ಒಡಹುಟ್ಟಿದ ಮಕ್ಕಳ ಮಧ್ಯೆ ಉಂಟಾದ ಜಗಳವನ್ನು ಹೇಗೆ ನಿಭಾಯಿಸುವುದು, ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2023 | 6:33 PM

ಮಕ್ಕಳು ತಮ್ಮ ಒಡಹುಟ್ಟಿದವರ ಜೊತೆ ಜಗಳವಾಡುವುದು, ಪೈಪೋಟಿ ಮಾಡುವುದು ಸಾಮಾನ್ಯವಾಗಿದೆ. ಪ್ರತಿ ಮನೆಯಲ್ಲೂ ಮಕ್ಕಳು ಇದೇ ರೀತಿ ಇರುತ್ತಾರೆ. ಈ ಮಕ್ಕಳು ತಮ್ಮ ಒಡಹುಟ್ಟಿದವರೊಂದಿಗೆ ಖುಷಿಯಾಗಿ ಇರುವುದರಿಂದ ಹಿಡಿದು ಧನಾತ್ಮಕವಾಗಿ ಮಾತನಾಡುವವರೆಗೆ, ಆರೋಗ್ಯಕರ ಸಂಬಂಧವನ್ನು ಪ್ರೋತ್ಸಾಹಿಸಲು ಪೋಷಕರು ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಒಡಹುಟ್ಟಿದ ಮಕ್ಕಳ ಮಧ್ಯೆ ಉಂಟಾದ ಜಗಳವನ್ನು ಹೇಗೆ ನಿಭಾಯಿಸುವುದು, ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮಕ್ಕಳು ತಮ್ಮ ಒಡಹುಟ್ಟಿದವರ ಜೊತೆ ಜಗಳವಾಡುತ್ತಾ, ಪೈಪೋಟಿ ಮಾಡುತ್ತಾ ಇರುತ್ತಾರೆ. ಹಾಗೂ ಪೋಷಕರು ತಮ್ಮ ಒಂದು ಮಗುವಿಗೆ ಇನ್ನೊಂದು ಮಗುವಿಗಿಂತ ಹೆಚ್ಚು ಗಮನ ನೀಡಿದಾಗ, ಮಕ್ಕಳು ತಮ್ಮ ಒಡಹುಟ್ಟಿದವರ ಬಗ್ಗೆ ಅಸೂಯೆ ಅಥವಾ ಅಸಮಾಧಾನವನ್ನು ಬೆಳೆಸಿಕೊಳ್ಳಬಹುದು. ಪೋಷಕರು ಸಾಧ್ಯವಾದಷ್ಟು ಮಕ್ಕಳ ಪೈಪೋಟಿಯನ್ನು ದೂರವಿಡಲು ಪ್ರಯತ್ನಿಸಬೇಕು. ಮತ್ತು ಮಕ್ಕಳಿಗೆ ಸಮಾನ ರೀತಿಯಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಬೇಕು. ಇದನ್ನು ಉದ್ದೇಶಿಸಿ ಮನಶಾಸ್ರ್ತಜ್ಞ ಜಾಜ್ಮಿನ್ ಮೈಕಲ್ ಅವರು ಹಿಂದೂಸ್ತಾನ ಟೈಮ್ಸ್​ಗೆ ನೀಡಿ ಸಂದರ್ಶನದಲ್ಲಿ ಒಡಹುಟ್ಟಿದವರ ಪೈಪೋಟಿಗಳನ್ನು ಮಕ್ಕಳಿಂದ ದೂರವಿಡುವುದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಸಮಯವನ್ನು ನಿಗದಿಪಡಿಸಿ: ಪೋಷಕರಾಗುವುದು ಮತ್ತು ಮಕ್ಕಳಿಬ್ಬರಿಗೂ ಸಮಾನವಾಗಿ ಗಮನ ನೀಡುವುದು ನಾವು ಅಂದುಕೊಂಡದ್ದಕ್ಕಿಂತ ಕಷ್ಟಕರವಾಗಿರಬಹುದು. ಆದ್ದರಿಂದ ಪೋಷಕು ತಮ್ಮ ಮಕ್ಕಳೊಂದಿಗೆ ಸಮಾನವಾಗಿ ಸಂವಹನ ನಡೆಸಲು ಅವರೊಂದಿಗೆ ಸಮಯ ಕಳೆಯಲು ಸಮಯವನ್ನು ಸಮಾನವಾಗಿ ಹಂಚಿಕೊಂಡು ನಿಗದಿಪಡಿಸಿದ ಸಮಯದಲ್ಲಿ ಮಗುವಿನೊಂದಿಗೆ ಕಾಲ ಕಳೆಯಬೇಕು.

ಸಕಾರಾತ್ಮಕವಾಗಿ ಮಾತನಾಡಿ: ನಾವು ಯಾವಾಗಲೂ ಒಂದು ಮಗುವಿನ ಬಗ್ಗೆ ಇನ್ನೊಂದು ಮಗುವಿನ ಬಗ್ಗೆ ಧನಾತ್ಮಕವಾಗಿ ಮಾತನಾಡಬೇಕು. ಇದು ಅವರು ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಆಳವಾಗಿ ತಮ್ಮ ಒಡಹುಟ್ಟಿದವರ ಜೊತೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

ಒತ್ತಾಯಿಸುವುದು: ಪೋಷಕರು ಎಲ್ಲಾ ಸಮಯದಲ್ಲೂ, ವಿಷಯಗಳನ್ನು ಹಂಚಿಕೊಳ್ಳಲು ಮಕ್ಕಳನ್ನು ಒತ್ತಾಯಿಸುವುದನ್ನು ತಪ್ಪಿಸಬೇಕು. ಮತ್ತು ಅವರನ್ನು ವೈಯಕ್ತಿಕವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು.

ಇದನ್ನೂ ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಗಮನಹರಿಸಿ: ಮಕ್ಕಳ ಮೇಲೆ ನಿಗಾ ಇಡುವುದು ಮತ್ತು ಮಕ್ಕಳು ಪರಸ್ಪರ ಮಾಡುವ ಸಣ್ಣ ವಿಷಯಗಳನ್ನು ಗಮನಿಸುವುದು ಮುಖ್ಯ. ಧನಾತ್ಮಕ ಸಂಬಂಧವನ್ನು ಬಲಪಡಿಸಲು ಅವರನ್ನು ಮತ್ತಷ್ಟು ಉತ್ತೇಜಿಸಬೇಕು.

ಹೋಲಿಕೆ: ಮಕ್ಕಳ ನಡುವೆ ಪರಸ್ಪರ ಹೋಲಿಕೆಯನ್ನು ಎಂದಿಗೂ ಮಾಡಬೇಡಿ. ಇದು ಮಕ್ಕಳಲ್ಲಿ ಮತ್ತಷ್ಟು ಅಸೂಯೆ, ಸ್ವಾರ್ಥ ಮತ್ತು ಅಸಮಾಧಾನದ ಭಾವನೆಯನ್ನು ಉಂಟುಮಾಡಬಹುದು.

ಘರ್ಷಣೆಗಳು: ಒಡಹುಟ್ಟಿದವರ ನಡುವಿನ ಜಗಳದ ಸಮಯದಲ್ಲಿ, ಅದನ್ನು ನಿಯಂತ್ರಿಸಲು ಹೋಗುವುದಕ್ಕಿಂತ, ಜಗಳವನ್ನು ಹೇಗೆ ಪರಿಹರಿಸಬೇಕೆಂದು ಮಕ್ಕಳಿಗೆ ಕಲಿಸುವುದು ಮುಖ್ಯವಾಗಿದೆ.

Published On - 6:32 pm, Thu, 6 April 23