Raj Thackeray ನಾಳೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗಿದರೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸಿ: ರಾಜ್ ಠಾಕ್ರೆ ಕರೆ

ನಾಳೆ ಮೇ 4 ರಂದು ಧ್ವನಿವರ್ಧಕಗಳಲ್ಲಿ ಆಜಾನ್ ಮೊಳಗಿಸುವುದನ್ನು ನೀವು ಕೇಳಿದರೆ, ಹನುಮಾನ್ ಚಾಲೀಸಾ ನುಡಿಸಿ ಎಂದು ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ" ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ.

Raj Thackeray ನಾಳೆ ಧ್ವನಿವರ್ಧಕಗಳಲ್ಲಿ ಆಜಾನ್ ಕೂಗಿದರೆ ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸಿ: ರಾಜ್ ಠಾಕ್ರೆ ಕರೆ
ರಾಜ್ ಠಾಕ್ರೆ
Follow us
| Updated By: ರಶ್ಮಿ ಕಲ್ಲಕಟ್ಟ

Updated on: May 03, 2022 | 10:15 PM

ನವದೆಹಲಿ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕದೇ ಇದ್ದರೆ ಮೇ 4 ರಂದು ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾ ನುಡಿಸಬೇಕು ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. “ನಾಳೆ ಮೇ 4 ರಂದು ಧ್ವನಿವರ್ಧಕಗಳಲ್ಲಿ ಆಜಾನ್ ಮೊಳಗಿಸುವುದನ್ನು ನೀವು ಕೇಳಿದರೆ, ಹನುಮಾನ್ ಚಾಲೀಸಾ ನುಡಿಸಿ ಎಂದು ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ” ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಠಾಕ್ರೆ ವಿರುದ್ಧ ಮೊಕದ್ದಮೆ ದಾಖಲಿಸಿದ ಸ್ವಲ್ಪ ಸಮಯದ ನಂತರ ಅವರು ಈ ಟ್ವೀಟ್ ಮಾಡಿದ್ದಾರೆ. ಮೇ 1 ರಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ನುಡಿಸುತ್ತಾರೆ ಎಂದು ಹೇಳಿದ್ದರು.

ಮೇ 1ರ ಭಾಷಣ ಮತ್ತು ರಾಜ್ ಠಾಕ್ರೆ ವಿರುದ್ಧದ ಪ್ರಕರಣ ಮೇ 1 ರಂದು ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ರಾಜ್ ಠಾಕ್ರೆ ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಮೇ 4 ರಿಂದ ದೊಡ್ಡ ಧ್ವನಿಯಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ಜನರಿಗೆ ಕರೆ ನೀಡಿದ್ದರು. ಮಂಗಳವಾರ ಔರಂಗಾಬಾದ್ ಪೊಲೀಸರು ಠಾಕ್ರೆ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ನಿಬಂಧನೆಗಳಡಿಯಲ್ಲಿ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 116 (ಅಪರಾಧಕ್ಕೆ ಪ್ರಚೋದನೆ ನೀಡುವುದು) ಮತ್ತು 117 (ಸಾರ್ವಜನಿಕರಿಂದ ಅಥವಾ 10 ಕ್ಕಿಂತ ಹೆಚ್ಚು ವ್ಯಕ್ತಿಗಳಿಂದ ಅಪರಾಧ ಆಯೋಗಕ್ಕೆ ಕುಮ್ಮಕ್ಕು ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೇ 1 ರಂದು ಠಾಕ್ರೆ ಭಾಷಣ ಮಾಡಿದ ಸಾರ್ವಜನಿಕ ರ್ಯಾಲಿಯ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಕೆಲವು ಪಕ್ಷದ ನಾಯಕರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಠಾಕ್ರೆ ವಿರುದ್ಧ ಮುಂದಿನ ಕ್ರಮ ಕೈಗೊಂಡರೆ ಬೀದಿಗಿಳಿಯುವುದಾಗಿ ಹೇಳಿದ್ದಾರೆ. ರಾಜ್ ಜೊತೆಗೆ, ಔರಂಗಾಬಾದ್ ಪೊಲೀಸರು ರಾಜೀವ್ ಜಾವ್ಲೇಕರ್ ಅವರಂತಹ ಹಲವಾರು ಇತರ ಎಂಎನ್‌ಎಸ್ ನಾಯಕರನ್ನು ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಮಂಗಳವಾರ ಮುಂಬೈನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥರ ನಿವಾಸದ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಠಿಣ ನಿಲುವು ಸ್ವೀಕರಿಸಿದ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಯಾರ ಅನುಮತಿಗೂ ಕಾಯಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಲು ಠಾಕ್ರೆ ಅವರು ಮಂಗಳವಾರ ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರೊಂದಿಗೆ ಸಭೆ ನಡೆಸಿದರು. ಶಿವಸೇನಾದ ಸಂಸದ ಸಂಜಯ್ ರಾವುತ್, ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ವಾಲ್ಸೆ-ಪಾಟೀಲ್ ಮತ್ತು ಇತರ ನಾಯಕರು ಕೂಡಾ ಕಾನೂನನ್ನು ಉಲ್ಲಂಘಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. “ಮಹಾ ವಿಕಾಸ್ ಅಘಾಡಿ ಸರ್ಕಾರವು ಕಾನೂನುಗಳು ಮತ್ತು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತದೆ, ಕೆಲವು ವ್ಯಕ್ತಿಗಳು ನೀಡುವ ಯಾವುದೇ ಅಂತಿಮ ಸೂಚನೆಯ ಆಧಾರದ ಮೇಲೆ ಅಲ್ಲ” ಎಂದು ರಾವುತ್ ಹೇಳಿದ್ದಾರೆ.

ಪೊಲೀಸರಿಂದ ಬಿಗಿ ಬಂದೋಬಸ್ತ್ ಮಹಾರಾಷ್ಟ್ರ ಡಿಜಿಪಿ ಕಚೇರಿಯ ಪ್ರಕಾರ, ಸಿಆರ್‌ಪಿಸಿ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಜ್ಯದಲ್ಲಿ ಇದುವರೆಗೆ 15,000 ಕ್ಕೂ ಹೆಚ್ಚು ಜನರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಂಎನ್‌ಎಸ್ ಕಾರ್ಯಕರ್ತರು ಸೇರಿದಂತೆ ರಾಜ್ಯಾದ್ಯಂತ 13,054 ಜನರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 149 ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಡಿಜಿಪಿ ಕಚೇರಿ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿಬುಧವಾರ ಹನುಮಾನ್ ಚಾಲೀಸಾ ನುಡಿಸಲು ಎಂಎನ್‌ಎಸ್ ಕಾರ್ಯಕರ್ತರು ಸಿದ್ಧಪಡಿಸಿದ್ದ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜ್ಯ ರಾಜಧಾನಿ ಮುಂಬೈನಲ್ಲಿ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 149 ರ ಅಡಿಯಲ್ಲಿ ದಾದರ್, ಮಾಟುಂಗಾ, ಶಿವಾಜಿ ಪಾರ್ಕ್ ಮತ್ತು ಧಾರವಿ ಪ್ರದೇಶಗಳಲ್ಲಿ ಕನಿಷ್ಠ 100 ಜನರಿಗೆ ನೋಟಿಸ್ ನೀಡಿದ್ದಾರೆ.

ಮಸೀದಿಗಳಿಗೆ ರಕ್ಷಣೆ ನೀಡುವುದಾಗಿ ಸಚಿವರ ಭರವಸೆ  ಯಾರಾದರೂ ಮಸೀದಿಗಳಿಂದ ಬಲವಂತವಾಗಿ ಧ್ವನಿವರ್ಧಕಗಳನ್ನು ತೆಗೆದುಹಾಕಲು ಪ್ರಯತ್ನಿಸಿದರೆ ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಕಾರ್ಯಕರ್ತರು ಮಸೀದಿಯನ್ನು ರಕ್ಷಿಸುತ್ತಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಮಂಗಳವಾರ ಹೇಳಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗದಂತೆ ತಮ್ಮ ಪಕ್ಷ ಖಚಿತಪಡಿಸುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರು ಹೇಳಿದ್ದಾರೆ. “ನಾವು ಮಸೀದಿಯ ಹೊರಗೆ ಹನುಮಾನ್ ಚಾಲೀಸಾ ನುಡಿಸುವುದನ್ನು ವಿರೋಧಿಸುವುದಿಲ್ಲ. ಆದರೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಬೇಡಿಕೆಗೆ ನಮ್ಮ ವಿರೋಧವಿದೆ” ಎಂದು ಅಠವಾಳೆ ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ