Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್​ ವಾಟರ್​ ಬಳಸಿ

| Updated By: Pavitra Bhat Jigalemane

Updated on: Jan 12, 2022 | 8:30 AM

ರೋಸ್​ ವಾಟರ್​ ಮುಖದ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಹೀಗಾಗಿ ಮೊಡವೆ ನಿವಾರಣೆಗೆ ರೋಸ್​ ವಾಟರ್ ಉತ್ತಮ ರೆಮಿಡಿಯಾಗಿದೆ.

Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್​ ವಾಟರ್​ ಬಳಸಿ
ರೋಸ್​ ವಾಟರ್
Follow us on

ತ್ವಚೆಯ ವಿಚಾರದಲ್ಲಿ ಎಷ್ಟು ಗಮನಹರಿಸಿದರೂ ಒತ್ತಡ, ಹೊರಗಿನ ಧೂಳು ಹೀಗೆ ಹಲವು ಕಾರಣಗಳಿಂದ ಸಮಸ್ಯೆಗಳು ಉಲ್ಬಣಿಸುತ್ತಲೇ ಇರುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳು ಒಂದೆರಡಲ್ಲ. ಚಳಿಗೆ ಒಡೆಯುವ ತ್ವಚೆ, ಒಣಗಿದ ಅನುಭವ, ಕಳೆಕುಂದುವುದು ಹೀಗೆ ಚಳಿಗಾಲದಲ್ಲಿ ಚರ್ಮದ ಸಮಸ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದಕ್ಕಾಗಿ ಪಾರ್ಲರ್​ಗಳ ಮೊರೆ ಹೋಗುವುದಕ್ಕಿಂತ ಮನೆಯಲ್ಲಿಯೇ ಸರಳ ವಿಧಾನಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅದಕ್ಕೆ ಸರಳ ವಿಧಾನ ಎಂದರೆ ರೋಸ್​ ವಾಟರ್​ ಬಳಕೆ. ರೋಸ್​ ವಾಟರ್​ ನಿಮ್ಮ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಚರ್ಮದ ಮೇಲಿನ ಧೂಳನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಒಣ ತ್ವಚೆ, ಎಣ್ಣೆಯುತ ತ್ವಚೆಗೂ ರೋಸ್​ ವಾಟರ್​ಅನ್ನು ಬಳಕೆ ಮಾಡಬಹುದು.

ಹಾಗಾದರೆ ರೋಸ್​ ವಾಟರ್​ಅನ್ನು ಯಾವೆಲ್ಲಾ ಚರ್ಮದ ಸಮಸ್ಯೆಗಳಿಗೆ ಬಳಸಬಹುದು?

ಮೊಡವೆ ನಿವಾರಣೆ
ರೋಸ್​ ವಾಟರ್​ ಮುಖದ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಹೀಗಾಗಿ ಮೊಡವೆ ನಿವಾರಣೆಗೆ ರೋಸ್​ ವಾಟರ್ ಉತ್ತಮ ರೆಮಿಡಿಯಾಗಿದೆ. ರಾತ್ರಿ ಮಲಗುವ ಮೊದಲು ರೋಸ್​ ವಾಟರ್​ ಹಚ್ಚಕೊಂಡು ಮಲಗಿ ಅಥವಾ ಚಿಟಿಕ ಅರಿಶಿನವನ್ನು ರೋಸ್​ ವಾಟ್​ ಸೇರಿಸಿ ಹಚ್ಚಿಕೊಂಡು 20 ನಿಮಿಷದ ಬಳಿಕ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.

ಒಣ ಚರ್ಮ
ನೀವು ಒಣ ಚರ್ಮದವರಾಗಿದ್ದರೆ ರೋಸ್​ ವಾಟರ್​ ನಿಮ್ಮ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ.  ರೋಸ್​ ವಾಟರ್​ನಲ್ಲಿ  ಮಾಶ್ಚರೈಸ್​ ಅನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ. ಗ್ಲಿಸರಿನ್​ ಜತೆಗೆ ರೋಸ್​ ವಾಟರ್​ ಮಿಕ್ಸ್​ ಮಾಡಿ ಹಚ್ಚಿಕೊಂಡರೆ ನಿಮ್ಮ ಒಣ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

ಮೇಕಪ್​ ತೆಗೆಯಲು
ಮೇಕಪ್​ ಮುಖದ ಅಂದವನ್ನು ಹೇಗೆ ಹೆಚ್ಚಿಸುತ್ತದೆಯೋ ಚರ್ಮಕ್ಕೂ ಅಷ್ಟೇ ಹಾನಿಯನ್ನು ಉಂಟು ಮಾಡುತ್ತದೆ. ಆದರಿಂದ ತ್ವಚೆಯ ರಕ್ಷಣೆಗೆ ಮೇಕಪ್​ ತೆಗೆಯಲು ರೋಸ್​ ವಾಡರ್​ ಬಳಸಿಕೊಳ್ಳಿ. ಹತ್ತಿ ಉಂಡೆಯಲ್ಲಿ ರೋಸ್​ ವಾಟರ್​ ಹಾಕಿಕೊಂಡು ಮುಖವನ್ನು ಕ್ಲೀನ್​ ಮಾಡಿಕೊಳ್ಳಿ.

ತುಟಿಗಳ ರಕ್ಷಣೆಗೆ
ಚಳಿಗಾಲದಲ್ಲಿ ವಾತಾವರಣದ ಶುಷ್ಕತೆಯಿಂದ ತುಟಿಗಳು ಒಡೆದು ರಕ್ತ ಬರುವಂತೆ ಆಗುತ್ತದೆ. ಇದನ್ನು ತಡೆಯಲು ರೋಸ್​ ವಾಟರ್​ ಅನ್ನು ಬಳಸಿಕೊಳ್ಳಿ. ರೋಸ್​ ವಾಟರ್​ನಲ್ಲಿರುವ ಫೆನೋಲಿಕ್​ ಅಂಶಗಳು ನಿಮ್ಮ ಒಡೆದಿರುವ ತುಟಿಗಳನ್ನು ಸರಿಮಾಡುತ್ತವೆ. ಆದರಿಂದ ಚಳಿಗಾಲದಲ್ಲಿ ರೋಸ್ ವಾಟರ್​ಗೆ ಸ್ವಲ್ಪ ಜೇನುತುಪ್ಪ ಸೇರಿಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಅದೇ ರಿತಿ ನಿಮ್ಮ ಒಡೆದ ಪಾದ, ಹಿಮ್ಮಡಿಗೂ ಇದನ್ನು ಹಚ್ಚಬಹುದು.