Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕ್ರಮಗಳನ್ನು ಅನುಸರಿಸಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಿ : ಆರೋಗ್ಯಯುತವಾಗಿರಿ

ಕೊರೋನಾ, ಓಮಿಕ್ರಾನ್​ ಗೆ ಮಾತ್ರವಲ್ಲ ಆಗಾಗ ಕೈ ತೊಳೆದುಕೊಳ್ಳುವ ಮೂಲಕ ನಿಮ್ಮ ಕೈಗಳನ್ನು ಸ್ಚಚ್ಛವಾಗಿಟ್ಟುಕೊಳ್ಳಿ. ಊಟ ಮಾಡುವ ಮೊದಲು, ಹೊರಗಡೆಯಿಂದ ಮನೆಯ ಒಳಗೆ ಬಂದಾಗ ಕೈತೊಳೆಯಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. 

ಈ ಕ್ರಮಗಳನ್ನು ಅನುಸರಿಸಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಿ : ಆರೋಗ್ಯಯುತವಾಗಿರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Jan 12, 2022 | 4:28 PM

ಕೊರೋನಾ ಇನ್ನೂ ಬೆನ್ನು ಬಿಟ್ಟಿಲ್ಲ. ಅದರ ನಡುವೆಯೇ ರೂಪಾಂತರಿ ಓಮಿಕ್ರಾನ್ ಆತಂಕ ಎದುರಾಗಿದೆ. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಎಷ್ಟೇ ಮಾಸ್ಕ್​, ಸ್ಯಾನಿಟೈಸರ್​, ಸಾಮಾಜಿಕ ಅಂತರ ಪಾಲಿಸಿದರೂ  ದೇಹದಲ್ಲಿ ಆಂತರಿಕವಾಗಿ ರೋಗದ ವಿರುದ್ಧ ಹೋರಾಡುವ ಬಲ ಇಲ್ಲದಿದ್ದರೆ ಕಾಯಿಲೆಗಳು ಸುಲಭವಾಗಿ ದೇಹವನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ಒಂದಷ್ಟು ಪೌಷ್ಟಿಕ ಅಹಾರ, ಸ್ವಚ್ಛತೆ, ಒಂದಷ್ಟು ನಿಯಿಮಿತ ಅಭ್ಯಾಸಗಳು ದೇಹವನ್ನು ಶಕ್ತಿಯುತವಾಗಿರಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ದೈನಂದಿನ ಅಭ್ಯಾಸದಲ್ಲಿ ಈ ಕೆಳಗಿನ ಅಂಶಗಳನ್ನು ಸೇರಿಸಿಕೊಳ್ಳಿ ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸಿ ಸಾಂಕ್ರಮಿಕ ರೋಗದಿಂದ ರಕ್ಷಿಸುತ್ತದೆ.

ಸಮತೋಲಿತ ಆಹಾರ ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡಿ. ನಿಮಗೆ ಸುಲಭವಾಗಿ ಹಣ್ಣುಗಳಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ. ಭಾರತದಲ್ಲಿ ಸಿಗುವ ಹಣ್ಣುಗಳಲ್ಲಿ ಯಥೇಚ್ಛವಾದ ಪೋಷಕಾಂಶಗಳು ದೊರೆಯುತ್ತದೆ. ಹಸಿರು ತರಕಾರಿ,  ಹಣ್ಣುಗಳು, ನಾರಿನಾಂಶವಿರುವ ಸೊಪ್ಪುಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಮತೋಲಿತ ಆಹಾರ ಸೇವಿಸಿ ಇದು ನಿಮ್ಮ ದೇಹದ ತೂಕವನ್ನು ಕಾಪಾಡಿಕೊಂಡು ಅರೋಗ್ಯಯುತವಾಗಿಡುವಂತೆ ಮಾಡುತ್ತದೆ.

ವೈದ್ಯರ ಸಲಹೆ ಪಡೆಯಿರಿ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗಬೇಕು ಎಂದರೆ ವೈದ್ಯರ ಸಲಹೆ ಅವಶ್ಯಕವಾಗಿದೆ.  ದೇಹಕ್ಕೆ ಬೇಕಾದ ಪೈಬರ್​, ಜಿಂಗ್​ ಪ್ರೊಟೀನ್​, ವಿಟಮಿನ್ ಎ, ಬಿ ಬ6, ಸಿ, ಡಿ ಎಲ್ಲವೂ ಒಂದೇ ಆಹಾರದಲ್ಲಿ ದೊರೆಯಲು ಸಾಧ್ಯವಿಲ್ಲ ಆದ್ದರಿಂದ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಆಗ ಸೂಕ್ತ ಪರಿಹಾರ ದೊರೆಯಲಿದೆ. ಸರಿಯಾದ ಪ್ರಮಾಣದ ನ್ಯೂಟ್ರಿಯನ್ಸ್​ಗಳು ಪೂರೈಕೆಯಾಗದಿದ್ದರೆ ಬ್ಯಾಕ್ಟೀರಿಯಾ, ವೈರಸ್​ಗಳು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ.

ಧೂಮಪಾನದಿಂದ ದೂರವಿರಿ ಧೂಮಪಾನ ನಿಮ್ಮ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ತುತ್ತು ಮಾಡುವುದಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಆದ್ದರಿಂದ ಧೂಮಪಾನದಿಂದ ದೂರವಿರಿ. ಇಲ್ಲವಾದರೆ ಇದು ನಿಮ್ಮನ್ನು ಅಪಾಯಕ್ಕೆ ಕರೆದೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮದ್ಯಪಾನಕ್ಕೆ ಮಿತಿಯಿರಲಿ ಕೆಲವರಿಗೆ ಮದ್ಯ ಸೇವಸಿದ್ದರೆ ಹೊಸದೊಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮದ್ಯಪಾನ ಮಾಡಲೇಬೇಕು ಎನ್ನುತ್ತಾರೆ. ಸಾಧ್ಯವಾದರೆ ಮದ್ಯಪಾನವನ್ನು ನಿರ್ಬಂಧಿಸಿ. ಇದು ನಿಮಗೆ ಕ್ಯಾನ್ಸರ್​  ರೋಗದವರೆಗೂ ಕರೆದೊಯ್ಯುತ್ತದೆ. ಅಲ್ಲದೆ ಮದ್ಯ ಪಾನದಿಂದ ನಿಮ ಕರುಳಿನ, ದೇಹದ ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಅನಾರೋಗ್ಯಕ್ಕೀಡು ಮಾಡುತ್ತದೆ.

ನಿಯಮಿತ ವ್ಯಾಯಾಮ ಮಾಡಿ ವ್ಯಾಯಾಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆನಪಿಡಿ ಅದು ಅತಿಯಾಗದಿರಲಿ. ವ್ಯಾಯಾಮ ದೇಹವನ್ನು ಆಂತರಿಕವಾಗಿ ಬಲಗೊಳಿಸಿ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೋನಾದಂತಹ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪ್ರಾಣಾಯಾಮದಂತಹ ಯೋಗಾಸನಗಳು ಪರಿಹಾರ ನೀಡುತ್ತದೆ.

ಸರಿಯಾದ ನಿದ್ದೆ ಪ್ರತಿದಿನ 7-8 ಗಂಟೆಯವರೆಗೆ ನಿದ್ದೆ ಮಾಡಿ. ನಿದ್ದೆ ನಿಮ್ಮ ದೇಹದಲ್ಲಿನ ಸುಸ್ತನ್ನು ಕಡಿಮೆ ಮಾಡಿ ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ವರ್ಕ್​​ ಫ್ರಾಮ್​ ಹೋಮ್​ನಂತಹ ವ್ಯವಸ್ಥೆಗಳು ನಿದ್ದೆಗೆಟ್ಟು ಕೆಲಸ ಮಾಡುವಂತೆ ಮಾಡಿದೆ. ಆದ್ದರಿಂದ ಅದೆಲ್ಲದರ ಹೊರತಾಗಿಯೂ ದೇಹಕ್ಕೆ ಸರಿಯಾಗಿ ನಿದ್ದೆ ಒದಗಿಸುವುದು ಅಗತ್ಯವಾಗಿದೆ.

ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಕೊರೋನಾ, ಓಮಿಕ್ರಾನ್​ ಗೆ ಮಾತ್ರವಲ್ಲ ಆಗಾಗ ಕೈ ತೊಳೆದುಕೊಳ್ಳುವ ಮೂಲಕ ನಿಮ್ಮ ಕೈಗಳನ್ನು ಸ್ಚಚ್ಛವಾಗಿಟ್ಟುಕೊಳ್ಳಿ. ಊಟ ಮಾಡುವ ಮೊದಲು, ಹೊರಗಡೆಯಿಂದ ಮನೆಯ ಒಳಗೆ ಬಂದಾಗ ಕೈತೊಳೆಯಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ.  ನೆನಪಿಡಿ ಮಾಸ್ಕ್​ ಧರಿಸಿದಾಗ ಆಗಾಗ ಮುಖವನ್ನು ಮುಟ್ಟಿಕೊಳ್ಳಬೇಡಿ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:

Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್​ ವಾಟರ್​ ಬಳಸಿ

Published On - 4:22 pm, Wed, 12 January 22

PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ