ಇಂದು ಡಿಸೆಂಬರ್ 26 ವೀರ್ ಬಾಲ್ ದಿವಸ್. ಹೌದು, ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದೋಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಹುತಾತ್ಮರಾದ ನೆನಪಿಗಾಗಿ ‘ವೀರ್ ಬಾಲ್ ದಿವಸ್’ ಆಚರಿಸಿಕೊಂಡು ಬರಲಾಗುತ್ತಿದೆ. ಅವರ ಜೀವನ ಕಥೆಯನ್ನು ನೆನಪಿಟ್ಟುಕೊಳ್ಳಲು ಮತ್ತು ಮೊಘಲ್ ಸೇನೆಯಿಂದ ಅವರು ಹೇಗೆ ಕ್ರೂರವಾಗಿ ಕೊಲ್ಲಲ್ಪಟ್ಟರು ಎಂಬುದನ್ನು ತಿಳಿಯುವುದು ಹಾಗೂ ಅವರ ತ್ಯಾಗವನ್ನು ನೆನಪಿಸುವ ದಿನವಾಗಿದೆ.
ಮೊಘಲರ ಆಳ್ವಿಕೆಯಲ್ಲಿ ಪಂಜಾಬಿನಲ್ಲಿ ಸಿಖ್ಖರ ನಾಯಕರಾಗಿದ್ದ ಗುರು ಗೋಬಿಂದ್ ಸಿಂಗ್ ಅವರು 1699 ರಲ್ಲಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು ಈ ಪಂಥವು ಹೊಂದಿತ್ತು. ಗುರು ಗೋಬಿಂದ್ ಸಿಖ್ ಅವರಿಗೆ ನಾಲ್ಕು ಗಂಡು ಮಕ್ಕಳಾದ ಅಜಿತ್, ಜುಝಾರ್, ಜೋರಾವರ್ ಮತ್ತು ಫತೇಹ್, ಅವರೆಲ್ಲರೂ ಖಾಲ್ಸಾದ ಭಾಗವಾಗಿದ್ದರು. ಅವರನ್ನು ಚಾರ್ ಸಾಹಿಬ್ಜಾದೆ ಖಾಲ್ಸಾ ಎಂದು ಕರೆಯಲಾಗುತ್ತಿತ್ತು.
ಆದರೆ,ಸಣ್ಣ ವಯಸ್ಸಿನಲ್ಲಿಯೇ ಆ ನಾಲ್ವರು ಮಕ್ಕಳ ಮೊಘಲ್ ಸೇನೆಯಿಂದ ಬಲಿಯಾದರು. ಹೀಗಾಗಿ 2022 ರ ಜನವರಿ 9 ರಂದು, ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನದಂದು, ಡಿಸೆಂಬರ್ 26 ರಂದು ಸಿಖ್ ಗುರುಗಳ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರ ಹುತಾತ್ಮ ದಿನದ ಗೌರವಾರ್ಥವಾಗಿ ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಂದಿನಿಂದ ವೀರ್ ಬಾಲ್ ದಿವಸ್ ಅನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗುರು ಗೋಬಿಂದ್ ಸಿಂಗ್ ಅವರ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಪ್ರಾಣವನ್ನು ತ್ಯಾಗ ಮಾಡಿದರು. ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಮಕ್ಕಳ ತ್ಯಾಗವನ್ನು ಗೌರವಿಸಲು ವೀರ್ ಬಾಲ್ ದಿವಸ್ ಆಚರಣೆಯೂ ಮಹತ್ವದ್ದಾಗಿದೆ. ಈ ದಿನವು ಸಿಖ್ ಧರ್ಮದ ಅನುಯಾಯಿಗಳಿಗೆ ಮಾತ್ರವಲ್ಲದೆ ಎಲ್ಲಾ ಭಾರತೀಯರಿಗೆ ಸ್ಫೂರ್ತಿದಾಯಕ ದಿನವಾಗಿದೆ.
ವೀರ್ ಬಾಲ್ ದಿವಸ್ ದಿನದಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಭಾರತದ ಭವಿಷ್ಯದ ಅಡಿಪಾಯ ಎಂದು ಮಕ್ಕಳನ್ನು ಗೌರವಿಸುವ ರಾಷ್ಟ್ರವ್ಯಾಪಿ ಆಚರಣೆಯಾದ ವೀರ್ ಬಾಲ್ ದಿವಸ್ ಕಾರ್ಯಕ್ರಮವು ನಡೆಯಲಿದೆ. ಗಮನಾರ್ಹ ಸಾಧನೆಗಳನ್ನು ಮಾಡಿದ ಒಟ್ಟು 17 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಈ ಪಾನೀಯವೇ ಮಾಧುರಿ ದೀಕ್ಷಿತ್ ಅವರ ಸೌಂದರ್ಯದ ಗುಟ್ಟು
ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಕ್ಕಳ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಭಾಗವಾಹಿಸಿ ಮಾತಾಡಲಿದ್ದಾರೆ. ಅದಲ್ಲದೇ ಶಾಲಾ ಕಾಲೇಜುಗಳಲ್ಲಿ ಸಾಹಿಬ್ಜಾದಾಸ್ ಅವರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಭಾಷಣ ಸ್ಪರ್ಧೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ