ಶೀತ, ಕೆಮ್ಮಿನಿಂದ ಬಳುತ್ತಿದ್ದರೆ ಸ್ಟೀಮ್ ಮೊರೆ ಹೋಗಿ; ಕಡಿಮೆ ಸಮಯದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ

Benefits Of Steam Inhalation: ಅನೇಕ ಜನರು ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಅವರು ತಮ್ಮ ಶೀತ, ಕೆಮ್ಮು ಅಥವಾ ಸೈನಸ್ ಸೋಂಕಿಗೆ ಚಿಕಿತ್ಸೆ ನೀಡಲು ಈ ಪರಿಹಾರವನ್ನು ಪ್ರಯತ್ನಿಸಬಹುದು.

ಶೀತ, ಕೆಮ್ಮಿನಿಂದ ಬಳುತ್ತಿದ್ದರೆ ಸ್ಟೀಮ್ ಮೊರೆ ಹೋಗಿ; ಕಡಿಮೆ ಸಮಯದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ
ಸಾಂದರ್ಭಿಕ ಚಿತ್ರ

ದೇಶದಲ್ಲಿ ಏಕಾಏಕಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಕೊರೊನಾ ಮೂರನೇ ಅಲೆ ಮತ್ತು ಅದರ ಹೊಸ ರೂಪಾಂತರಿ ಒಮಿಕ್ರಾನ್​ನಿಂದಾಗಿ (Omicron) ದೇಶದಲ್ಲಿ ಭಯದ ವಾತಾವರಣವಿದೆ. ಜ್ವರ, ಶೀತ, ಕೆಮ್ಮು, ತಲೆನೋವು ಇತ್ಯಾದಿಗಳನ್ನು ಒಳಗೊಂಡಿರುವ ಕೆಲವು ಸಾಮಾನ್ಯ ರೋಗಲಕ್ಷಣಗಳಿಂದ ಬಳಲುತ್ತಿರುವ ಅನೇಕ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಸಮಯದಲ್ಲಿ ಸ್ಟೀಮ್ ಇನ್ಹಲೇಷನ್ (Steam Inhalation) ತುಂಬಾ ಪ್ರಯೋಜನಕಾರಿಯಾಗಿದೆ. ಹಬೆಯನ್ನು ತೆಗೆದುಕೊಳ್ಳುವುದರಿಂದ ಕೇವಲ ನೆಗಡಿ ನಿವಾರಣೆಯಾಗುವುದಿಲ್ಲ. ಇದರ ಜತೆಗೆ ತ್ವಚೆಯ ರಂಧ್ರಗಳು ಸ್ವಚ್ಛವಾಗುತ್ತದೆ.

ಸ್ಟೀಮ್​ ತೆಗೆದುಕೊಳ್ಳುವುದರಿಂದಾಗುವ ಪ್ರಯೋಜನಗಳು ಅನೇಕ ಜನರು ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಅವರು ತಮ್ಮ ಶೀತ, ಕೆಮ್ಮು ಅಥವಾ ಸೈನಸ್ ಸೋಂಕಿಗೆ ಚಿಕಿತ್ಸೆ ನೀಡಲು ಈ ಪರಿಹಾರವನ್ನು ಪ್ರಯತ್ನಿಸಬಹುದು.

ಸೈನಸ್​ ತೊಂದರೆಗೆ ಪರಿಹಾರ ಸೈನಸ್​ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಉಂಟಾಗುತ್ತದೆ. ಇದರಿಂದ ವ್ಯಕ್ತಿಯು ಉಸಿರುಕಟ್ಟುವ ಅನುಭವಕ್ಕೆ ಒಳಗಾಗುತ್ತಾನೆ. ಶೀತವು ರಕ್ತನಾಳಗಳನ್ನು ಮತ್ತಷ್ಟು ತೊಂದರೆಗೆ ಗುರಿಯಾಗಿಸುತ್ತದೆ. ಸ್ಟೀಮ್​ ಶೀತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸ್ಟೀಮ್​ನಲ್ಲಿನ ತೇವಾಂಶವು ಸೈನಸ್‌ಗಳಲ್ಲಿನ ಲೋಳೆಯನ್ನು ತೆಳುವಾಗಿಸುತ್ತದೆ ಮತ್ತು ಸಾಮಾನ್ಯವಾಗಿ ಉಸಿರಾಡಲು ಸಹಾಯ ಮಾಡುವುದರಿಂದ ಇದು ಮೂಗಿನ ಹಾದಿಗಳಲ್ಲಿನ ಕಿರಿಕಿರಿಯನ್ನು ಶಮನಗೊಳಿಸುತ್ತದೆ.

ಕೆಮ್ಮಿನಿಂದ ಪರಿಹಾರ ನೀಡುತ್ತದೆ ಬದಲಾಗುತ್ತಿರುವ ಋತುವಿನಲ್ಲಿ ಅನೇಕ ಜನರು ಕೆಮ್ಮಲು ಪ್ರಾರಂಭಿಸುತ್ತಾರೆ. ಸ್ಟೀಮ್​ ತೆಗೆದುಕೊಳ್ಳುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಸ್ಟೀಮ್​ ಕೆಮ್ಮಿನ ಲಕ್ಷಣಗಳಾದ ಮೂಗು ಕಟ್ಟುವುದು, ಉಸಿರಾಟದ ತೊಂದರೆ ಮತ್ತು ಸುಡುವ ಸಂವೇದನೆ ಇತ್ಯಾದಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ ಸ್ಟೀಮ್ ಇನ್ಹಲೇಷನ್ ಶೀತ ಮತ್ತು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜತೆಗೆ ನಿಮ್ಮ ಒತ್ತಡವನ್ನು ಸಹ ನಿವಾರಿಸುತ್ತದೆ. ಸ್ಟೀಮ್​ ನಿಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವಾಗಿದೆ.

ರಕ್ತ ಪರಿಚಲನೆಯ ಹೆಚ್ಚಳ ಸ್ಟೀಮ್​ ತೆಗೆದುಕೊಳ್ಳುವುದರಿಂದ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ನಿಮ್ಮ ರಕ್ತನಾಳಗಳು ಹಿಗ್ಗುತ್ತವೆ ಮತ್ತು ಇದು ದೇಹದಲ್ಲಿ ರಕ್ತದ ಹರಿವು ಮತ್ತು ಪರಿಚಲನೆಯನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆಯ ಹೆಚ್ಚಳವು ತಲೆನೋವು ಮತ್ತು ಮೈಗ್ರೇನ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

ರಂಧ್ರಗಳನ್ನು ತೆರವುಗೊಳಿಸುತ್ತದೆ ನಾವು ಸಾಮಾನ್ಯವಾಗಿ ನಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತೇವೆ. ಕಾಲಾನಂತರದಲ್ಲಿ, ಧೂಳು, ಕೊಳಕು, ಎಣ್ಣೆ ಮತ್ತು ಕಲುಷಿತ ಗಾಳಿಯು ನಮ್ಮ ಚರ್ಮದ ಮೇಲೆ ಸಂಗ್ರಹವಾಗುತ್ತದೆ. ಅವು ನಮ್ಮ ಚರ್ಮವನ್ನು ನಿರ್ಜೀವಗೊಳಿಸುತ್ತವೆ. ಸ್ಟೀಮ್​ ನಿಮ್ಮ ತ್ವಚೆಯನ್ನು ಪುನಃ ಚೈತನ್ಯಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಂತಹ ಸಮಸ್ಯೆಗಳನ್ನೂ ತಡೆಯುತ್ತದೆ.

ಸ್ಟೀಮ್​ ತೆಗೆದುಕೊಳ್ಳುವ ವಿಧಾನ

  • ನೀರನ್ನು ಬಿಸಿ ಮಾಡಿ ಮತ್ತು ಕುದಿಯಲು ಬಿಡಿ.
  • ನೀರು ಕುದಿ ಬಂದ ನಂತರ ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಳ್ಳಿ.
  • ನಿಮ್ಮ ತಲೆಯನ್ನು ಟವೆಲ್​ನಿಂದ ಮುಚ್ಚಿ ಮತ್ತು ನೀರಿನಿಂದ ಹಬೆ ಬರುವುದರೊಂದಿಗೆ ಉಸಿರಾಡಿ.
  • ಸುಮಾರು 5-10 ನಿಮಿಷಗಳ ಕಾಲ ಉಸಿರಾಡಿ.
  • ತ್ವರಿತ ಪರಿಹಾರವನ್ನು ಪಡೆಯಲು ನೀವು ನೀರಿಗೆ ಹೀಲಿಂಗ್ ಆಯಿಲ್ ಅಥವಾ ಜಂಡು ಬಾಮ್, ವಿಕ್ಸ್​ ಅನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್​ ವಾಟರ್​ ಬಳಸಿ

ಚಳಿಗಾಲದಲ್ಲಿ ಕೂದಲು ನಿರ್ಜೀವವಾಗುತ್ತದೆ; ಚಿಂತೆ ಬಿಡಿ ಮನೆಯಲ್ಲಿ ತಯಾರಿಸಿದ ಈ ಹೇರ್ ಮಾಸ್ಕ್ ಬಳಸಿ

Click on your DTH Provider to Add TV9 Kannada