ಜೇನುನೊಣ(Honey Bee) ಗಳ ಪ್ರಾಮುಖ್ಯತೆ, ಸುಸ್ಥಿರ ಅಭಿವೃದ್ಧಿಗೆ ಜೇನುನೊಣಗಳ ಕೊಡುಗೆಗಳು ಹಾಗೂ ಜೇನುನೊಣಗಳಿಗೆ ಮನುಷ್ಯನ ಚಟುವಟಿಕೆಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಮೇ 20ರಂದು ವಿಶ್ವ ಜೇನುನೊಣ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆ ನೀಡಿತ್ತು. ನಾವು ಜೇನುನೊಣಗಳಿಗೆ ಅವಲಂಬಿತರಾಗಿದ್ದೇವೆ. ಜೇನುನೊಣಗಳು ಪರಾಗಸ್ಪರ್ಶದ ಮೂಲಕ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಜೇನುತುಪ್ಪ ಮತ್ತು ಇತರ ಜೇನಿನ ಉತ್ಪನ್ನಗಳು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮತ್ತು ಆದಾಯ ಒದಗಿಸುತ್ತದೆ.
ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೆ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತಿಪ್ಪತ್ತು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ.
ಕೃಷಿ ಹಾಗೂ ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಜೇನು ಸಾಕಣಿಕೆ 5ನೇ ಸ್ಥಾನದಲ್ಲಿದೆ. ಜೇನುಸಾಕಣೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಗ್ರಾಮೀಣ ಪ್ರದೇಶದ ರೈತರು ಜೇನು ಸಾಕಣೆ ಚಟುವಟಿಕೆಯನ್ನು ನಡೆಸಲು ಹಾಗೂ ದೇಶದಲ್ಲಿ ವೈಜ್ಞಾನಿಕ ಜೇನುಸಾಕಣೆಯ ಅಭಿವೃದ್ಧಿಗಾಗಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ ಅಡಿಯಲ್ಲಿ ಜೇನುಸಾಕಣಿಕೆಗೆ ಪ್ರೋತ್ಸಾಹ ನಿಡುವ ಘಟಕವೊಂದನ್ನು ತೆರೆಯಲಾಗಿದೆ.
ದೇಶದಲ್ಲಿ ಸಿಹಿ ಕ್ರಾಂತಿಯ ಗುರಿ ಸಾಧಿಸಲು ವೈಜ್ಞಾನಿಕ ಜೇನುಸಾಕಣೆಯ ಪ್ರಚಾರ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಹನಿ ಮಿಷನ್ (ಎನ್‌ಬಿಎಚ್‌ಎಂ) ಎಂಬ ಹೊಸ ಯೋಜನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ.
ಇದರ ಮೂಲಕ ಜೇನು ಸಾಕಣಿಕೆ ತರಬೇತಿ, ಜೇನು ಉತ್ಪಾದನೆಗೆ ಬೆಂಬಲ, ಜೇನುಸಾಕಣೆ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಜೇನು ಸಂಸ್ಕರಣೆಗೆ ಸಹಾಯ, ಮಾರುಕಟ್ಟೆ ಬೆಂಬಲ, ವ್ಯಾಪಾರದಲ್ಲಿ ಸಹಾಯ, ಜೇನು ಪರೀಕ್ಷಾ ಪ್ರಯೋಗಾಲಯಗಳು, ಜೇನುನೊಣಗಳ ಕಾಯಿಲೆಗೆ ಸಂಬಂಧಿಸಿದ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿಶ್ವ ಜೇನುನೊಣ ದಿನವಾದ ಮೇ 20ರಂದು ಪ್ರತಿವರ್ಷ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೇನುನೊಣ ದಿನವನ್ನು ಆಚರಿಸಲು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಹಾಗೂ ಸರ್ಕಾರ ನಿರ್ಧರಿಸಿದೆ.
ವಿಶ್ವ ಜೇನುನೊಣ ದಿನದ ಹಾಗೂ ಈ ದಿನಾಂಕ ಮತ್ತು ಉದ್ದೇಶ ಏಕೆ?
ಮೇ 20 ರಂದು, ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು, ಆದ್ದರಿಂದ ಪ್ರತಿ ವರ್ಷ ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯಿಂದ ಅನುಮೋದಿಸಲ್ಪಟ್ಟ, ಮೊದಲ ವಿಶ್ವ ಜೇನುನೊಣ ದಿನವನ್ನು ಮೇ 20, 2018 ರಂದು ಆಚರಿಸಲಾಯಿತು. ವಿಶ್ವ ಜೇನುನೊಣ ದಿನ 2022 ಈ ವರ್ಷದ ಮೇ 20 ಶುಕ್ರವಾರ ಬರುತ್ತದೆ.
ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್‌ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು.
ಜೇನುನೊಣಗಳನ್ನು ಉಳಿಸಿ ಕಾರ್ಯಕ್ರಮದ ಮೂಲಕ ಸಮಾವೇಶಗಳು, ಸೆಮಿನಾರ್ಗಳು, ಜೇನು ಉತ್ಸವಗಳು, ಪ್ರದರ್ಶನಗಳು, ಕೃಷಿ ಹಾಗೂ ತೋಟಗಾರಿಕೆಯಲ್ಲಿ ಜೇನುನೊಣಗಳ ಪ್ರಾಮುಖ್ಯತೆಯ ಕುರಿತು ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕೆಗಳ ಮೂಲಕ ಪ್ರಚಾರ, ಜೇನುತುಪ್ಪದ ಬಳಕೆ ಕುರಿತು ಪುಸ್ತಕಗಳನ್ನು ಪ್ರಕಟಿಸುವುದು ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
ಅಳಿವಿನಂಚಿನಲ್ಲಿವೆ ಜೇನುನೊಣಗಳು
ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ಹಾಗೂ ಜೇನು ಹುಳುಗಳು ಮಾನವ ಸಂಕುಲಕ್ಕೆ ಪ್ರಕೃತಿ ದತ್ತವಾಗಿ ಸಿಕ್ಕಿರುವ ವರ. ಜೇನುನೊಣಗಳು ಮತ್ತು ಬಾವಲಿಗಳು, ಚಿಟ್ಟೆಗಳಂತಹ ಇತರ ಪರಾಗಸ್ಪರ್ಶಕಗಳು ಕ್ರಮೇಣ ಮಾನವ ಚಟುವಟಿಕೆಗಳಿಂದಾಗಿ ಅಳಿವಿನ ಅಂಚಿನಲ್ಲಿ ಅಪಾಯದಲ್ಲಿದೆ. ತಜ್ಞರ ಪ್ರಕಾರ, ನಮ್ಮ ಪರಿಸರ ವ್ಯವಸ್ಥೆಯ ಉಳಿವು ಹೆಚ್ಚಾಗಿ ಪರಾಗಸ್ಪರ್ಶದ ಮೂಲಭೂತ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಹೂಬಿಡುವ ಹೆಚ್ಚಿನ ಸಸ್ಯ ಪ್ರಭೇದಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ರಾಣಿಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಅಷ್ಟೇ ಅಲ್ಲ, ಪರಾಗಸ್ಪರ್ಶಕಗಳು ಆಹಾರ ಸುರಕ್ಷತೆ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಹಕರಿಸುತ್ತವೆ.
ಆದ್ದರಿಂದ ಪರಾಗಸ್ಪರ್ಶಕಗಳ ಪ್ರಾಮುಖ್ಯತೆ, ಅವರು ಎದುರಿಸುತ್ತಿರುವ ಬೆದರಿಕೆಗಳು ಮತ್ತು ಸುಸ್ಥಿರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜೇನುನೊಣ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಜೇನುನೊಣ ದಿನಾಚರಣೆ 2020 ಅನ್ನು ಈ ಬಾರಿ ಮೇ 20 ರಂದು ಆಚರಿಸಲಾಗುತ್ತಿದೆ.
ವಿಶ್ವ ಜೇನುನೊಣ ದಿನ 2022:
ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ವಿಶ್ವ ಜೇನುನೊಣ ದಿನ 2022ರಲ್ಲಿ ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕಗಳನ್ನು ರಕ್ಷಿಸುವ ಕ್ರಮಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವಿಶ್ವ ಜೇನುನೊಣ ದಿನಾಚರಣೆಯು ಜಾಗತಿಕ ಆಹಾರ ಪೂರೈಕೆ ಸರಪಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಹಸಿವನ್ನು ಹೋಗಲಾಡಿಸಲು ಗಮನಾರ್ಹವಾಗಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
ಜೇನುನೊಣಗಳು ನೋಡಲು ಚಿಕ್ಕದಿರಬಹುದು. ಆದರೆ, ಈ ಜೇನುನೊಣಗಳ ಮೇಲೆಯೇ ಮನುಷ್ಯನ ಬದುಕು ಅವಲಂಬಿತವಾಗಿದೆ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಸಾಧ್ಯವಿಲ್ಲ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ಜೇನುನೊಣಗಳು ಮಾಡುತ್ತಿಲ್ಲ.
ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ಬಹುದೊಡ್ಡ ಪಾತ್ರ. ಹೀಗಾಗಿ, ಮನುಷ್ಯ ತಿನ್ನುವ ಬಹುತೇಕ ಹಣ್ಣು, ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗ ಸ್ಪರ್ಶದ ಪ್ರಯತ್ನ. ಮನುಷ್ಯ ತಿನ್ನುವ ಶೇ 70ರಷ್ಟು ಆಹಾರ ಜೇನುನೊಣಗಳನ್ನೇ ಅವಲಂಬಿಸಿದೆ ಎಂದಾಗಲೇ ಇವುಗಳ ಮಹತ್ವ ಎಂತಹದ್ದು ಎಂಬುದು ಗೊತ್ತಾಗುತ್ತದೆ.
ಬಾಕಿ ಉಳಿದ ಶೇ. 30 ಚಿಟ್ಟೆ , ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಬಿಸಿದೆ. ಹೀಗಾಗಿ, ಜೇನುನೊಣಗಳು ಇಲ್ಲದೇ ಇದ್ದರೆ ನಾವು ತಿನ್ನುವ ಯಾವ ವಸ್ತುವೂ ನಮ್ಮ ಕೈಸೇರದು! ಆದರೆ, ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದಿಢೀರ್ ಆಗಿ ಜೇನುನೊಣಗಳು ಸಾವನ್ನಪ್ಪುತ್ತಿವೆ. ಇದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಶ್ವ ಜೇನುನೊಣ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ವಿಶ್ವ ಜೇನುನೊಣ ದಿನವನ್ನು ಜಗತ್ತಿನಲ್ಲಿ ಸಾಕಷ್ಟು ಹುಮ್ಮಸ್ಸು ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ವಿಶ್ವ ಜೇನುನೊಣ ದಿನದ ಮಹತ್ವದ ಬಗ್ಗೆ ಮಾತನಾಡುವ ಚಟುವಟಿಕೆಗಳು, ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಬಹಳಷ್ಟು ಸಂಸ್ಥೆಗಳು ಒಗ್ಗೂಡುತ್ತಿವೆ. ಚಾರಿಟಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ಇದರಿಂದ ಜನರು ಜೇನುನೊಣ ಪ್ರಭೇದಗಳನ್ನು ಸಂರಕ್ಷಿಸಲು ಸಹಕರಿಸುವಂತಾಗುತ್ತದೆ. ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ, 2022ರ ವಿಶ್ವ ಜೇನುನೊಣ ದಿನದಂದು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಮಧುಮೇಹಿಯೂ ಜೇನುತುಪ್ಪ ಸವಿಯಬಹುದು
ಮಧುಮೇಹಿಗಳೂ ಜೇನು ತಿನ್ನಬಹುದು. ಮನೆಯಲ್ಲೇ ಇರುವ ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗ ಜೇನು ಕೃಷಿ. ಜೇನುಸಾಕಣೆ ಲಾಭದಾಯಕ ಉಪಕಸುಬು. ಅಂಗೈ ಅಗಲ ಜಾಗ ಇದ್ದರೂ ಸಾಕು, ಜೇನು ಬೇಸಾಯ ಮಾಡಬಹುದು. ಒಂದೆರಡು ಜೇನುಪೆಟ್ಟಿಗೆಗಳನ್ನು ಇಟ್ಟರೆ ಮನೆಗೆ ಬೇಕಾದಷ್ಟು ಜೇನುತುಪ್ಪ ಉತ್ಪಾದಿಸಬಹುದು.
ಜೀವನಶೈಲಿ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ