ಮೂಡ್​ ಹಾಳಾಗಲು ನೀವು ಸೇವಿಸಿದ ಆಹಾರವೂ ಕಾರಣವಾಗಿರಬಹುದು

| Updated By: Pavitra Bhat Jigalemane

Updated on: Jan 08, 2022 | 9:05 AM

ಅತಿಯಾದ ಸಕ್ಕರೆಯುಕ್ತ ಆಹಾರ ಸೇವಿಸಿದರೆ ಕರುಳಿನ ಸೂಕ್ಷ್ಮಾಣುಜೀವಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದು ಮನಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.

ಮೂಡ್​ ಹಾಳಾಗಲು ನೀವು ಸೇವಿಸಿದ ಆಹಾರವೂ ಕಾರಣವಾಗಿರಬಹುದು
ಸಾಂಕೇತಿಕ ಚಿತ್ರ
Follow us on

ಆರೋಗ್ಯವನ್ನು ಕಾಪಾಡಿಕೊಳ್ಳಲು ಡಯೆಟ್​ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಯಾವ ಆಹಾರ  ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ತಿಂದರೆ ಮಾತ್ರ ದೇಹ ಆರೊಗ್ಯಯುತವಾಗಿರುತ್ತದೆ. ನೀವು ತಿನ್ನುವ ಆಹಾರದ ಆಧಾರದ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಅದೇ ರೀತಿ ನಿಮ್ಮ ಆಹಾರ ಪದ್ಧತಿಯಿಂದಲೇ ಮೂಡ್​ ಅಥವಾ ಮನಸ್ಥಿತಿ ಕೂಡ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು. ಕೆಲವೊಮ್ಮೆ ಯಾಕೋ ಇವತ್ತು ಮೂಡ್​ ಸರಿ ಇಲ್ಲ ಎನ್ನುತ್ತೇವೆ. ಇದಕ್ಕೆ ಹಲವು ಕಾರಣಗಳಿರಬಹುದು. ಅದರಲ್ಲಿ ನೀವು ಸೇವಿಸಿದ ಆಹಾರ ಕೂಡ ಒಂದು. ದೇಹದಲ್ಲಿ ಜಡ ಆವರಿಸಿಯೋ ಅಥವಾ ಇನ್ನಿತರ  ಅರೋಗ್ಯ ಸಮಸ್ಯೆ ಉಂಟಾಗಿ ಇಡೀ ದಿನದ ಮೂಡ್​ ಕೆಡುತ್ತದೆ. ಹಾಗಾದರೆ ಯಾವೆಲ್ಲ ಆಹಾರಗಳ ಸೇವನೆಯಿಂದ ನಿಮ್ಮ ಮೂಡ್​​ ಕೆಡಬಹುದು ಎಂದು ಯೋಚಿಸುತ್ತಿದ್ದಿರಾ? ಇಲ್ಲಿದೆ ಮಾಹಿತಿ

ಸಕ್ಕರೆಯುಕ್ತ ಆಹಾರ
ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ಮೂಡ್​ನ್ನು ಕೆಡಿಸಬಹುದು. ಸಕ್ಕರೆಯುಕ್ತ ಸಿಹಿ ಆಹಾರಗಳನ್ನು ತ್ಯಜಿಸುವುದು ಅಷ್ಟು ಸುಲಭವಲ್ಲ. ಆದರೂ  ಆ ರೀತಿಯ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಅತಿಯಾದ ಸಕ್ಕರೆಯುಕ್ತ ಆಹಾರ ಸೇವಿಸಿದರೆ ಕರುಳಿನ ಸೂಕ್ಷ್ಮಾಣುಜೀವಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದು ಮನಸ್ಥಿತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ.

ಅಂಟಿನ ಆಹಾರ
ಹೊಟ್ಟೆಯಲ್ಲಿ ರಬ್ಬರ್​ನಂತೆ ಸಿಲುಕಿಕೊಳ್ಳುವ ಮೈದಾದಂತಹ ಅಂಟಿನ ಆಹಾರಗಳನ್ನು ಸೇವಿಸಬೇಡಿ. ಇವು ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆ ಉಂಟು ಮಾಡಿ ನಿಮ್ಮ  ಮನಸ್ಥಿತಿಯನ್ನು ಕೆಡಿಸಬಹುದು. ಅಲ್ಲದೆ  ದೇಹದಲ್ಲಿನ ಉಷ್ಣತೆಯನ್ನು ಹೆಚ್ಚು ಮಾಡಿ ಕಿರಿಕಿರಿ ಉಂಟು ಮಾಡುತ್ತವೆ.

ಫ್ರೆಂಚ್​ ಫ್ರೈಸ್​
ಆಲೂಗಡ್ಡೆಯಿಂದ ತಯಾರಿಸುವ, ಬಾಯಲ್ಲಿ ನೀರೂರಿಸುವ ತಿಂಡಿ ಎಂದರೆ ಅದು ಫ್ರೆಂಚ್​ ಫ್ರೈಸ್​. ಇದರಲ್ಲಿ ಬಳಸುವ ಅತಿಯಾದ ಉಪ್ಪು ಮತ್ತು ಎಣ್ಣೆಯಲ್ಲಿ ಕರಿದ ಪರಿಣಾಮ ನಿಮ್ಮ ಆರೋಗ್ಯ ಹದಗೆಟ್ಟು ಮೂಡ್​ ಕೂಡ ಕೆಡಬಹುದು. ಆದ್ದರಿಂದ ಫ್ರೆಂಚ್​ ಫ್ರೈಸ್​ ಸೇವನೆಗೆ ಆದಷ್ಟು ಕಡಿವಾಣವಿರಲಿ. ನೆನಪಿಡಿ ಹಸಿದ ಹೊಟ್ಟೆಯಲ್ಲಿ ಮಾತ್ರ ಫ್ರೆಂಚ್​ ಫ್ರೈಸ್​ ಅನ್ನು ಸೇವಿಸಲೇಬೇಡಿ.

ಸಂಸ್ಕರಿಸಿದ ಆಹಾರಗಳು
ದಿನನಿತ್ಯ ಬಳಸುವ ಬಿಸ್ಕತ್​, ಚೀಸ್​ನಂತಹ ಸಂಸ್ಕರಿಸಿದ ಆಹಾರಗಳು ನಿಮ್ಮನ್ನು ಖಿನ್ನತೆಗೆ ದೂಡಬಹುದು. ಅಲ್ಲದೆ ದೀರ್ಘಕಾಲ ಸಂಸ್ಕರಿಸಿದ ಆಹಾರ ಸೇವೆನೆಯಿಂದ ಆರೋಗ್ಯ ಕೆಟ್ಟು ನಿಮ್ಮ ಮೂಡ್​ ಕೂಡ ಹಾಳಾಗುತ್ತದೆ. ಇವು ನಿಮ್ಮ ಆರೋಗ್ಯಕ್ಕೂ ಒಳಿತಲ್ಲ.

ಅನ್ನ
ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೆಟ್​ ಆಹಾರ ಸೇವನೆ ನಿಮ್ಮ ಮೂಡ್​ಅನ್ನು ಹಾಳುಮಾಡುತ್ತದೆ. ಅದರಲ್ಲಿ ಅನ್ನ ಕೂಡ ಒಂದು. ಹೀಗಾಗಿ ಅತಿಯಾದ ಅನ್ನದ ಸೇವನೆಯಿಂದಲೂ ನಿಮ್ಮ ಮೂಡ್​ ಹಾಳಾಗುತ್ತದೆ. ಆದ್ದರಿಂದ ಮಿತವಾದ ಅನ್ನದ ಸೇವನೆ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗಿದೆ.

ಇದನ್ನೂ ಓದಿ:

Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ