Anjeer: ಅಂಜೂರದ ಪ್ರಯೋಜನಗಳೇನು? ಪ್ರತಿದಿನ ಅಂಜೂರವನ್ನು ಏಕೆ ಸೇವಿಸಬೇಕು? ಇಲ್ಲಿವೆ 5 ಕಾರಣಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2023 | 5:07 PM

ಅಂಜೂರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಅಂಜೂರವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Anjeer: ಅಂಜೂರದ ಪ್ರಯೋಜನಗಳೇನು? ಪ್ರತಿದಿನ ಅಂಜೂರವನ್ನು ಏಕೆ ಸೇವಿಸಬೇಕು? ಇಲ್ಲಿವೆ 5 ಕಾರಣಗಳು
ಸಾಂದರ್ಭಿಕ ಚಿತ್ರ
Follow us on

ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಈ ಹಣ್ಣಿನ ಮತ್ತೊಂದು ಹೆಸರು ಅಂಜೀರ್ ಒಂದು ರೀತಿಯ ಸಣ್ಣ ಹಣ್ಣು, ಇದನ್ನು ತಾಜಾ ಮತ್ತು ಒಣಗಿಸಿಯೂ ತಿನ್ನಬಹುದು. ಹೀಗೆ ಎರಡೂ ರೀತಿಯ ಸೇವನೆಯಿಂದ ವಿಭಿನ್ನ ಪ್ರಯೋಜನಗಳಿವೆ. ಈ ಹಣ್ಣು ವಿಭಿನ್ನವಾಗಿ ಕಾಣುವುದರ ಜೊತೆಗೆ ರುಚಿಯನ್ನು ಹೊಂದಿರುತ್ತವೆ. ಅಂಜೂರ ಹೆಚ್ಚು ಬಾಳಿಕೆ ಬರುತ್ತದೆ ಆದರೆ ತಾಜಾ ಹಣ್ಣುಗಳಲ್ಲ ಬದಲಾಗಿ ಒಣಗಿದಾಗ ಹೆಚ್ಚು ಕಾಲ ಉಳಿಯುತ್ತವೆ. ಅಂಜೂರವು ಹಿಪ್ಪುನೇರಳೆ ಕುಟುಂಬಕ್ಕೆ ಸೇರಿದ ಸಣ್ಣ ಪೇರಳೆ ಅಥವಾ ಗಂಟೆ ಆಕಾರದ ಹೂ ಬಿಡುವ ಸಸ್ಯ ಎಂದು ನಿಮಗೆ ತಿಳಿದಿರಬಹುದು. ಪೌಷ್ಟಿಕತಜ್ಞರ ಪ್ರಕಾರ ಅಂಜೂರವು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ಆರೋಗ್ಯಕರ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ಯಾವಾಗಲೂ ಲಭ್ಯವಿರುವುದರಿಂದ ವರುಷದ ಪ್ರತಿದಿನವೂ ತಿನ್ನಬಹುದು.

ಪ್ರತಿದಿನ ಅಂಜೂರ ತಿನ್ನುವುದರಿಂದಾಗುವ ಐದು ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:

-ಅಂಜೂರದಲ್ಲಿ ಫೈಬರ್ ಅಂಶ ಹೇರಳವಾಗಿದ್ದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಆರೋಗ್ಯ ಕಾಪಾಡುತ್ತದೆ. ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ತಿಂದ ಆಹಾರ ಅಜೀರ್ಣವಾಗುವುದು ತಪ್ಪುತ್ತದೆ.

-ಅಂಜೂರವು ದೇಹದ ಆಕ್ಸಿಡೇಟಿವ್ ಒತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಬ್ಸಿಸಿಕ್ ಆಮ್ಲ, ಮಾಲಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ ಆಮ್ಲಗಳು ಅಂಜೂರದಲ್ಲಿರುವ ಪ್ರಮುಖ ಸಂಯುಕ್ತಗಳಾಗಿವೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

-ಈ ಹಣ್ಣು ಕ್ಯಾಲ್ಸಿಯಂ ಮತ್ತು ರಂಜಕ ಸಮೃದ್ಧವಾಗಿರುವ ಆಹಾರಗಳಲ್ಲಿ ಒಂದಾಗಿರುವುದು ಮೂಳೆಗಳ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಮೂಳೆಗಳ ಮರು ಬೆಳವಣಿಗೆಗೆ ಸಹಾಯ ಮಾಡುತ್ತದೆ.

-ಪೊಟ್ಯಾಸಿಯಮ್ ಒಂದು ಪ್ರಮುಖ ಖನಿಜವಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ. ಅಂಜೂರದಲ್ಲಿರುವ ಪೊಟ್ಯಾಸಿಯಮ್ನ ಸ್ನಾಯುಗಳು ಮತ್ತು ನರಗಳ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ, ವ್ಯವಸ್ಥೆಯಲ್ಲಿನ ದ್ರವವನ್ನು ಸಮತೋಲನಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

-ವಿಟಮಿನ್ ಸಿ, ಇ ಮತ್ತು ಎ ಮತ್ತು ಪ್ರಬಲ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಚರ್ಮವನ್ನು ಪೋಷಿಸಲು ಮತ್ತು ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:Anjeer Benefits: ನೀವು ತೂಕ ಇಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದೀರಾ ಹಾಗಾದರೆ ಈ ಹಣ್ಣು ನಿಮಗೆ ಸಹಾಯ ಮಾಡಬಹುದು

ಯಾವುದೇ ಆದರೂ ಅತಿಯಾದರೆ ವಿಷವೇ. ಕೆಲವೊಮ್ಮೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಡ್ರೈ ಫ್ರೂಟ್ಸ್ ಸೇವಿಸುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಅಲ್ಲದೆ ಇವುಗಳಲ್ಲಿ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿರುತ್ತದೆ. ಆದರೆ ನಾವು ಇವುಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು. ಉದಾಹರಣೆಗೆ ಕ್ಯಾಲ್ಸಿಯಂ ಕೊರತೆ, ಹೊಟ್ಟೆ ಉಬ್ಬರಿಕೆ, ಕಿಡ್ನಿ ಮತ್ತು ಮೂತ್ರಕೋಶದ ಸಮಸ್ಯೆ, ರಕ್ತಸ್ರಾವದ ತೊಂದರೆ ಹೀಗೆ ಹಲವಾರು ರೀತಿಯ ತೊಂದರೆಗಳನ್ನೂ ಎದುರಿಸಬೇಕಾಗುತ್ತದೆ.