ಈ ಎರಡು ಭಾರತೀಯ ತಾಣಗಳು ಟೈಮ್‌​ನ ‘2023 ರ ವಿಶ್ವದ ಶ್ರೇಷ್ಠ ಸ್ಥಳಗಳ’ ಪಟ್ಟಿಯಲ್ಲಿ ಸೇರಿವೆ

|

Updated on: Mar 19, 2023 | 6:14 PM

ವಿಶ್ವದ ಶ್ರೇಷ್ಠ ಸ್ಥಳ 2023 ಪಟ್ಟಿ 50 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಎರಡು ಭಾರತೀಯ ಸ್ಥಳಗಳಾದ ಮಯೂರ್‌ಭಂಜ್ ಮತ್ತು ಲಡಾಖ್ ಸೇರಿವೆ.

ಈ ಎರಡು ಭಾರತೀಯ ತಾಣಗಳು ಟೈಮ್‌​ನ  2023 ರ ವಿಶ್ವದ ಶ್ರೇಷ್ಠ ಸ್ಥಳಗಳ ಪಟ್ಟಿಯಲ್ಲಿ ಸೇರಿವೆ
Ladakh, Mayurbhanj
Follow us on

ಟೈಮ್ ಮ್ಯಾಗಜಿನ್ (TIME Magazine) 2023 ರ ‘ವಿಶ್ವದ ಶ್ರೇಷ್ಠ ಸ್ಥಳಗಳ’ (World’s Greatest Places 2023) ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 50 ತಾಣಗಳನ್ನು ಹೊಂದಿರುವ ಈ ಪಟ್ಟಿಯಲ್ಲಿ ಎರಡು ಭಾರತೀಯ ಸ್ಥಳಗಳಾದ ಮಯೂರ್‌ಭಂಜ್ (Mayurbhanj) ಮತ್ತು ಲಡಾಖ್ (Ladakh) ಸೇರಿವೆ, ಇಲ್ಲಿನ ಅಪರೂಪದ ಹುಲಿಗಳು, ಪ್ರಾಚೀನ ದೇವಾಲಯಗಳು, ಆಹಾರ ಮತ್ತು ಸಾಹಸ ಕ್ರೀಡೆಗಳಿಗಾಗಿ ಆಯ್ಕೆ ಮಾಡಲಾಗಿದೆ. ಟೈಮ್ ಮ್ಯಾಗಜೀನ್ ಲಡಾಖ್ ಮತ್ತು ಮಯೂರ್‌ಭಂಜ್‌ಗಾಗಿ ಪ್ರೊಫೈಲ್ ಪುಟಗಳನ್ನು ರಚಿಸಿದೆ, ಈ ಪ್ರೊಫೈಲ್​ನಲ್ಲಿ ಈ ಎರಡು ಸ್ಥಳಗಳು ತಮ್ಮ ಪ್ರತಿಷ್ಠಿತ ಪಟ್ಟಿಯ ಭಾಗವಾಗಲು ಇದ್ದ ಕಾರಣಗಳನ್ನು ಹೈಲೈಟ್ ಮಾಡಿದೆ.

“2023 ರಲ್ಲಿ ಪ್ರವಾಸೋದ್ಯಮವು ಸಂಪೂರ್ಣವಾಗಿ ಚೇತರಿಸಿಕೊಂಡಿದೆ, ನಾವು ಹೇಗೆ ಮತ್ತು ಎಲ್ಲಿ ಅಲೆದಾಡುತ್ತೇವೆ ಎಂಬುದರಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಸುಸ್ಥಿರತೆಯ ಮೇಲೆ ಹೆಚ್ಚಿದ ಕ್ರಯ ಮತ್ತು ಆಸಕ್ತಿಯು ಪ್ರವಾಸೋದ್ಯಮವನ್ನು ಮರುರೂಪಿಸುತ್ತಿದೆ” ಎಂದು ಪತ್ರಿಕೆ ಹೇಳಿದೆ.

ಲಡಾಖ್:

“ಬೆರಗುಗೊಳಿಸುವ ಆಲ್ಪೈನ್ ಭೂದೃಶ್ಯಗಳು ಮತ್ತು ಟಿಬೆಟಿಯನ್ ಬೌದ್ಧ ಸಂಸ್ಕೃತಿಯೊಂದಿಗೆ, ಉತ್ತರ ಭಾರತದ ಅತ್ಯಂತ ದೂರದ ಭಾಗದಲ್ಲಿರುವ ಲಡಾಖ್ ಅನೇಕ ಬಾರಿ ಪ್ರಯಾಣ ಬೆಳೆಸಲು ಸಾಕಷ್ಟು ಅದ್ಭುತಗಳನ್ನು ಮತ್ತು ಕಾರಣಗಳನ್ನು ಹೊಂದಿದೆ,” ಎಂದು ಪತ್ರಿಕೆ ತಿಳಿಸಿದೆ.

2023 ರಲ್ಲಿ, ಭಾರತವು ತನ್ನ ಮೊದಲ ಡಾರ್ಕ್ ಸ್ಕೈ ರಿಸರ್ವ್ ಅನ್ನು ಲಡಾಖ್‌ನ ರಾಜಧಾನಿ ಲೇಹ್‌ನಿಂದ ಆಗ್ನೇಯಕ್ಕೆ 168 ಮೈಲಿ ದೂರದಲ್ಲಿರುವ ಹಾನ್ಲೆ ಗ್ರಾಮದಲ್ಲಿ ಪ್ರಾರಂಭಿಸಿದೆ. ಈ ಗ್ರಾಮವು ವರ್ಷಕ್ಕೆ ಸರಿಸುಮಾರು 270 ಪ್ರಶುಭ್ದ ರಾತ್ರಿಗಳನ್ನು ಹೊಂದಿದೆ, ಇದು ಖಗೋಳ ವೈಭವಕ್ಕೆ ಸೂಕ್ತವಾದ ಜಾಗ ಎಂದು ಟೈಮ್ ಮ್ಯಾಗಜಿನ್ ಹೇಳಿದೆ.

ಟೈಮ್ ಮ್ಯಾಗಜೀನ್​ನಲ್ಲಿ ಲಡಾಖ್‌ನಲ್ಲಿರುವಾಗ ನೀವು ಉಳಿದುಕೊಳ್ಲಲು ಕೆಲವೊಂದು ಸುಸ್ಥಿರ ಜಾಗಗಳನ್ನು ಶಿಫಾರಸು ಮಾಡಿದೆ – ನುಬ್ರಾ ಕಣಿವೆಯಲ್ಲಿರುವ ಕ್ಯಾಗರ್ ಹೋಟೆಲ್, ಶೆಲ್ ಲಡಾಖ್ ಮತ್ತು ಲೇಹ್‌ನ ದೋಲ್ಖರ್ ಜಾಗಗಳು ಈ ಪಟ್ಟಿಯಲ್ಲಿ ಸೇರಿವೆ.

ಇದನ್ನೂ ಓದಿ: ಟ್ರೆಕ್ಕಿಂಗ್​​ ಅಥವಾ ದೂರ ಪ್ರಯಾಣ ಮಾಡುವಾಗ ಈ ಆಹಾರಗಳಿಂದ ದೂರವಿರಿ

ಮಯೂರ್‌ಭಂಜ್:

ಒಡಿಶಾ ರಾಜ್ಯದಲ್ಲಿರುವ ಮಯೂರ್‌ಭಂಜ್, ಅತ್ಯಂತ ಅಪರೂಪದ ಕಪ್ಪು ಹುಲಿಯನ್ನು ಗುರುತಿಸಲು ಭೂಮಿಯ ಮೇಲಿನ ಏಕೈಕ ಸ್ಥಳವಾಗಿದೆ. ಪ್ರಸಿದ್ಧ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದ ಹೊರತಾಗಿ, ಈ ಜಿಲ್ಲೆಯಲ್ಲಿ ನೀವು ಇನ್ನೂ ಅದ್ಭುತ ಸ್ಥಳಗಳನ್ನು ನೋಡಬಹದು.

“ಕರೋನಾದ ಬಳಿಕ ಈ ಏಪ್ರಿಲ್‌ನಲ್ಲಿ,ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿರುವ ‘ಮಯೂರ್‌ಭಂಜ್ ಛೌ’, ಆಕರ್ಷಕ ನೃತ್ಯ ಉತ್ಸವವು ಅತಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ” ಎಂದು ಟೈಮ್ ಉಲ್ಲೇಖಿಸಿದೆ.

ಕಳೆದ ವರ್ಷ, TIME ನ ‘2022 ರ ವಿಶ್ವದ ಶ್ರೇಷ್ಠ ಸ್ಥಳಗಳು’ ಪಟ್ಟಿಯಲ್ಲಿ ಕೇರಳ ಮತ್ತು ಅಹಮದಾಬಾದ್, ಭಾರತೀಯ ತಾಣಗಳು ಸೇರಿದ್ದವು.

2023 ರ ‘ವಿಶ್ವದ ಶ್ರೇಷ್ಠ ಸ್ಥಳಗಳು’ ಸಂಪೂರ್ಣ ಪಟ್ಟಿ:

  1. ಟ್ಯಾಂಪಾ, ಫ್ಲೋರಿಡಾ
  2. ವಿಲ್ಲಾಮೆಟ್ ವ್ಯಾಲಿ, ಒರೆಗಾನ್
  3. ರಿಯೊ ಗ್ರಾಂಡೆ, ಪಿ.ಆರ್.
  4. ಟಕ್ಸನ್, ಅರಿಜೋನಾ
  5. ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನ, ಕ್ಯಾಲಿಫೋರ್ನಿಯಾ
  6. ಬೋಝೆಮನ್, ಮೊಂಟಾನಾ
  7. ವಾಷಿಂಗ್ಟನ್, ಡಿ.ಸಿ.
  8. ವ್ಯಾಂಕೋವರ್
  9. ಚರ್ಚಿಲ್, ಮ್ಯಾನಿಟೋಬಾ
  10. ಡಿಜಾನ್, ಫ್ರಾನ್ಸ್
  11. ಪ್ಯಾಂಟೆಲೆರಿಯಾ, ಇಟಲಿ
  12. ನೇಪಲ್ಸ್, ಇಟಲಿ
  13. ಆರ್ಹಸ್, ಡೆನ್ಮಾರ್ಕ್
  14. ಸೇಂಟ್ ಮೊರಿಟ್ಜ್, ಸ್ವಿಟ್ಜರ್ಲೆಂಡ್
  15. ಬಾರ್ಸಿಲೋನಾ
  16. ಟಿಮಿಸೋರಾ, ರೊಮೇನಿಯಾ
  17. ಸಿಲ್ಟ್, ಜರ್ಮನಿ
  18. ಬೆರಾಟ್, ಅಲ್ಬೇನಿಯಾ
  19. ಬುಡಾಪೆಸ್ಟ್
  20. ವಿಯೆನ್ನಾ
  21. ಬ್ರಿಸ್ಬೇನ್, ಆಸ್ಟ್ರೇಲಿಯಾ
  22. ಕಾಂಗರೂ ದ್ವೀಪ, ಆಸ್ಟ್ರೇಲಿಯಾ
  23. ಡೊಮಿನಿಕಾ
  24. ಮೆಕ್ಸಿಕೋ ನಗರ
  25. ಗ್ವಾಡಲಜರಾ, ಮೆಕ್ಸಿಕೋ
  26. ಟೊರೆಸ್ ಡೆಲ್ ಪೈನ್ ರಾಷ್ಟ್ರೀಯ ಉದ್ಯಾನವನ, ಚಿಲಿ
  27. ಪ್ಯಾಂಟನಾಲ್, ಬ್ರೆಜಿಲ್
  28. ಮೆಡೆಲಿನ್, ಕೊಲಂಬಿಯಾ
  29. ಒಲ್ಲಂತಾಯತಂಬೊ, ಪೆರು
  30. ರೊಟಾನ್, ಹೊಂಡುರಾಸ್
  31. ಲಡಾಖ್, ಭಾರತ
  32. ಮಯೂರ್ಭಂಜ್, ಭಾರತ
  33. ಕ್ಯೋಟೋ
  34. ನಗೋಯಾ, ಜಪಾನ್
  35. ಇಸಾನ್, ಥೈಲ್ಯಾಂಡ್
  36. ಫುಕೆಟ್, ಥೈಲ್ಯಾಂಡ್
  37. ಜೆಜು ದ್ವೀಪ, ದಕ್ಷಿಣ ಕೊರಿಯಾ
  38. ಲುವಾಂಗ್ ಪ್ರಬಾಂಗ್, ಲಾವೋಸ್
  39. ಗಿಜಾ ಮತ್ತು ಸಕ್ಕಾರ, ಈಜಿಪ್ಟ್
  40. ಚ್ಯುಲು ಹಿಲ್ಸ್, ಕೀನ್ಯಾ
  41. ಮುಸಾಂಜೆ, ರುವಾಂಡಾ
  42. ರಬತ್, ಮೊರಾಕೊ
  43. ಡಾಕರ್, ಸೆನೆಗಲ್
  44. ಲೋಂಗೊ ರಾಷ್ಟ್ರೀಯ ಉದ್ಯಾನವನ, ಗ್ಯಾಬೊನ್
  45. ಫ್ರೀಟೌನ್ ಪೆನಿನ್ಸುಲಾ, ಸಿಯೆರಾ ಲಿಯೋನ್
  46. ಕೆಂಪು ಸಮುದ್ರ, ಸೌದಿ ಅರೇಬಿಯಾ
  47. ಅಕಾಬಾ, ಜೋರ್ಡಾನ್
  48. ಜೆರುಸಲೆಮ್
  49. ಶಾರ್ಜಾ, ಯುಎಇ
  50. ಟುವಾಮೊಟು ದ್ವೀಪಸಮೂಹ, ಫ್ರೆಂಚ್ ಪಾಲಿನೇಷ್ಯಾ

Published On - 6:13 pm, Sun, 19 March 23