Kannada News Lifestyle Tech Tips How to Save LPG gas while cooking gas cylinder at home?: Here is the tricks
Tech Tips: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿ ಆಗುತ್ತಾ?: ಈ ಟ್ರಿಕ್ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಿ
ಇಂದು ಸೌದೆ ಒಲೆಯಲ್ಲಿ ಅಡುಗೆ ಮಾಡುವವರು ಸಂಖ್ಯೆ ತೀರಾ ಕಡಿಮೆ. ಹೆಚ್ಚಿನವರು ಗ್ಯಾಸ್ ಸಿಲಿಂಡರ್ ಮೂಲಕವೇ ಎಲ್ಲವನ್ನು ಬೇಯಿಸಿ ಕುಕ್ ಮಾಡುತ್ತಾರೆ. ಆದರೆ, ಗ್ಯಾಸ್ ಬೇಗನೆ ಖಾಲಿ ಆಗುತ್ತಿದೆ ಎಂಬುದು ಅನೇಕ ಮಹಿಳೆಯರ ಕೂಗು. ಹಾಗಾದರೆ, ಅನಿಲವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ಕೆಲವೊಂದು ಟ್ರಿಕ್ ನಾವು ಹೇಳುತ್ತೇವೆ ಕೇಳಿ.
ಸಾಂದರ್ಭಿಕ ಚಿತ್ರ
Follow us on
ಗ್ಯಾಸ್ ಸಿಲಿಂಡರ್ ಅನ್ನು ಇಂದಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಬ್ಬರ ಬಳಿಯೂ ಅಡುಗೆ ಅನಿಲ ಸಿಲಿಂಡರ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಸೌದೆ ಒಲೆಯಲ್ಲಿ ಅಡುಗೆ ಕಾಲ ಮರೆಯಾಗಿದ್ದು, ಗ್ಯಾಸ್ ಅನ್ನೇ ಬಳಸುತ್ತಿದ್ದಾರೆ. ಆದರೆ ಗ್ಯಾಸ್ ಸಿಲಿಂಡರ್ ಬೇಗನೇ ಖಾಲಿಯಾಗುವ ಸಮಸ್ಯೆ ಹೆಚ್ಚಿನವರು ಎದುರಿಸುತ್ತಿದ್ದಾರೆ. ನಿಮಗು ಕೂಡ ಇದೇ ಸಮಸ್ಯೆ ಆಗುತ್ತಿದ್ದರೆ ಕೆಲವು ತಂತ್ರಗಳನ್ನು ಅನುಸರಿಸಿ ಅನಿಲವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಅದು ಹೇಗೆ?, ನೋಡೋಣ.
ಬರ್ನರ್: ಅಡುಗೆ ಮಾಡುವಾಗ ಹಲವರಿಗೆ ಬರ್ನರ್ ಅನ್ನು ಮೇಲಕ್ಕೆ ತಿರುಗಿಸುವ ಅಭ್ಯಾಸವಿರುತ್ತದೆ. ಇದರಿಂದಾಗಿ ನಿಮ್ಮ ಗ್ಯಾಸ್ ಬೇಗನೆ ಖಾಲಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ನೀವು ಏನನ್ನಾದರೂ ಬಿಸಿಮಾಡಲು ಅಥವಾ ಬೇಯಿಸಲು ಬಯಸಿದರೆ, ಕೆಳಭಾಗವು ಸುಡುವಂತೆ ಬರ್ನರ್ ಅನ್ನು ತಿರುಗಿಸಿ. ಇದರಿಂದ ಎಲ್ ಪಿಜಿ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ನಿಮ್ಮ ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಕಾಲಕಾಲಕ್ಕೆ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಇದಕ್ಕಾಗಿ ನಿಮ್ಮ ಅನಿಲದ ಬೆಂಕಿಯ ಬಣ್ಣವನ್ನು ಗಮನಿಸುವುದರ ಮೂಲಕ ತಿಳಿಯಬಹುದು. ಅನಿಲ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲದಿದ್ದರೆ ಕೆಂಪು/ಹಳದಿ/ಕಿತ್ತಳೆ ಬಣ್ಣ ಬಂದರೆ ನಿಮ್ಮ ಬರ್ನರ್ ಸ್ವಚ್ಛವಾಗಿಲ್ಲ ಎಂದರ್ಥ.
ಪಾತ್ರೆ ಒದ್ದೆಯಾಗಿರಬಾರದು: ಅಡುಗೆ ಮಾಡಲು ಪಾತ್ರೆಯನ್ನು ಬರ್ನರ್‌ನಲ್ಲಿ ಇರಿಸುವಾಗ ಒಣಗಿರಬೇಕು. ಅದರಲ್ಲಿ ನೀರಿನ ಅಂಶ ಇದ್ದರೆ ಆವಿಯಾಗಲು ಸಮಯ ತೆಗೆದುಕೊಳ್ಳಬಹುದು. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ಬೆಂಕಿಯನ್ನು ಕಡಿಮೆ ಮಾಡಬಹುದು. ಹೆಚ್ಚಿನ ಬೆಂಕಿ ಹೆಚ್ಚು ಅನಿಲವನ್ನು ಬಳಸುತ್ತದೆ.
ಪ್ರೆಶರ್ ಕುಕ್ಕರ್: ಪ್ರೆಶರ್ ಕುಕ್ಕರ್ ಬಳಸುವುದರಿಂದ ಗ್ಯಾಸ್ ಉಳಿತಾಯ ಮಾಡಬಹುದು. ಓಪನ್-ಪಾಸ್ ಅಡುಗೆಗೆ ಹೋಲಿಸಿದರೆ ಒತ್ತಡದ ಸ್ಟೀಮ್ ಆಹಾರವು ವೇಗವಾಗಿ ಬೇಯಿತ್ತದೆ. ಇದರಿಂದ ಗ್ಯಾಸ್ ಉಳಿತಾಯವೂ ಆಗುತ್ತದೆ.
ಗ್ಯಾಸ್ ಲೀಕ್: ಸಾಮಾನ್ಯವಾಗಿ ಕೆಲವು ಸಿಲಿಂಡರ್ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕ್ ಆಗಿರುತ್ತದೆ. ಗ್ಯಾಸ್ ರೆಗ್ಯುಲೇಟರ್, ಪೈಪ್, ಬರ್ನರ್ ಪರಿಶೀಲಿಸಬೇಕು. ಹಾನಿಗೊಳಗಾದ ಗ್ಯಾಸ್ ಲೈನ್ ನೀವು ಅಡುಗೆ ಮಾಡದಿದ್ದರೂ ಸಹ ಅನಿಲವನ್ನು ವ್ಯರ್ಥ ಮಾಡಬಹುದು. ಇದು ಅಪಘಾತಗಳಿಗೂ ಕಾರಣವಾಗಬಹುದು.
ನೆನೆಸುವುದು: ಅಕ್ಕಿ ಮತ್ತು ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಹಾಗೆ ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ. ಇದು ಸಿಲಿಂಡರ್ ಅನ್ನು ಉಳಿಸುತ್ತದೆ.
ಫ್ರಿಡ್ಜ್ ನಲ್ಲಿರುವ ಸಾಮಾಗ್ರಿಗಳು: ನಮ್ಮಲ್ಲಿರುವ ದೊಡ್ಡ ಅಭ್ಯಾಸವೆಂದರೆ ಎಲ್ಲವನ್ನೂ ಫ್ರಿಜ್ ನಲ್ಲಿಡುವುದು. ಉದಾಹರಣೆಗೆ ಹಾಲು. ಅದನ್ನು ಫ್ರಿಡ್ಜ್ನಿಂದ ತೆಗೆದು ನೇರವಾಗಿ ಕುದಿಸಲು ಇಡಬೇಡಿ. ಆಗ ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಡುಗೆಗೆ ಬೇಕಾದ ಸಾಮಾಗ್ರಿಗಳು ಫ್ರಿಡ್ಜ್ ನಲ್ಲಿದ್ದರೆ ಮೊದಲು ಹೊರ ತೆಗೆಯಬೇಕು. ಕೂಲಿಂಗ್ ಕಡಿಮೆಯಾಗುವವರೆಗೆ ಸಮಯ ತೆಗೆದುಕೊಂಡು ನಂತರ ಬೆಚ್ಚಗಾಗಲು ಇಟ್ಟರೆ ಬೇಗನೆ ಕುದಿಯುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ