ತೆಂಗು ಒಂದು ಬಹುಪಯೋಗಿ ವೃಕ್ಷವಾಗಿದ್ದು, ಈ ವೃಕ್ಷದ ಪ್ರತಿಯೊಂದು ಭಾಗವೂ ನಮಗೆ ಉಪಯೋಗಕ್ಕೆ ಬರುತ್ತದೆ. ತೆಂಗಿನ ಮರದ ನಾರಿನಿಂದ ಹಗ್ಗ ತಯಾರಿಸಲಾಗುತ್ತದೆ. ಅವುಗಳ ಗರಿಗಳಿಂದ ಪೊರಕೆ ಮತ್ತು ಶುಭ ಸಮಾರಂಭದಲ್ಲಿ ಚಪ್ಪರ ತಯಾರಿಸಲಾಗುತ್ತದೆ. ಕೊಬ್ಬರಿಯಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೆ ತೆಂಗನ್ನು ದೇವರ ಪೂಜೆಯಿಂದ ಹಿಡಿದು, ಅಡುಗೆ, ಔಷಧಿ ಮತ್ತು ಸೌಂದರ್ಯ ವರ್ಧಕಗಳಲ್ಲಿಯೂ ಬಳಸಲಾಗುತ್ತದೆ.ಅದಕ್ಕಾಗಿಯೇ ತೆಂಗನ್ನು ಕಲಿಯುವ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ತೆಂಗು ಕೃಷಿಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನರಲ್ಲಿ ಅರಿವು ಮೂಡಿಸುವು ಹಾಗೂ ತೆಂಗು ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 2ನೇ ತಾರಿಕಿನಂದು ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯನ್ನು ಯಾವಾಗ ಪ್ರಾರಂಭಿಸಲಾಯಿತು, ಅದರ ಹಿನ್ನೆಲೆ ಏನೆಂಬುವುದನನು ನೋಡೋಣ.
ವಿಶ್ವ ತೆಂಗು ದಿನವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2, 2009 ರಲ್ಲಿ ಆಚರಿಸಲಾಯಿತು. ಏಷ್ಯನ್ ಪೆಸಿಫಿಕ್ ತೆಂಗು ಸಮುದಾಯದ (APCC) ವತಿಯಿಂದ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಇದನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಜಾಗತಿಕವಾಗಿ ತೆಂಗು ಕೃಷಿಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ತೆಂಗು ಕೃಷ್ಟಿಗೆ ಉತ್ತೇಜನ ನೀಡುವುದಾಗಿದೆ.
ಯುನೈಟೆಡ್ ನೇಷನ್ಸ್ ಎಕನಾಮಿಕ್ ಆಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಆಂಡ್ ಪೆಸಿಫಿಕ್ (UN-ESCAP) ಆಶ್ರಯದಲ್ಲಿ 1969, ಸೆಪ್ಟೆಂಬರ್ 2ರಂದು ಅಂತರಾಷ್ಟ್ರೀಯ ತೆಂಗು ಸಮುದಾಯವನ್ನು (ICC) ಸ್ಥಾಪಿಸಲಾಯಿತು. ಈ ದಿನದ ನೆನಪಿಗಾಗಿ ಸೆಪ್ಟೆಂಬರ್ 2ರಂದು ವಿಶ್ವ ತೆಂಗು ದಿನವನ್ನು ಸ್ಥಾಪನೆ ಮಾಡಲಾಯಿತು. ಅಂತರಾಷ್ಟ್ರೀಯ ತೆಂಗು ಸಮುದಾಯವನ್ನು ನಂತರಲ್ಲಿ ಏಷ್ಯನ್ ಫೆಸಿಫಿಕ್ ತೆಂಗು ಸಮುದಾಯ ಎಂದು ಹೆಸರಿಸಲಾಯಿತು. ಇದರ ಪ್ರಧಾನ ಕಛೇರಿ ಇಂಡೋನೇಷ್ಯಾದ ಜಕಾರ್ತಾದಲ್ಲಿದೆ ಮತ್ತು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವವನ್ನು ಹೊಂದಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲದೆ ಆರ್ಥಿಕವಾಗಿಯೂ ತೆಂಗಿನ ಮಹತ್ವವನ್ನು ಸಾರಲು ಪ್ರತಿವರ್ಷ ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ. ತೆಂಗು ಕೃಷಿ ಮತ್ತು ಉದ್ಯಮದ ಬಗ್ಗೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಈ ದಿನದಂದು ತೆಂಗಿನಕಾಯಿ ಉತ್ಪಾದನೆಯಲ್ಲಿ ತೊಡಗಿರುವ ರೈತರು ಮತ್ತು ಉದ್ಯಮಿಗಳಿಗಾಗಿ ವಿವಿಧ ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಇದು ಅವರ ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: