ಕ್ಯಾಂಪಸ್ ಆಧಾರಿತ ಸಂಶೋಧನೆ ಬಿಟ್ಟು ರೈತರ ಭೂಮಿ ಆಧಾರಿತ ಸಂಶೋಧನೆ ಮಾಡಿ ಎಂದು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ: ಬಸವರಾಜ ಬೊಮ್ಮಾಯಿ
150 ಕ್ಕೂ ಹೆಚ್ಚು ಮೊಬೈಲ್ ಲ್ಯಾಬ್ಗಳನ್ನ ನೀಡಲಾಗುತ್ತಿದೆ. ಮಣ್ಣಿನ ಸರದ ಆಧಾರದ ಮೇಲೆ ಅದನ್ನ ತುಂಬುವ ಕೆಲಸ ಆಗ್ಬೇಕು. ಬೀಜದ ಉತ್ಪಾದನೆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು. ನಕಲಿ ಬೀಜಗಳ ಹಾವಳಿಯನ್ನ ತೆಡೆಗಟ್ಟಬೇಕಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಹತ್ತು ಕೃಷಿ ವಲಯಗಳಿವೆ. ರಾಜ್ಯದಲ್ಲಿ ಬೆಳೆಯಲಾಗುವ ಬೆಳೆಗಳನ್ನು ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಕೃಷಿ ವಿಶ್ವವಿದ್ಯಾಲಯದವರು ಕ್ಯಾಂಪಸ್ನಿಂದ ಹೊರಗೆ ಬನ್ನಿ. ಕ್ಯಾಂಪಸ್ ಆಧಾರಿತ ಸಂಶೋಧನೆ ಬಿಟ್ಟು ರೈತರ ಭೂಮಿ ಆಧಾರಿತ ಸಂಶೋಧನೆ ಮಾಡಲು ಕಲಿಯಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ. ರೈತರ ಬದುಕು ಹಾಗೂ ಬೆಳೆ ವಿಚಾರವಾಗಿ ಜಿಕೆವಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ಪಾನ್ಸರ್ ಸಿಗುತ್ತಾರೆ ಅಂತಾ ಸಂಶೋಧನೆ ಮಾಡುವುದಲ್ಲ. ರೈತರಿಗಾಗಿ ಸಂಶೋಧನೆ ಮಾಡಿ. ಸಮಗ್ರ ಕೃಷಿಯಲ್ಲಿ ಎಲ್ಲಾವೂ ಬರುತ್ತದೆ. ಗೈನು ಗಾರಿಕೆಯನ್ನ ಭೂಮಿ ಜೊತೆಗೆ ಜೋಡಿಸಬೇಕು, ರೈತನ ಜೊತೆಗೆ ಜೋಡಿಸುವುದಲ್ಲ. 130 ಕೋಟಿ ಜನಸಂಖ್ಯೆಗೂ ಆಹಾರವನ್ನ ಕೊಟ್ಟ ರೈತ ಎಲ್ಲಿದ್ದಾನೋ ಅಲ್ಲೇ ಇದಾನೆ. ಕೃಷಿಯ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನ ಮೋದಿಯವ್ರು ಮಾಡುತ್ತಿದ್ದಾರೆ ಎಂದು ಹೇಳಿದರು.
150 ಕ್ಕೂ ಹೆಚ್ಚು ಮೊಬೈಲ್ ಲ್ಯಾಬ್ಗಳನ್ನ ನೀಡಲಾಗುತ್ತಿದೆ. ಮಣ್ಣಿನ ಸರದ ಆಧಾರದ ಮೇಲೆ ಅದನ್ನ ತುಂಬುವ ಕೆಲಸ ಆಗ್ಬೇಕು. ಬೀಜದ ಉತ್ಪಾದನೆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು. ನಕಲಿ ಬೀಜಗಳ ಹಾವಳಿಯನ್ನ ತೆಡೆಗಟ್ಟಬೇಕಾಗಿದೆ. ನಾವು ಕೊಡುವ ಬೀಜ ಗೊಬ್ಬರ ಬೇರೆ ವಿಚಾರ ಖಾಸಗಿಯವರು ಕೊಡುವ ನಕಲಿ ಬೀಜ ಗೊಬ್ಬರದ ಮೇಲೆ ಯಾವಾಗ ಕೊಟ್ಟಿದ್ದಾರೆ ಏನು ಎಂಬ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಭೂಮಿಯನ್ನ ಮಾತೃ ಭೂಮಿ ಅಂತ ಕರೆಯುತ್ತೇವೆ. ಕೃಷಿಕರು ಯಾರಿಗೂ ಅನ್ಯಾಯ ಮಾಡಲ್ಲ. ಮಾತೃ ಭೂಮಿಯ ಜೊತೆಗೆ ಬೆರತಿರುತ್ತಾರೆ. ಈಡೀ ಜೀವನ ತಾಯಿ ಗರ್ಭದಿಂದ ಪ್ರಾರಂಭವಾಗಿ ಭೂ ತಾಯಿಯವರೆಗೂ ಇರುತ್ತೆ.
ಭೂ ತಾಯಿ ಸಂರಕ್ಷಣೆ ಮಾಡ್ತಾರೆ ಅಂದ್ರೆ ಅದು ಕೃಷಿಕರಿಂದ. ರೈತರು ಬೆಳೆಬೆಳೆದು ಹೊಟ್ಟೆಗೆ ಹಿಟ್ಟನ್ನ ಹಾಕ್ತಾರೆ. ಭೂಮಿ ಸಂರಕ್ಷಣೆ ಆಗ್ತಾ ಇದೆ ಅಂದ್ರೆ ಅದು ರೈತರಿಂದ ಮಾತ್ರ. ನಂಬಿಕೆಯ ಆಧಾರದ ಮೇಲೆ ಅವರ ಬದುಕು ನಡೆಯುತ್ತಿದೆ. ಮುಂಗಾರ ಆಗುತ್ತೆ ಅನೋ ಆಧಾರದಿಂದ ಬೆಳೆಬೆಳೆಯುತ್ತಾನೆ. ರೈತನ ಬದುಕು ಬಯಲ ಬದುಕು. ಈ ಬಯಲು ಬದುಕಿಗೆ ಒಂದು ಸ್ಥಿರತೆ ಕೊಡ್ಬೇಕು ಅನ್ನೊದೆ ನಮ್ಮ ಗುರಿ. ಒಂದು ಇಂಚು ಫಲವತ್ತಾದ ಮಣ್ಣು ಬೇಕು ಅಂದ್ರೆ 6000 ವರ್ಷ ಬೇಕು ಎಂದು ಹೇಳಿದಿರು.
ಸಿಎಂ ಭಾಷಣ ವೇಳೆ ವೇದಿಕೆಯ ಮೇಲೆ ಮುನಿರತ್ನ ಹಾಗೂ ಎಂಎಲ್ಸಿ ರಮೇಶ್ ಗೌಡ ಗುಸುಗುಸು ಮಾತುಕತೆ ನಡೆಸಿದ್ದು, ಈ ವೇಳೆ ನನ್ನ ಮಾತನ್ನ ಗಮನಿಸಿ ಎಂದು ಸಿಎಂ ಹೇಳಿದರು. ನಿಮಗೆ ಸಂಬಂಧ ಇದೆ ಗಮನಿಸಿ ಮುನಿರತ್ನರವರೇ ಎಂದ ಸಿಎಂ, ಆಯ್ತು ಎಂದು ಮುನಿರತ್ನ ತಲೆ ಹಾಡಿಸಿದ್ದಾರೆ. ರಮೇಶ್ ಗೌಡಗೆ ಇದು ಸಂಬಂಧ ಇಲ್ಲ ಸುಮ್ಮನೆ ಬಂದಿದ್ದಾನೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.