Azan Controversy: ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ; ಪೊಲೀಸರು ಕ್ರಮಕೈಗೊಳ್ಳುತ್ತಾರೆಂದ ಗೃಹ ಸಚಿವ

ನಾವು ಆಜಾನ್ ಮಾದರಿಯಲ್ಲಿ ದಿನಕ್ಕೆ ಐದು ಸಲ ದೇವರನಾಮ ಹಾಕುವುದಿಲ್ಲ. ಕೇವಲ ಬೆಳಗ್ಗೆ 5 ಗಂಟೆಗೆ ಮಾತ್ರ ಸುಪ್ರಭಾತಗಳನ್ನು ಹಾಕುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Azan Controversy: ದೇಗುಲಗಳಲ್ಲಿ ಸುಪ್ರಭಾತ ಅಭಿಯಾನಕ್ಕೆ ಕರೆಕೊಟ್ಟ ಶ್ರೀರಾಮಸೇನೆ; ಪೊಲೀಸರು ಕ್ರಮಕೈಗೊಳ್ಳುತ್ತಾರೆಂದ ಗೃಹ ಸಚಿವ
ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಮತ್ತು ರಘಹ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 08, 2022 | 12:30 PM

ಬೆಂಗಳೂರು: ಮಸೀದಿಗಳಿಗೆ ಮೈಕ್ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಹಿಂದುತ್ವ ಪರ ಸಂಘಟನೆಗಳು ಕರ್ನಾಟಕದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆಗಳು ಮತ್ತೊಂದು ಮಜಲಿಗೆ ಮುಟ್ಟಿವೆ. ಈ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯದ ಎಲ್ಲಾ ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ನಡೆಸಲಾಗುವುದು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ದೇವರ ಹಾಡುಗಳನ್ನು ಪ್ಲೇ ಮಾಡಲಾಗುವುದು. ಸದ್ಯಕ್ಕೆ ಮಸೀದಿಗಳ ಎದುರು ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ. ಒಂದು ವೇಳೆ ಸರ್ಕಾರ ನಮ್ಮ ಒತ್ತಡಕ್ಕೆ ಮಣಿಯದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೆಗೆದುಕೊಂಡ ಕ್ರಮದ ಮಾದರಿಯಲ್ಲಿಯೇ ಇಲ್ಲಿಯೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಉಲ್ಲಂಘನೆಯಾಗುವುದನ್ನು ತಡೆಯಬೇಕು. ಈ ಬೆಳವಣಿಗೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲ ಎಂದರು.

ನಾವು ಆಜಾನ್ ಮಾದರಿಯಲ್ಲಿ ದಿನಕ್ಕೆ ಐದು ಸಲ ದೇವರನಾಮ ಹಾಕುವುದಿಲ್ಲ. ಕೇವಲ ಬೆಳಗ್ಗೆ 5 ಗಂಟೆಗೆ ಮಾತ್ರ ಸುಪ್ರಭಾತಗಳನ್ನು ಹಾಕುತ್ತೇವೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿದಿನ ದೇವಾಲಯಗಳಲ್ಲಿ ಬೆಳಿಗೆ 5ರಿಂದ 6ರವರೆಗೆ ಒಂದು ಗಂಟೆಗಳ ಕಾಲ ದೇವಸ್ಥಾನ ಸಮಿತಿ, ಕಾರ್ಯಕರ್ತರು ಮತ್ತು ಭಕ್ತರು ಸುಪ್ರಭಾತ ಸೇವೆ, ಭಜನೆ ಮಾಡುತ್ತಾರೆ. ನಾನು ಮೈಸೂರಿನಲ್ಲಿ ನಡೆಯುವ ಸುಪ್ರಭಾತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇನೆ. ಪೊಲೀಸರು ಮೊದಲು ಮಸೀದಿಗೆ ಹೋಗಲಿ, ಆಮೇಲೆ ನಮ್ಮ ಬಳಿ ಬರಲಿ. ಪೊಲೀಸರು ನಮ್ಮ ಅಭಿಯಾನಕ್ಕೆ ತೊಂದರೆ ಕೊಡಬಾರದು. ನಮ್ಮ ಆಂದೋಲನಕ್ಕೆ ಬೆದರಿಕೆ ಹಾಕುವ ಅಥವಾ ಹತ್ತಿಕ್ಕುವ ಕೆಲಸ ಮಾಡಬಾರದು. ಸರ್ಕಾರದ ಮೇಲೆ ನಮಗೆ ವಿಶ್ವಾಸ ಇಲ್ಲ ಎಂದು ಹೇಳಿದರು.

ಪೊಲೀಸರು ಕ್ರಮ ಕೈಗೊಳ್ಳುತ್ತಾರೆ: ಆರಗ ಜ್ಞಾನೇಂದ್ರ ಶಿವಮೊಗ್ಗ: ಶ್ರೀರಾಮಸೇನೆ ಕಾರ್ಯಕರ್ತರು ಆಜಾನ್ ವಿರೋಧಿಸಿ ಹನುಮಾನ್ ಚಾಲಿಸ್ ಹಾಕಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋರ್ಟ್ ತೀರ್ಪಿನ ಅನ್ವಯ ನಮ್ಮ ಪೊಲೀಸರು ಸಂಬಂಧಿಸಿದವರಿಗೆ ನೊಟೀಸ್ ಕೊಡುತ್ತಾರೆ. ಮೈಕ್​ಗಳಲ್ಲಿ ಎಷ್ಟು ಡೆಸಿಬಲ್​ನಲ್ಲಿ ಪ್ರಾರ್ಥನೆ ಹಾಕಬಹುದು ಎಂಬ ನಿಯಮವಿದೆ. ಅದನ್ನು ಮೀರಿದರೆ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಪೊಲೀಸರು ಕೊಡುವ ನೊಟೀಸ್​ಗಳಿಗೆ ಬೆಲೆ ಕೊಡದಿದ್ದರೆ, ಮೈಕ್​ಗಳನ್ನು ತೆರವುಗೊಳಿಸುತ್ತಾರೆ ಎಂದರು.

ಧಾರವಾಡ: ಹನುಮಾನ್ ಚಾಲೀಸ ಪಠಣೆಗೆ ಮನವಿ ಧಾರವಾಡ: ಮಸೀದಿಗಳಲ್ಲಿ ಅಜಾನ್ ನಿಲ್ಲಿಸಲು ನೀಡಿದ್ದ ಗಡುವು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಮೇ 9ರಿಂದ ಧಾರವಾಡದಲ್ಲಿ ಬ್ರಾಹ್ಮೀ ಮಹೂರ್ತದಲ್ಲಿ ಹನುಮಾನ್ ಚಾಲೀಸ್, ಸುಪ್ರಭಾತ, ಮಂತ್ರ ಪಠಣಕ್ಕೆ ದೇಗುಲ ಸಮಿತಿಗಳಿಗೆ ಶ್ರೀರಾಮಸೇನೆ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಲೈನ್ ಬಜಾರ್ ಶ್ರೀರಾಮ ಮಂದಿರ, ಆಂಜನೇಯ ದೇವಸ್ಥಾನಗಳಲ್ಲಿ ನಾಳೆಯಿಂದ ಸುಪ್ರಭಾತ ಸೇವೆ ನಡೆಯಲಿದೆ ಎಂದು ಅವರು ಹೇಳಿದರು.

ಹಾಸನ: ಮೈಕ್ ಬಳಸಿ ಭಜನೆ ಹಾಸನ: ಮಸೀದಿಗಳಲ್ಲಿ ಆಜಾನ್ ನಿಲ್ಲಿಸಲು ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದರೆ ಭಜನೆ ಆಂದೋಲನ ನಡೆಸುವುದಾಗಿ ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಾನೆಕೆರೆ ಹೇಮಂತ್ ಎಚ್ಚರಿಸಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ 6 ಗಂಟೆಯವರೆಗೂ ಮೈಕ್ ಮೂಲಕ ನಾವೂ ಭಜನೆ ಕಾರ್ಯಕ್ರಮ ನಡೆಸುತ್ತೇವೆ. ಹನುಮಾನ್ ಚಾಲಿಸ್, ಮಂತ್ರ, ವಚನ, ಭಜನೆ, ಗಾಯತ್ರಿ ಮಂತ್ರ, ಶಿವಪಂಚಾಕ್ಷಿಯನ್ನು ಮೈಕ್ ಮೂಲಕ ಹಾಕುತ್ತೇವೆ ಎಂದು ಎಚ್ಚರಿಸಿದರು.

ಉಡುಪಿ: ಹಾರ್ನ್ ಮೈಕ್​ಗಳನ್ನು ಕೆಳಗಿಳಿಸಲು ಆಗ್ರಹ ಉಡುಪಿ: ರಾಜ್ಯದಲ್ಲಿ ಮೇ 9ರಿಂದ ಭಜನೆ, ಹನುಮಾನ್ ಚಾಲೀಸ್ ಅಭಿಯಾನ ಆರಂಭವಾಗಲಿದೆ. ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು. ಸರ್ಕಾರವು ಇದಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಎಲ್ಲ ಧಾರ್ಮಿಕ ಕೇಂದ್ರಗಳು ಹಾರ್ನ್ ಮೈಕ್​ಗಳನ್ನು ಕೆಳಗೆ ಇಳಿಸುವುದು ಒಳ್ಳೆಯದು. ಮಿನಾರು, ಗೋಪುರಗಳಿಂದ ಮೈಕ್​ಗಳನ್ನು ಕೆಳಗಿಳಿಸಿ, ಸ್ಪೀಕರ್ ಬಾಕ್ಸ್ ಬಳಸಬೇಕು. ಧಾರ್ಮಿಕ ಕೇಂದ್ರದ ಸುತ್ತಮುತ್ತಲು ಇರುವವರಿಗೆ ಕೇಳಿಸಿದರೆ ಸಾಕಲ್ಲವೇ? ಇಡೀ ಊರಿಗೆ ಆಜಾನ್ ಅಥವಾ ಮಂತ್ರ ಭಜನೆ ಕೇಳಿಸಬೇಕಿಲ್ಲ. ದೇವಸ್ಥಾನ, ಕೃಷ್ಣಮಠದ ಸುಪ್ರಭಾತಕ್ಕೂ ಸಾರ್ವಜನಿಕರಿಂದ ಆಕ್ಷೇಪಗಳು ಇವೆ. ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್​ಗಳನ್ನು ಬಳಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ: ಮಂತ್ರಪಠಣೆಗೆ ಸಿದ್ಧತೆ ಬೆಳಗಾವಿ: ಆಜಾನ್ ವಿರುದ್ಧದ ಹೋರಾಟಕ್ಕೆ ಬೆಳಗಾವಿಯಲ್ಲಿಯೂ ಸಿದ್ಧತೆಗಳು ನಡೆಯುತ್ತಿವೆ. ನಗರದ 10 ದೇವಸ್ಥಾನಗಳಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ ಪಠಣೆ ನಡೆಯುತ್ತಿದೆ. ನಾಳೆ ಮುಂಜಾನೆ 5ಕ್ಕೆ ಸುಪ್ರಭಾತ, ಮಂತ್ರ ಪಠಣೆ ನಡೆಯಲಿದೆ. ಬೆಳಗಾವಿ ನಗರದ ಮಾರುತಿ ದೇವಸ್ಥಾನ, ಲಕ್ಷ್ಮೀ ದೇವಸ್ಥಾನ ಸೇರಿದಂತೆ ಸೇರಿದಂತೆ 10 ದೇವಸ್ಥಾನಗಳಲ್ಲಿ ಮಂತ್ರ ಪಠಣೆಗೆ ದೇವಸ್ಥಾನದ ಸಮಿತಿಗಳಿಗೆ ಶ್ರೀರಾಮಸೇನೆ, ಹಿಂದೂ ಪರ ಸಂಘಟನೆಗಳು ಮನವಿ ಮಾಡಿವೆ.

ಮಸೀದಿಗಳ ಬಳಿ ಓಂಕಾರ ಅಭಿಯಾನ ಗದಗ: ಜಿಲ್ಲೆಯಲ್ಲಿ ಆಜಾನ್​ ವಿರುದ್ಧ ಓಂಕಾರ ಪಠಣ ಅಭಿಯಾನ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಧಾರವಾಡ ವಿಭಾಗದ ಸಂಚಾಲಕ ರಾಜು ಖಾನಪ್ಪನರ್, ಮೇ 9ರಂದು ಮಸೀದಿ ಬಳಿ ದೇವಸ್ಥಾನದಲ್ಲಿ ಓಂಕಾರ ಪಠಿಸುತ್ತೇವೆ ಎಂದರು. ಆಜಾನ್​ ವೇಳೆ ಮಸೀದಿಗಳ ಬಳಿ ದೇಗುಲಗಳಲ್ಲಿ ಓಂಕಾರ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಒಂದು ದೇಶ, ಒಂದು ಕಾನೂನು: ಶ್ರೀಶೈಲ ಸ್ವಾಮೀಜಿ ಕೊಪ್ಪಳ: ದೇಶ ಒಂದು ಅಂದ ಮೇಲೆ ಎಲ್ಲರಿಗೂ ಒಂದೇ ಕಾನೂನು ಇರಬೇಕು. ಒಂದು ಧರ್ಮದವರು ಮಾಡುತ್ತಾರೆಂದು ಮತ್ತೊಬ್ಬರು ಮಾಡುತ್ತಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿಗೆ ಗೌರವ ಕೊಡಬೇಕು ಎಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಶ್ರೀಶೈಲ ಜಗದ್ಗುರುಗಳು ಭಜನೆ ವಿಷಯಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದರು. ಒಬ್ಬರಿಗೆ ಅವಕಾಶ ನೀಡಿ, ಮತ್ತೊಬ್ಬರಿಗೆ ಅವಕಾಶ ಕೊಡದಿರುವುದು ತಪ್ಪಾಗುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ನಾವೆಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Loud Speakers: ನಾಳೆಯಿಂದ ಮಸೀದಿಗಳ ಬಳಿಯ ದೇಗುಲಗಳಲ್ಲಿ ಹನುಮಾನ್ ಚಾಲೀಸಾ: ಮತ್ತೊಂದು ಮಜಲಿಗೆ ಆಜಾನ್ ವಿವಾದ

ಇದನ್ನೂ ಓದಿ: Raj Thackeray ನಾಳೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗಿದರೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸಿ: ರಾಜ್ ಠಾಕ್ರೆ ಕರೆ

Published On - 12:30 pm, Sun, 8 May 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ