
ಬಿಳಿ ಬಣ್ಣದ ನಂಬರ್ ಪ್ಲೇಟ್: ಬಿಳಿ ಬಣ್ಣದ ನಂಬರ್ ಪ್ಲೇಟ್ ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿರುವ ಕಾರಿನಲ್ಲಿ ನೋಡಿರುತ್ತೀರಿ. ಬಿಳಿ ಬಣ್ಣವು ಇದು ವೈಯಕ್ತಿಕ ಬಳಕೆಗಾಗಿ ನೀವು ಈ ವಾಹನವನ್ನು ಬಳಸಲು ಎಂಬ ಅರ್ಥವನ್ನು ಸೂಚಿಸುತ್ತದೆ.

ಹಳದಿ ಬಣ್ಣದ ನಂಬರ್ ಪ್ಲೇಟ್: ಕಾರಿನ ನಂಬರ್ ಅನ್ನು ಹಳದಿ ಫಲಕದಲ್ಲಿ ಕಪ್ಪು ಶಾಯಿಯಿಂದ ಬರೆದರೆ, ಅಂತಹ ವಾಹನವನ್ನು ವಾಣಿಜ್ಯ ವ್ಯಾವಹಾರಗಳ ವಾಹನ ಎಂದರ್ಥ. ಟ್ರಕ್‌ಗಳು ಮತ್ತು ಖಾಸಗಿ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಚಾಲಕರಿಗೆ ಈ ಬಣ್ಣದ ಕೋಡ್ ಪ್ಲೇಟ್ ಕಡ್ಡಾಯವಾಗಿದೆ.

ಕೆಂಪು ಬಣ್ಣದ ರಾಷ್ಟ್ರಲಾಂಛನವಿರುವ ನಂಬರ್ ಪ್ಲೇಟ್: ಕೆಂಪುಬಣ್ಣದ ನಂಬರ್ ಪ್ಲೇಟ್ ಮೇಲೆ ಚಿನ್ನದ ಬಣ್ಣದ ಭಾರತದ ಲಾಂಛನವನ್ನು ಹೊಂದಿರುವ ನಂಬರ್ ಪ್ಲೇಟ್ಗಗಳು ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯಗಳ ಗವರ್ನರ್‌ಗಳು ಪರವಾನಗಿ ಫಲಕಗಳಿಲ್ಲದೆ ಅಧಿಕೃತವಾಗಿ ಬಳಸುವ ಕಾರು ಎಂಬುದನ್ನು ಸೂಚಿಸುತ್ತದೆ.

ನೀಲಿ ಬಣ್ಣದ ನಂಬರ್ ಪ್ಲೇಟ್: ವಿದೇಶಿ ರಾಜತಾಂತ್ರಿಕರಿಗೆ ಕಾಯ್ದಿರಿಸಿದ ವಾಹನಕ್ಕೆ ಆಯಾ ಪ್ರಾಧಿಕಾರದಿಂದ ಬಿಳಿ ಅಕ್ಷರಗಳೊಂದಿಗೆ ನೀಲಿ ಬಣ್ಣದ ನಂಬರ್ ಪ್ಲೇಟ್ ನೀಡಲಾಗುತ್ತದೆ. ಈ ನಂಬರ್ ಪ್ಲೇಟ್‌ಗಳು DC (ಡಿಪ್ಲೊಮ್ಯಾಟಿಕ್ ಕಾರ್ಪ್ಸ್), CC (ಕಾನ್ಸುಲರ್ ಕಾರ್ಪ್ಸ್), UN (ಯುನೈಟೆಡ್ ನೇಷನ್ಸ್) ಮುಂತಾದ ಅಕ್ಷರಗಳೊಂದಿಗೆ ನಂಬರ್ಗಳನ್ನು ಕಾಣಬಹುದು.

ಹಳದಿ ಬರಹಗಳ ಕಪ್ಪು ನಂಬರ್ ಪ್ಲೇಟ್: ಈ ರೀತಿಯ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಕಾರುಗಳು ಸ್ವಯಂ ಚಾಲನೆಗಾಗಿ ಬಾಡಿಗೆಗೆ ಲಭ್ಯವಿರುವ ವಾಣಿಜ್ಯ ವಾಹನಗಳಾಗಿವೆ. ಇದರ ಜೊತೆಗೆ ಕಾಲನುಸಾರವಾಗಿ ಇದನ್ನು ಬದಲಾವಣೆ ಮಾಡಿಕೊಳ್ಳಬಹುದು. ಉದಾಹರಣೆಗೆ Zoomcar & Justride ಸ್ಟಾರ್ಟ್‌ಅಪ್‌ಗಳು ಈ ವರ್ಗದ ಅಡಿಯಲ್ಲಿ ಈ ವಾಹನಗಳು ಬರುತ್ತವೆ.

ಮೇಲ್ಮುಖವಾಗಿ ಬಾಣದ ಗುರುತು ಹೊಂದಿರುವ ನಂಬರ್ ಪ್ಲೇಟ್: ಈ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳು ದೆಹಲಿಯ ರಕ್ಷಣಾ ಸಚಿವಾಲಯದಲ್ಲಿ ನೋಂದಾಯಿಸಲಾದ ಮಿಲಿಟರಿ ವಾಹನಗಳಾಗಿವೆ. ಈ ನೋಂದಣಿ ಫಲಕಗಳು ಮೊದಲ ಅಥವಾ ಎರಡನೆಯ ಅಕ್ಷರದ ನಂತರ ಮೇಲ್ಮುಖವಾಗಿ ಸೂಚಿಸುವ ಬಾಣವನ್ನು ಹೊಂದಿರುತ್ತವೆ. ಬಾಣದ ನಂತರ ಬರುವ ಸಂಖ್ಯೆಗಳು ವಾಹನವನ್ನು ಖರೀದಿಸಿದ ವರ್ಷವನ್ನು ಸೂಚಿಸುತ್ತವೆ. ಕೊನೆಯ ಅಕ್ಷರವು ವಾಹನದ ವರ್ಗವನ್ನು ಸೂಚಿಸುತ್ತದೆ.

ಹಸಿರು ಬಣ್ಣದ ನಂಬರ್ ಪ್ಲೇಟ್: ಭಾರತ ಸರ್ಕಾರವು ಈ ಹಿಂದೆ ದೇಶದಲ್ಲಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಹಸಿರು ಬಣ್ಣದ ನಂಬರ್ ಪ್ಲೇಟ್ ಅನ್ನು ಪ್ರಸ್ತಾಪಿಸಿತ್ತು. ವಿಶೇಷ ನಂಬರ್ ಪ್ಲೇಟ್ನಲ್ಲಿ ವಾಹನಸ ಸಂಖ್ಯೆಯನ್ನು ಹಸಿರು ಬಣ್ಣದ ಪ್ಲೇಟ್ ಮೇಲೆ ಬಿಳಿ ಬಣ್ಣದಲ್ಲಿ ಬರೆಯಲಾಗಿರುತ್ತದೆ. ಇಂತಹ ವಾಹನಗಳಿಗೆ ಪಾರ್ಕಿಂಗ್, ದಟ್ಟಣೆಯ ಪ್ರದೇಶಗಳಲ್ಲಿ ಉಚಿತ ಪ್ರವೇಶ ಮತ್ತು ಹೆದ್ದಾರಿಗಳಲ್ಲಿ ಟೋಲ್ ರಿಯಾಯಿತಿ ಸಿಗಲಿದೆ.