AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಗೆ ಗರಂ ಮಸಾಲವನ್ನು ಯಾವಾಗ, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಗೊತ್ತಾ?

ಗರಂ ಮಸಾಲ ಅಡುಗೆಯ ಘಮ, ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಿಂಪಲ್‌ ಅಡುಗೆಯ ರುಚಿಯನ್ನು ಸಹ ದುಪ್ಪಟ್ಟುಗೊಳಿಸುತ್ತದೆ. ಆದರೆ ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ರುಚಿ ಕೆಡುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಅಡುಗೆಯ ರುಚಿ ಮತ್ತಷ್ಟು ಹೆಚ್ಚಿಸಲು ಗರಂ ಮಸಾಲವನ್ನು ಯಾವಾಗ ಸೇರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಅಡುಗೆಗೆ ಗರಂ ಮಸಾಲವನ್ನು ಯಾವಾಗ, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 15, 2026 | 5:36 PM

Share

ಭಾರತೀಯ ಅಡುಗೆಮನೆಯಲ್ಲಿ ಗರಂ ಮಸಾಲಕ್ಕೆ (garam masala) ವಿಶೇಷ ಸ್ಥಾನವಿದೆ. ಗರಂ ಮಸಾಲವು ದಾಲ್ಚಿನ್ನಿ, ಲವಂಗ, ಏಲಕ್ಕಿ, ಮೆಣಸು, ಪಲಾವ್‌ ಎಲೆ, ಸೋಂಪು ಮುಂತಾದ ಮಸಾಲೆಗಳ ಮಿಶ್ರಣವಾಗಿದ್ದು, ಇದು ಸಸ್ಯಹಾರವೇ ಇರಲಿ ಮಾಂಸಹಾರವೇ ಇರಲಿ ಪ್ರತಿಯೊಂದು ಅಡುಗೆಯ ಘಮ, ರುಚಿಯನ್ನು ದ್ವಿಗುಣಗೊಳಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅಡುಗೆಗೆ ಅದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಇದಲ್ಲದಿದ್ದರೆ ಅಡುಗೆಯ ರುಚಿ ಕಳೆದುಹೋಗುವ ಅಥವಾ ಪದಾರ್ಥ ಕಹಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಡುಗೆಯ ರುಚಿಯನ್ನು ದುಪ್ಪಟ್ಟುಗೊಳಿಸಲು ಗರಂ ಮಸಾಲವನ್ನು ಯಾವ ಸಮಯದಲ್ಲಿ ಸೇರಿಸಬೇಕು ಎಂಬುದನ್ನು ತಪ್ಪದೇ ತಿಳಿದುಕೊಳ್ಳಿ.

ಅಡುಗೆಗೆ ಗರಂ ಮಸಾಲ ಸೇರಿಸಲು ಸರಿಯಾದ ಸಮಯ ಯಾವುದು?

ಅತ್ಯಂತ ಮುಖ್ಯವಾದ ವಿಷಯವೆಂದರೆ ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿ ಸೇರಿಸಬೇಕು. ಪದಾರ್ಥ ಬಹುತೇಕ ಬೆಂದ ನಂತರ, ಕೊನೆಯ 2 ರಿಂದ 3 ನಿಮಿಷಗಳಲ್ಲಿ ಗರಂ ಮಸಾಲ ಸೇರಿಸಿ. ಇತರೆ ಮಸಾಲೆಗಳೊಂದಿಗೆ ಬೇಗನೆ ಗರಂ ಮಸಾಲೆ ಸೇರಿಸುವುದರಿಂದ ಖಾದ್ಯದ ಮೂಲ ರುಚಿ ಮತ್ತು ಸುವಾಸನೆ ಹಾಳಾಗುತ್ತದೆ. ಕೊನೆಯಲ್ಲಿ ಸೇರಿಸುವುದರಿಂದ ಅಡುಗೆಯ ಘಮ, ರುಚಿ ದ್ವಿಗುಣಗೊಳ್ಳುತ್ತದೆ.

ಅಡುಗೆಯ ಆರಂಭದಲ್ಲಿ ಗರಂ ಮಸಾಲವನ್ನು ಏಕೆ ಸೇರಿಸಬಾರದು?

ಇತರೆ ಮಸಾಲೆ, ತರಕಾರಿ ಇತ್ಯಾದಿಗಳೊಂದಿಗೆ ಆರಂಭದಲ್ಲಿ ಗರಂ ಮಸಾಲವನ್ನು ಸೇರಿಸಿದರೆ, ಮಸಾಲೆ ಫ್ರೈ ಮಾಡುವ ಸಂದರ್ಭದಲ್ಲಿ ಅದು ಹುರಿಯುತ್ತದೆ,  ಅದರ ಪರಿಮಳ ಕಳೆದುಹೋಗುತ್ತದೆ ಮತ್ತು ಕೆಲವೊಮ್ಮೆ ಇದರಿಂದ ಪದಾರ್ಥ ಕಹಿಯಾಗುತ್ತದೆ. ಆದ್ದರಿಂದ   ಗರಂ ಮಸಾಲವನ್ನು ಯಾವಾಗಲೂ ಅಡುಗೆಯ ಕೊನೆಯಲ್ಲಿಯೇ ಸೇರಿಸಬೇಕು.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಈ ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಅಡುಗೆಗೆ ಗರಂ ಮಸಾಲೆ ಸೇರಿಸುವ ಸರಿಯಾದ ವಿಧಾನ:

  • ಗರಂ ಮಸಾಲ ಸೇರಿಸಿದ ನಂತರ, ಪದಾರ್ಥವನ್ನು ನಿಧಾನವಾಗಿ ಬೆರೆಸಿ. ಹೆಚ್ಚು ಹೊತ್ತು ಬೇಯಿಸಬೇಡಿ. ಕೇವಲ 1-2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಕೊನೆಗೆ, ಒಲೆ ಆಫ್ ಮಾಡಿ ಮತ್ತು ಪಾತ್ರೆಯ ಮುಚ್ಚಳ ಮುಚ್ಚಿಡಿ.
  • ಹೆಚ್ಚು ಗರಂ ಮಸಾಲ ಸೇರಿಸುವುದರಿಂದ ಅಡುಗೆಯ ರುಚಿ ಹಾಳಾಗಬಹುದು, ಆದ್ದರಿಂದ ಪ್ರಮಾಣವನ್ನು ಮಿತಿಗೊಳಿಸಿ.ಯಾವಾಗಲೂ ಸಣ್ಣ ಪ್ರಮಾಣದಲ್ಲಿ ಗರಂ ಮಸಾಲ ಸೇರಿಸಬೇಕು. 1/2 ರಿಂದ 1 ಟೀಸ್ಪೂನ್ ಸಾಕು. ಹೆಚ್ಚು ಗರಂ ಸೇರಿಸುವುದರಿಂದ ಅಡುಗೆ ಕಹಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ