್ಷಕರು ಫೆವರೆಟ್‌ ಆದ್ರೆ ಇನ್ನೂ ಕೆಲವರಿಗೆ ಡ್ಯಾನ್ಸ್‌ ಟೀಚರ್‌, ಸಂಗೀತ ಗುರುಗಳು , ಡ್ರಾಯಿಂಗ್‌ ಕ್ಲಾಸ್‌ ಟೀಚರ್‌ ಅಂದ್ರೆ ಅಚ್ಚುಮೆಚ್ಚು ಆಗಿರ್ತಾರೆ. ನಿಮಗೂ ಯಾರಾದ್ರೂ ನೆಚ್ಚಿನ ಗುರುಗಳಿದ್ದಾರಾ? ಹಾಗಿದ್ರೆ ನಿಮ್ಮ ಪ್ರೀತಿಯ, ನೆಚ್ಚಿನ ಗುರುಗಳಿಗೆ ಈ ಅರ್ಥಪೂರ್ಣ ಉಡುಗೊರೆಗಳನ್ನು ನೀಡಿ, ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಬಹಳ ವಿಶೇಷವಾಗಿ ಆಚರಿಸಿ.

Teachers' Day 2025: ಶಿಕ್ಷಕರ ದಿನಾಚರಣೆಯಂದು ನಿಮ್ಮ ನೆಚ್ಚಿನ ಗುರುಗಳಿಗೆ ಈ ಗಿಫ್ಟ್‌ ನೀಡಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Sep 04, 2025 | 9:05 AM

Share

ಪ್ರತಿವರ್ಷ ಸೆಪ್ಟೆಂಬರ್‌ 05 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು (Teachers’ Day) ಆಚರಿಸಲಾಗುತ್ತದೆ. ಈ ದಿನ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇನ್ನೂ ಪ್ರತಿಯೊಬ್ಬರೂ ಕೂಡ ತಮಗೆ ಮಾರ್ಗದರ್ಶನ ನೀಡಿದ, ಬದುಕಿಗೆ ದಾರಿ ದೀಪವಾದ, ನೈತಿಕ ಶಿಕ್ಷಣ ನೀಡಿದ, ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸಿದ ತಮ್ಮ ನೆಚ್ಚಿನ ಗುರುಗಳನ್ನು ನೆನೆಯುತ್ತಾರೆ, ಅವರಿಗೆ ಗೌರವವನ್ನೂ ಸಲ್ಲಿಸುತ್ತಾರೆ. ನಿಮಗೂ ಯಾರಾದ್ರೂ ನೆಚ್ಚಿನ ಗುರುಗಳಿದ್ದಾರಾ? ಹಾಗಿದ್ರೆ ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ಆ ನಿಮ್ಮ ನೆಚ್ಚಿನ ಗುರುಗಳಿಗೆ ಈ ಒಂದಷ್ಟು ಸ್ಪೆಷಲ್‌ ಉಡುಗೊರೆಯನ್ನು (Teachers’ Day gift ideas) ನೀಡುವ ಮೂಲಕ ಟೀಚರ್ಸ್‌ ಡೇ ಯನ್ನು ವಿಶೇಷವಾಗಿ ಆಚರಿಸಿ.

ಶಿಕ್ಷಕರ ದಿನಾಚರಣೆಯಂದು ನಿಮ್ಮ ಗುರುಗಳಿಗೆ ಈ ಉಡುಗೊರೆ ನೀಡಿ:

ಹೂವಿನ ಗಿಡ: ನಿಮ್ಮ ನೆಚ್ಚಿನ  ಗುರುಗಳಿಗೆ ಹೂವಿನ ಗಿಡವನ್ನು ಗಿಫ್ಟ್‌ ಆಗಿ ನೀಡಬಹುದು. ಯಾಕೆಂದ್ರೆ ಪ್ರತಿದಿನ ಗಿಡಕ್ಕೆ ನೀರು ಹಾಕಿ ಪೋಷಿಸುವಾಗ ನಿಮ್ಮ ಗುರುಗಳು ನಿಮ್ಮನ್ನು ನೆಪಸಿಕೊಳ್ಳುತ್ತಾರೆ. ಹಾಗಾಗಿ ಒಂದು ಸುಂದರ ಹೂವಿನ ಗಿಡವನ್ನು ಉಡುಗೊರೆಯಾಗಿ ನೀಡಬಹುದು. ಇಲ್ಲವೆ ಗುರುಗಳ ಹೆಸರಿನಲ್ಲಿ ನೀವೇ ಒಂದು ಗಿಡವನ್ನು ನೆಡಬಹುದು.

ಫೋಟೋ ಕೊಲಾಜ್:‌ ಫೋಟೋಗಳು ನಮ್ಮ ಅನೇಕ ನೆನಪುಗಳನ್ನು ರಿಫ್ರೆಶ್‌ ಮಾಡಲು ಸಹಾಯ ಮಾಡುತ್ತದೆ. ಹೀಗಿರುವಾಗ ನೀವು ನಿಮ್ಮ ಗುರುಗಳಿಗೆ ಫೋಟೋ ಫ್ರೇಮ್‌ ಉಡುಗೊರೆಯಾಗಿ ನೀಡಬಹುದು. ಹೌದು ನೀವು ನಿಮ್ಮ ಗುರುಗಳೊಂದಿಗೆ ತೆಗೆಸಿಕೊಂಡಂತಹ ಫೋಟೋಗಳನ್ನು ಕೊಲಾಜ್‌ ಮಾಡಿ, ಚಂದದ ಫ್ರೇಮ್‌ ಮಾಡಿ ಗುರುಗಳಿಗೆ ನೀಡಬಹುದು.

ಪುಸ್ತಕ: ನಿಮ್ಮ ಗುರುಗಳಿಗೆ ಪುಸ್ತಕ ಓದುವುದು ಇಷ್ಟ ಎಂದಾದ್ರೆ ನೀವು ಅವರಿಗೆ ಅವರಿಗೆ ಒಳ್ಳೊಳ್ಳೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಈ ಅರ್ಥಪೂರ್ಣ ಉಡುಗೊರೆ ಖಂಡಿತವಾಗಿಯೂ ನಿಮ್ಮ ಗುರುಗಳಿಗೆ ಇಷ್ಟವಾಗುತ್ತದೆ.

ಕಾಫಿ ಮಗ್:‌ ನೀವು ನಿಮ್ಮ ಗುರುಗಳಿಗೆ ಸುಂದರವಾದ ಕಾಫಿ ಮಗ್‌ ಉಡುಗೊರೆಯಾಗಿ ನೀಡಬಹುದು. ಅದರಲ್ಲೂ ನಿಮ್ಮ ಗುರುಗಳ ಫೋಟೋವನ್ನು ಮಗ್‌ನಲ್ಲಿ ಮುದ್ರಣ ಮಾಡಿ ಅದನ್ನು ಕಸ್ಟಮೈಸ್ಡ್‌ ಮಾಡಬಹುದು.

ಹ್ಯಾಂಡ್‌ ಬ್ಯಾಗ್‌, ಪೆನ್‌ ಸ್ಟ್ಯಾಂಡ್: ಇದು ಕೂಡ ಒಂದೊಳ್ಳೆ ಗಿಫ್ಟ್‌ ಆಯ್ಕೆಯಾಗಿದೆ. ನೀವು ನಿಮ್ಮ ಗುರುಗಳಿಗೆ ಲ್ಯಾಪ್‌ಟಾಪ್‌ ಬ್ಯಾಗ್‌ ಅಥವಾ ಹ್ಯಾಂಡ್‌ಬ್ಯಾಗ್‌ ಉಡುಗೊರೆಯಾಗಿ ನೀಡಬಹುದು. ಇಲ್ಲವೇ ನಿಮ್ಮ ಶಿಕ್ಷಕರಿಗೆ ಪೆನ್‌ ಇಡಲು ಕ್ಯೂಟ್‌ ಕ್ಯೂಟ್‌ ಆಗಿರುವಂತಹ ಪೆನ್‌ ಸ್ಟ್ಯಾಂಡ್‌ ಕೂಡ ಉಡುಗೊರೆಯಾಗಿ ನೀಡಬಹುದು.

ಇದನ್ನೂ ಓದಿ: ನಾಲ್ಕು ಅಭ್ಯಾಸಗಳೇ ಜೀವನದ ಎಲ್ಲಾ ದುಃಖ, ನೋವನ್ನು ದೂರ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

DIY ಉಡುಗೊರೆ:  ಏನಾದ್ರೂ ಸ್ಪೆಷಲ್‌ ಆಗಿರುವಂತಹದ್ದನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮ ಗುರುಗಳಿಗೆ ನೀಡ ಬಯಸಿದರೆ ನೀವು ನಿಮ್ಮ ಕೈಯಾರೆ ತಯಾರಿಸಿದಂತಹ ವಸ್ತುಗಳನ್ನು ಗಿಫ್ಟ್‌ ಮಾಡಬಹುದು. ಇವುಗಳು ಸಣ್ಣದಾಗಿದ್ದರೂ ಕೂಡಾ ಮನಸ್ಸಿಗೆ ತುಂಬಾ ಹತ್ತಿರವಾಗುವಂತಹ ಉಡುಗೊರೆ ಆಯ್ಕೆಯಾಗಿದೆ.

ಪೆನ್‌ ಮತ್ತು ಡೈರಿ: ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಪೆನ್‌ ಮತ್ತು ಡೈರಿಯಂತಹ ಉಡುಗೊರೆಗಳನ್ನು ತಮ್ಮ ಶಿಕ್ಷಕರಿಗೆ ನೀಡಬಹುದು. ಹೌದು ಈ ವಸ್ತುಗಳನ್ನು ಶಿಕ್ಷಕರು ತಮ್ಮ ದೈನಂದಿನ ಜೀವನದಲ್ಲಿ ಬಳಸಿಕೊಳ್ಳುವ ಕಾರಣ ಪೆನ್ನು, ಲೇಖನ ಸಾಮಾಗ್ರಿಗಳ ಸೆಟ್‌ ಮತ್ತು ಅದರೊಂದಿಗೆ ಸುಂದರವಾದ ಡೈರಿಯನ್ನು ಉಡುಗೊರೆಯಾಗಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ