Sunscreen In Winter: ಚಳಿಗಾಲದಲ್ಲಿ ತ್ವಚೆಗೆ  ಸನ್ಸ್ಕ್ರೀನ್ ಏಕೆ ಅಗತ್ಯ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2023 | 5:25 PM

ಸನ್ಸ್ಕ್ರೀನ್ ಬಳಕೆಗೆ ಸಂಬಂಧಿಸಿದಂತೆ ದೊಡ್ಡ ಗೊಂದಲವಿದೆ, ಕೆಲವರು ಸನ್ಸ್ಕ್ರೀನ್ನ್ನು ಬೇಸಿಗೆಯಲ್ಲಿ ಮಾತ್ರ ಬಳಸಿದರೆ ಸಾಕು ಎಂದು ಭಾವಿಸುತ್ತಾರೆ. ಏಕೆಂದರೆ ಆ ಸಮಯದಲ್ಲಿ ಸೂರ್ಯನ ನೇರಳಾತೀತ ಕಿರಣಗಳು  ಚರ್ಮವನ್ನು ಹೆಚ್ಚು ಹಾನಿಗೊಳಿಸುತ್ತವೆ. ಚಳಿಗಾಲದಲ್ಲಿ ಹೆಚ್ಚಿನವರು ಸನ್ಸ್ಕ್ರೀನ್ ಅನ್ವಯಿಸುವುದಿಲ್ಲ.  ಆದರೆ ಸನ್ಸ್ಕ್ರೀನ್ ಬಳಕೆ ಬೇಸಿಗೆಯಲ್ಲಿ ಮಾತ್ರವಲ್ಲದೆ ಚಳಿಗಾಲದಲ್ಲಿಯೂ ತುಂಬಾ ಮುಖ್ಯವಾಗಿದೆ.

Sunscreen In Winter: ಚಳಿಗಾಲದಲ್ಲಿ ತ್ವಚೆಗೆ  ಸನ್ಸ್ಕ್ರೀನ್ ಏಕೆ ಅಗತ್ಯ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಮನೆಯಿಂದ ಹೊರಗೆ ಹೋಗುವಾಗ ಯಾವಾಗಲೂ ಮುಖಕ್ಕೆ ಸನ್ಸ್ಕ್ರೀನ್ (Sunscreen) ಅನ್ವಯಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಸನ್ಸ್ಕ್ರೀನ್ ಬಳಕೆ ನಮ್ಮ ಚರ್ಮಕ್ಕೆ ಒಳ್ಳೆಯದು. ಇದಲ್ಲದೆ, ಇದು ಸೂರ್ಯನ ಅಪಾಯಕಾರಿ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ.  ಬೇಸಿಗೆಯಲ್ಲಿ ಹೆಚ್ಚಿನವರು ಸನ್ ಸ್ಕ್ರೀನ್ ಬಳಕೆ ಮಾಡುತ್ತಾರೆ. ಆದರೆ ಚಳಿಗಾಲದಲ್ಲಿ ಸನ್ಸ್ಕ್ರೀನ್  ಅನ್ವಯಿಸುವ ಅಗತ್ಯವಿಲ್ಲ ಎಂದು ಅನೇಕರು ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ.  ವಾಸ್ತವವಾಗಿ ಶೀತ ವಾತಾರಣದಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಚಳಿಗಾಲದಲ್ಲಿ ತ್ವಚೆಯ ಉತ್ತಮ ಆರೈಕೆ ಅತ್ಯಗತ್ಯ.  ಸೂರ್ಯನ ನೇರಳಾತೀತ ಕಿರಣಗಳು ಮಾತ್ರವಲ್ಲದೆ ಚಳಿಗಾಲದ ಶೀತ ಗಾಳಿಯು ಸಹ ತ್ವಚೆಯ ಟ್ಯಾನಿಂಗ್ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಶೀತ ವಾತಾವರಣದಲ್ಲಿ  ಚರ್ಮವನ್ನು  ರಕ್ಷಿಸಲು ಸನ್ಸ್ಕ್ರೀನ್ ಬಳಸುವುದು ಅತ್ಯಗತ್ಯ.

ಚಳಿಗಾಲದಲ್ಲಿಯೂ ನೀವು ಸನ್ಸ್ಕ್ರೀನ್ ಅನ್ವಯಿಸುವುದು  ಏಕೆ ಮುಖ್ಯ ಎಂಬುದನ್ನು ತಿಳಿಯಿರಿ:

ಯುವಿ ವಿಕಿರಣವು ವರ್ಷ ಪೂರ್ತಿ ಇರುತ್ತದೆ: ಚಳಿಗಾಲದಲ್ಲಿ ಸೂರ್ಯನ ಹಾನಿಕಾರಕ ನೇರಳಾತೀತ ಯುವಿ ಕಿರಣವು ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು   ತಪ್ಪು ಕಲ್ಪನೆ. ವಾಸ್ತವದಲ್ಲಿ ಸೂರ್ಯನ ಯುವಿ ಕಿರಣವು ವರ್ಷಪೂರ್ತಿ ಇರುತ್ತದೆ.  ಮೋಡ ಕವಿದ ವಾತಾವರಣದಲ್ಲಿಯೂ ಇರುತ್ತದೆ.  ಅಷ್ಟೇ ಅಲ್ಲದೆ ಓಝೋನ್ ಪದರವು ಚಳಿಗಾಲದಲ್ಲಿ ತೀರಾ ತೆಳ್ಳಗಿರುತ್ತದೆ, ಇದರಿಂದ ಸೂರ್ಯನ ಬೆಳಕು ವಾತಾವರಣವನ್ನು  ಸುಲಭವಾಗಿ ಪ್ರವೇಶಿಸುತ್ತವೆ. ಹೆಚ್ಚುವರಿಯಾಗಿ  ಈ ಋತುವಿನಲ್ಲಿ UVB ಕಿರಣಗಳಿಗಿಂತ UVA ಕಿರಣಗಳು ಹೆಚ್ಚು ಹೊರಸೂಸಲ್ಪಡುತ್ತದೆ, ಈ ಕಾರಣದಿಂದಾಗಿ ಚರ್ಮವು ಸುಡಲು ಪ್ರಾರಂಭಿಸುತ್ತದೆ,  ಸುಕ್ಕುಗಳು ಮತ್ತು ಕಲೆಗಳು ಕಾಣಿಸಿಕೊಳ್ಳುತ್ತದೆ ಇದು ಚರ್ಮದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.  ಆದ್ದರಿಂದ  ಚಳಿಗಾಲದಲ್ಲಿ  ಈ  UVA ಕಿರಣಗಳಿಂದಾಗಿ ಚರ್ಮವನ್ನು ರಕ್ಷಿಸಿಕೊಳ್ಳಲು ಸನ್ಸ್ಕ್ರೀನ್ ಬಳಸುವುದು ಬಹಳ ಮುಖ್ಯ.

ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ: ಚಳಿಗಾಲದಲ್ಲಿ ಚರ್ಮವು ಹೆಚ್ಚಾಗಿ  ಒಣಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ತ್ವಚೆಯ ಹೆಚ್ಚುವರಿ ಆರೈಕೆ ಅಗತ್ಯ. ಈ ಋತುವಿನಲ್ಲಿ ಚರ್ಮವನ್ನು  ಆರೋಗ್ಯಕರವಾಗಿಡಲು ತ್ವಚೆಗೆ ಪ್ರಯೋಜನಕಾರಿ ಅಂಶಗಳನ್ನು ಒದಗಿಸುವುದು ಅವಶ್ಯಕ. ಈ ಪ್ರೋಜನಕಾರಿ ಅಂಶಗಳು ಸನ್ಸ್ಕ್ರೀನ್ನಲ್ಲಿವೆ. ಇದು ಚರ್ಮವನ್ನು ತೇವವಾಗಿಡುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.  ಆದ್ದರಿಂದ ಚಳಿಗಾಲದಲ್ಲಿ ಚರ್ಮದ ಶುಷ್ಕತೆನ್ನು ಹೋಗಲಾಡಿಸಲು  ಸನ್ಸ್ಕ್ರೀನ್ ಬಳಸಿ.

ಇದನ್ನೂ ಓದಿ: ಎಷ್ಟು ಗಂಟೆಗೊಮ್ಮೆ ಸನ್​ಸ್ಕ್ರೀನ್ ಲೋಷನ್ ಹಚ್ಚುತ್ತಿರಬೇಕು?; ತಜ್ಞರ ಉತ್ತರ ಇಲ್ಲಿದೆ

ನೇರಳಾತೀತ ಕಿರಣಗಳಿಂದ ರಕ್ಷಣೆ: ಸನ್ಸ್ಕ್ರೀನ್ ನಮ್ಮ ಚರ್ಮವನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಶೀತ ಋತುವಿನಲ್ಲಿ ಸೂರ್ಯನಿಂದ ಹೊರಹೊಮ್ಮುವ ಕಿರಣಗಳು ನಮ್ಮ ಚರ್ಮಕ್ಕೆ ತುಂಬಾ ಅಪಾಯಕಾರಿ, ಆದ್ದರಿಂದ ಶೀತ ಋತುವಿನಲ್ಲಿ ಸನ್ಸ್ಕ್ರೀನ್  ಅನ್ವಯಿಸುವುದು ತುಂಬಾ ಮುಖ್ಯವಾಗಿದೆ.

ದೀರ್ಘಾವಧಿಯ ಹಾನಿಯನ್ನು ತಡೆಗಟ್ಟುತ್ತದೆ: ಸನ್ಸ್ಕ್ರೀನ್ನ  ಬಳಕೆ ಚಳಿಗಾಲದಲ್ಲಿಯೂ ಸೂರ್ಯನ ಹಾನಿಯಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು  ತಡೆಗಟ್ಟುತ್ತದೆ. ಪ್ರತಿನಿತ್ಯ  ಸನ್ಸ್ಕ್ರೀನ್  ಅನ್ವಯಿಸುವುದರಿಂದ ದೀರ್ಘಾವಧಿಯವರೆಗೆ  ಚರ್ಮದ ಆರೋಗ್ಯ ಮತ್ತು ತಾರುಣ್ಯವನ್ನು ಕಾಪಾಡಿಕೊಳ್ಳಬಹುದು.  ಅಲ್ಲದೆ ಸೂರ್ಯನ ನೆರಳಾತೀತ ಕಿರಣಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳು ಬಾರದಂತೆಯೂ ತಡೆಗಟ್ಟಬಹುದು.

ಆರೋಗ್ಯ, ಸೌಂದರ್ಯದ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Mon, 30 October 23