Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2023: ಶಿರಸಿ ಯುಗಾದಿ ಶೋಭಾ ಯಾತ್ರೆಯ ಕುರಿತು ವಿಶೇಷ ಮಾಹಿತಿ ಇಲ್ಲಿದೆ

ಯುಗಾದಿಯ ದಿನ ಶಿರಸಿ ನಗರದ ಶೋಭಾ ಯಾತ್ರೆ ತೆರಳುವ ಎಲ್ಲ ಮಾರ್ಗಗಳಲ್ಲಿ ಬರುವಂತಹ ಎಲ್ಲಾ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕಿ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ.

Ugadi 2023: ಶಿರಸಿ ಯುಗಾದಿ ಶೋಭಾ ಯಾತ್ರೆಯ ಕುರಿತು ವಿಶೇಷ ಮಾಹಿತಿ ಇಲ್ಲಿದೆ
ಡಾ ರವಿಕಿರಣ ಪಟವರ್ಧನ ಶಿರಸಿ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Mar 19, 2023 | 6:20 PM

50 000 -60,000 ಜನರು ಇರುವಂತಹ ಒಂದು ಪುಟ್ಟ ಪಟ್ಟಣ ಶಿರಸಿ ಇಂಥ ಒಂದು ಪಟ್ಟಣದಲ್ಲಿ ಸರಿಸುಮಾರು 25 ವರ್ಷಗಳ ಹಿಂದೆ ಒಟ್ಟಾಗಿ ಸೇರಿ ಹೊಸ ವರ್ಷವನ್ನು ವಿಜ್ರಂಬಣೆಯಿಂದ ಯಾಕೆ ಆಚರಿಸಬಾರದು ಎಂಬ ವಿಚಾರದೊಂದಿಗೆ ಒಂದು ಪುಟ್ಟ ಬೈಠಕ್ ಮಾಡಿದರು. ಸಾಮಾನ್ಯವಾಗಿ ಜನವರಿ 1 ಎಲ್ಲಾ ಊರುಗಳಲ್ಲಿ ಹೊಸವರ್ಷ ಆಚರಣೆ ಗುಂಡು, ತುಂಡುಗಳೊಂದಿಗೆ.. ಹಿರಿಯ ಶಾಸಪಾತ್ರ ಲೇಖಾಪಾಲರಾದ ಶ್ರೀ ಉದಯ ಸ್ವಾದಿಯವರ ಅಧ್ಯಕ್ಷತೆಯಲ್ಲಿ ಒಂದು ಯುಗಾದಿ ಉತ್ಸವ ಸಮಿತಿ ರಚಿಸಲಾಯಿತು.  ಈ ಸಮಿತಿಯ ಬೆನ್ನಿಗೆ ಸ್ವರ್ಣವಲ್ಲಿ ಸ್ವಾಮಿಗಳು ಹಾಗೂ ಬಣ್ಣದ ಮಠ ಸ್ವಾಮಿಗಳ ಮಾರ್ಗದರ್ಶನ ಚಿಂತನ ಹಾಗೂ ಅವಶ್ಯಕ ಸೂಚನೆ.

ಯುಗಾದಿಯ ದಿನ ಶಿರಸಿ ನಗರದ ಶೋಭಾ ಯಾತ್ರೆ ತೆರಳುವ ಎಲ್ಲ ಮಾರ್ಗಗಳಲ್ಲಿ ಬರುವಂತಹ ಎಲ್ಲಾ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕಿ ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಪ್ರತಿ ಕಂಬಕ್ಕೂ ಹಿಂದೂ ಧರ್ಮದ ಸಂಕೇತವಾದಂತಹ ಕೇಸರಿ ಧ್ವಜ ಕಟ್ಟಲಾಗುತ್ತದೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ವ್ಯಕ್ತಿಗಳು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಕೋರುವ ಬ್ಯಾನರ್ಗಳು ರಾರಾಜಿಸುತ್ತವೆ. ನಿಗದಿಯಾದಂತಹ ಒಂದು ಸ್ಥಳದಿಂದ ಈ ಯಾತ್ರೆ ಪ್ರಾರಂಭವಾಗುತ್ತದೆ. ಅಂದರೆ ಯಾತ್ರೆಯಲ್ಲಿ ಹಲವು ಬಂಡಿಗಳು ಭಾಗವಹಿಸುತ್ತವೆ ಈ ಬಂಡಿಗಳಲ್ಲಿ ಪೌರಾಣಿಕ ಕಥೆ ಆಧಾರಿತ ಬಂಡಿಗಳು, ಪೌರಾಣಿಕ ಯಕ್ಷಗಾನದ ಪ್ರಸಂಗಗಳು, ದೇಶಭಕ್ತಿಯ ಸಂದೇಶ ಸಾರುವ ಬಂಡಿಗಳು ಪರಿಸರ ದ ಸಂದೇಶ ಇರುತ್ತವೆ ಅವುಗಳನ್ನ ನಗರಗಳ ಜನರು ಸ್ವಯಂ ಪ್ರೇರಿತರಾಗಿ ತಯಾರಿಸಿ ಶೋಭಾ ಯಾತ್ರೆ ಹೊರಡುವ ಸ್ಥಳಕ್ಕೆ ತರುತ್ತಾರೆ. ಅಲ್ಲಿಂದ ಎಲ್ಲವೂ ಒಂದರಿಂದ ಒಂದು ನಿಗದಿತ ಮಾರ್ಗದಲ್ಲಿ ಹೋಗಿ ಮಾರಿಗುಡಿ ದೇವಸ್ಥಾನದ ಎದುರು ಕೊನೆಗೊಳ್ಳುತ್ತದೆ.

ಮೆರವಣಿಗೆಯ ಉದ್ದಕ್ಕೂ ಶಿರಸಿಯ ಸಾವಿರಾರು ಜನರು ಪುರುಷ ಮಹಿಳೆಯರು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಅವರವರ ಪಂಥದ ಬಣ್ಣ ಬಣ್ಣದ ವೇಶಭೂಷಗಳೊಂದಿಗೆ ಭಾಗವಹಿಸುತ್ತಾರೆ ಸಂಪೂರ್ಣ ಭಾರತವೇ ನಮ್ಮ ಶಿರಸಿಯ ಶೋಭಾ ಯಾತ್ರೆಯಲ್ಲಿ ಇದ್ದಂತೆ ಅಭಾಸವಾಗುತ್ತದೆ. ವಿವಿಧ ವಾದ್ಯ ಮೇಳಗಳು ಈ ಶೋಭಾ ಯಾತ್ರೆಯ ಮೆರಗನ್ನ ಇನ್ನು ಹೆಚ್ಚಿಸುತ್ತದೆ. ನಿಗದಿತ ಭಾಗಗಳಿಗೆ ಈ ಶೋಭಾಯಾತ್ರೆ ಬಂದಾಗ ಸ್ಥಳೀಯರು ಸ್ವಾಗತಿಸುವುದು ಒಂದು ಮಹತ್ವದ ಸಂಗತಿಯಾಗಿದೆ.

ಇದನ್ನೂ ಓದಿ: 3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ

ಶೋಭಾಯಾತ್ರೆ ಹಾದು ಹೋಗುವ ಮಾರ್ಗದೂದ್ದಕ್ಕೂ ಶಿರಸಿಯ ನಾಗರಿಕರು ತಮ್ಮ ಮನೆಯ ಎದುರು ಯಾತ್ರೆ ಬಂದಾಗ ಧನ್ಯತೆಯ ಭಾವನೆ ವ್ಯಕ್ತಪಡಿಸುತ್ತಾರೆ ಅಲ್ಲದೆ ಯಾತ್ರೆಯಲ್ಲಿ ಭಾಗವಹಿಸುವಂತಹ ಜನರಿಗೆ ಕುಡಿಯುವ ನೀರು, ಪಾನಕ, ಮಜ್ಜಿಗೆ, ಜ್ಯೂಸ, ಕಲ್ಲುಸಕ್ಕರೆ, ಐಸ್ ಕ್ರೀಮ್ ವಿವಿಧ ತಿಂಡಿಗಳು ಸಿಹಿಗಳನ್ನು ಸ್ವಯಂ ಪ್ರೇರಿತರಾಗಿ ನೀಡಿ ವರ್ಷದ ಮೊದಲ ದಿನ ಸಿಹಿ ಹಂಚಿದ ಸಮಾಧಾನವನ್ನು ಪಡೆಯುತ್ತಾರೆ . ಈ ಯಾತ್ರೆಯಲ್ಲಿ ಹಲವು ಸಂತ ಮಹಾಂತರು ಮೆರವಣಿಗೆಯಲ್ಲಿ ಭಾಗವಹಿಸುವುದು ರೂಢಿ ಈ ಸಂತ ಮಹಂತರ ದರ್ಶನ ವರ್ಷದ ಮೊದಲ ದಿನ ಪಡೆದಂತಹ ಹೆಮ್ಮೆ ನಮ್ಮ ಶಿರಸಿಗರಿಗೆ.ಯಾತ್ರೆಯಲ್ಲಿ ದೇವರ ಪ್ರಸಾದ, ಕುಂಕುಮ,ಬೇವು ಬೆಲ್ಲದ ಹಂಚಿಕೆಯ ರೂಢಿ.

25 ವರ್ಷಗಳಿಂದ ಇದು ನಡೆಯುತ್ತಿದ್ದು 25 ವರ್ಷದ ಅವಧಿಯಲ್ಲಿ ಈ ರೂಡಿ ಉತ್ತರ ಕನ್ನಡದ ಪ್ರತಿ ಗ್ರಾಮಕ್ಕೂ ಹಬ್ಬಿತು. ಗ್ರಾಮ ತಾಲೂಕಿನಲ್ಲಿಯೂ ಕೂಡ ಶೋಭಾಯತ್ರೆಯ ಪ್ರಾರಂಭವಾಗಿದೆ. ಈ ಯಾತ್ರೆಯನ್ನು ಕಣ್ಣು ತುಂಬಿಕೊಳ್ಳಲು ವಿವಿಧ ತಾಲೂಕು ಜಿಲ್ಲೆಗಳಿಂದ ಬರುತ್ತಿದ್ದಾರೆ ಅಲ್ಲದೆ ವಿವಿಧ ರಾಜ್ಯಗಳಿಂದಲೂ ಇದೊಂದು ವಿಶೇಷ ಶೋಭಾ ಯಾತ್ರೆ ಅಂತ ಜನರ ಗಮನ ಈ ಕಡೆಗೆ ಇದೆ.ಈ ವರ್ಷ ಯಾತ್ರೆಗೆ 25ನೇ ವರ್ಷ ಆದಕಾರಣ ಅತ್ಯಂತ ವಿಜ್ರಂಬಣೆಯ ಶೋಭಾ ಯಾತ್ರೆ ಈ ವರ್ಷ ಈಗಾಗಲೇ ಇದರ ತಯಾರಿ ಆರಂಭವಾಗಿದೆ. ವಿವಿಧ ರಾಜ್ಯದ ಜನರು ಇದನ್ನು ನೋಡಲು ಮೈಸೂರು ದಸರಾದಂತೆ ಕಾತರದಿಂದ ಇದ್ದಾರೆ ಇದೇ ರೀತಿಯ ಒಂದು ಹುಮ್ಮಸ್ಸು ಮುಂಬರುವ ದಿನಗಳಲ್ಲಿ ಮುಂದುವರೆದು ಈ ಯುಗಾದಿ ಶೋಭಾ ಯಾತ್ರೆ 100 ವರ್ಷಕ್ಕೆ ತಲುಪುತ್ತದೆ ಎಂದು ಹಲವರ ಮಾತು. ರಾಷ್ಟ್ರ ದಲ್ಲೇ ಮಾದರಿ ಯುಗಾದಿ ಆಚರಣೆ ಇದಾಗಿದೆ.

– ಡಾ ರವಿಕಿರಣ ಪಟವರ್ಧನ ಶಿರಸಿ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:19 pm, Sun, 19 March 23