High cholesterol: ದೇಹದಲ್ಲಿನ ಅತಿಯಾದ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ
ಕೊಲೆಸ್ಟ್ರಾಲ್ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್ ಸಹಾಯಕವಾಗಿದೆ.
ದೇಹದಲ್ಲಿ ಅತಿಯಾದ ಕೊಲೆಸ್ಟ್ರಾಲ್ ಶೇಖರಣೆಯಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಕೊಲೆಸ್ಟ್ರಾಲ್ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್ ಸಹಾಯಕವಾಗಿದೆ. ಇದೇ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಸಂಬಂಧೀ ಕಾಯಿಲೆಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಎದೆನೋವಿನಂತಹ ಸಮಸ್ಯೆಗಳು ಉಲ್ಬಣವಾಗುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡುವ ಆಹಾರವನ್ನು ಸೇವಿಸಿ. ಅದಕ್ಕೆ ನಿಮಗೆ ಕೆಲವು ಹಣ್ಣುಗಳು ಸಹಾಯ ಮಾಡುತ್ತವೆ. ಹಣ್ಣುಗಳು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಫಿಟ್ ಆಗಿರುವಂತೆ ಮಾಡುತ್ತದೆ. ಹೌದು ನಿಮ್ಮ ದೇಹದಲ್ಲಿನ ಅಧಿಕ ಕೊಬ್ಬನ್ನು ಕರಗಸಿ ಸಮತೋಲನದಲ್ಲಿಡಲು ಈ ಹಣ್ಣುಗಳು ನಿಮಗೆ ಸಹಕಾರಿಯಾಗಿದೆ.
ಸ್ಟ್ರಾಬೆರಿ ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯಕಾವಗಿದೆ. ವಿಭಿನ್ನ ರುಚಿಯ ಹೊಂದಿದ್ದು, ಎಲ್ಲರೂ ಇಷ್ಟಪಡುವ ಹಣ್ಣಾಗಿದೆ. ಚರ್ಮದ ಆರೋಗ್ಯಕ್ಕೂ ಸ್ಟ್ರಾಬೆರಿ ಹಣ್ಣುಗಳು ಸಹಕಾರಿಯಾಗಿದೆ. ವಿಟಮಿನ್ ಮತ್ತು ಪೈಬರ್ ಅಂಶಗಳ ಮೂಲಕ ಈ ಹಣ್ಣು ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಇದರಲ್ಲಿರುವ ಪೈಬರ್ ಅಂಶ ಅಧಿಕ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.
ಸೇಬು ಪ್ರತಿದಿನ ಒಂದು ಸೇಬು ಸೇವನೆ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸೇಬುವಿನಲ್ಲಿರುವ ಪೈಬರ್ ಮತ್ತು ಪ್ಯಾಕ್ಟಿನ್ ಅಂಶಗಳು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಶೂನ್ಯ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿರುವ ಸೇಬು ಎಲ್ಲಾ ಕಾಲದಲ್ಲೂ ದೇಹವನ್ನು ಆರೋಗ್ಯವಾಗಿಸಲು ಸಹಾಯಕವಾಗಿದೆ.
ವಿಟಮಿನ್ ಸಿ ವಿಟಮಿನ್ ಸಿ ಯಥೇಚ್ಛವಾಗಿರುವ ಹಣ್ಣುಗಳಾದ ಕಿತ್ತಳೆ, ಹಸಿರು ದ್ರಾಕ್ಷಿ ಹಣ್ಣುಗಳು ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತವೆ. ಕಿಡ್ನಿ ಸ್ಟೋನ್, ಕ್ಯಾನ್ಸರ್ನಂತಹ ರೋಗಗಳಿಂದಲೂ ದೂರವಿರಲು ಈ ಸಿಟ್ರಿಕ್ ಅಂಶವಿರುವ ಹಣ್ಣುಗಳು ಸಹಾಯಕವಾಗಿದೆ. ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಕಾರಣ ಈ ಹಣ್ಣುಗಳ ಸೇವನೆ ನಿಮಗೆ ಕೊಬ್ಬನ್ನು ಸಮತೋಲನದಲ್ಲಿಡುವಂತೆ ಮಾಡುತ್ತದೆ.
ದ್ರಾಕ್ಷಿ ಹಣ್ಣುಗಳು ಚಳಿಗಾಲದಲ್ಲಿ ದ್ರಾಕ್ಷಿ ಸೇವನೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಸಮೃದ್ದವಾದ ವಿಟಮಿನ್ ಸಿ ಮತ್ತು ಕೆ ಯನ್ನು ಹೊಂದಿರುವ ದ್ರಾಕ್ಷಿ ಹಣ್ಣಗಳು ಕೆಲವು ಹಂತದ ಕ್ಯಾನ್ಸರ್ಗಳನ್ನೂ ನಿಯಂತ್ರಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.
ಅವಕಾಡೋ ಅವಾಕಾಡೋ ಅಥವಾ ಬೆಣ್ಣೆ ಹಣ್ಣುಗಳು ಶೂನ್ಯ ಪ್ರಮಾಣದ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿದೆ. ಅವಕಾಡೋ ಸೇವನೆಯಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸಬಹುದು ವಿಟಮಿನ್ ಬಿ, ಇ, ಬಿ6, ಪೊಟ್ಯಾಷಿಯಂ, ಪೈಬರ್, ಮ್ಯಾಗ್ನಿಶಿಯಂ ಅಂಶಗಳು ಸಮೃದ್ಧವಾಗಿವೆ. ಇವು ದೇಹವನ್ನು ಸುಸ್ಥಿತಿಯಲ್ಲಿಡಲು ಸಹಾಯಕವಾಗಿದೆ.
ಇದನ್ನೂ ಓದಿ:
Turmeric side effects: ಅತಿಯಾದ ಅರಿಶಿಣ ಸೇವನೆಯು ದೇಹಕ್ಕೆ ಹಾನಿಕಾರಕ