ಕೆಲವು ಪಕ್ಷಿಗಳೇ ಹಾಗೆ, ತನ್ನ ಆಕರ್ಷಕ ಮೈ ಬಣ್ಣ, ನಡಿಗೆಯಿಂದಲೇ ಎಲ್ಲರ ಗಮನ ಸೆಳೆಯುತ್ತವೆ. ಪೆಂಗ್ವಿನ್ ಗಳು ಕೂಡ ತನ್ನ ಬಣ್ಣ, ವೈಯಾರವಾದ ನಡಿಗೆಯಿಂದಲೇ ಗಮನ ಸೆಳೆಯುವ ಪಕ್ಷಿ. ನೋಡಲು ಮುದ್ದು ಮುದ್ದಾಗಿರುವ ಈ ಪೆಂಗ್ವಿನ್ ಗಳು ನಡೆಯುವುದನ್ನು ನೋಡುವುದೇ ಚಂದ. ಆದರೆ ಈ ಕಪ್ಪು ಬಿಳಿ ಬಣ್ಣದ ಈ ಪೆಂಗ್ವಿನ್ ಹಾರಲಾಗದ ಜಲ ಪಕ್ಷಿಯಾಗಿದೆ. ನೋಡುವುದಕ್ಕೆ ಪಕ್ಷಿಯಂತೆ ಕಂಡರೂ ಕೂಡ ಈ ಪೆಂಗ್ವಿನ್ ಅನ್ನು ಪಕ್ಷಿ ಎನ್ನಲು ಆಗುವುದಿಲ್ಲ, ಪೆಂಗ್ವಿನಿಗಳಿಗೆ ರೆಕ್ಕೆ ಇದ್ದರೂ ಹಾರುವುದಕ್ಕೆ ಸಾಧ್ಯವಿಲ್ಲ. ಅದಲ್ಲದೇ ಉಭಯವಾಸಿ ಜೀವಿಯಾಗಿರುವ ಈ ಪೆಂಗ್ವಿನ್ ಗಳು ಹೆಚ್ಚಾಗಿ ನೀರಿನಲ್ಲಿಯೇ ಇರುತ್ತವೆ. ಸಮುದ್ರದಲ್ಲಿ ತನ್ನ ಉದ್ದವಾದ ರೆಕ್ಕೆಗಳ ಸಹಾಯದಿಂದ ಈಜಾಡುವ ಈ ಪಕ್ಷಿಗಳು, ನೆಲೆದ ಮೇಲೂ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಕಳೆದ ಕೆಲವು ವರ್ಷಗಳಿಂದ ಮಾನವನ ಸ್ವಾರ್ಥದಿಂದಾಗಿ ಪೆಂಗ್ವಿನ್ ಗಳ ಸಂತತಿಯೂ ಅಳಿವಿನಂಚಿಗೆ ತಲುಪಿದ್ದು, ಈ ಪಕ್ಷಿಗಳ ಸಂತತಿಯನ್ನು ಉಳಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 20 ಅನ್ನು ಪೆಂಗ್ವಿನ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನದಿಂದ ಪೆಂಗ್ವಿನ್ ಗಳ ಸಂಖ್ಯೆಯೂ ಕುಸಿತ ಕಾಣುತ್ತಿದ್ದು, ಅವನತಿಯ ಅಂಚಿಗೆ ತಲುಪಿದೆ. ಈ ಪೆಂಗ್ವಿನ್ ಜಾಗೃತಿ ದಿನದ ಇತಿಹಾಸದ ಬಗ್ಗೆ ಹೇಳುವುದಾದರೆ, 1972 ರಲ್ಲಿ, ಕ್ಯಾಲಿಫೋರ್ನಿಯಾದ ಅಲಮೊಗೊರ್ಡೊದ ಗೆರ್ರಿ ವ್ಯಾಲೇಸ್ ಅವರ ಪತ್ನಿ ಅಲೆಟಾ, ಕ್ಯಾಲೆಂಡರ್‌ನಲ್ಲಿ ಪೆಂಗ್ವಿನ್ ಜಾಗೃತಿ ದಿನದ ಬಗ್ಗೆ ಉಲ್ಲೇಖಿಸಿದರು. ಅಂದಿನಿಂದ, ಪ್ರತಿ ವರ್ಷ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿವೆ.
ಇದನ್ನೂ ಓದಿ: ಚಳಿಗಾಲದಲ್ಲಿ ತ್ವಚೆಯನ್ನು ಸ್ಕ್ರಬ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಕಪ್ಪು ಹಾಗೂ ಬಿಳಿ ಬಣ್ಣದಿಂದ ಮುದ್ದು ಮುದ್ದಾಗಿ ಕಾಣುವ ಈ ಪೆಂಗ್ವಿನ್‌ಗಳು ಅಂಟಾರ್ಟಿಕಾದ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇಂದು ಈ ಪಕ್ಷಿಗಳ ಸಂತತಿಯೂ ನಶಿಸಲು ಮುಖ್ಯ ಕಾರಣವೇನೆಂದರೆ ಅದುವೇ ಹವಾಮಾನ ವೈಪರೀತ್ಯ. ಹೀಗಾಗಿ ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಜನವರಿ 20ರಂದು ಪೆಂಗ್ವಿನ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಜಾಗೃತಿ ದಿನದಂದು ಅನೇಕ ಸಂಘ ಸಂಸ್ಥೆಗಳು ಪೆಂಗ್ವಿನ್ ಸಂರಕ್ಷಣೆಯಲ್ಲಿ ಮಾನವನು ಪಾತ್ರವಹಿಸುವುದು ಹೇಗೆ ಎನ್ನುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ರೀತಿಯಾಗಿ ಪೆಂಗ್ವಿನ್ ಗಳ ಸಂತತಿಯನ್ನು ಉಳಿಸಲು ಪ್ರಯತ್ನಿಸಲಾಗುತ್ತಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.