ಆಜಾನ್ ವಿರುದ್ಧ ಎಲ್ಲೆಡೆ ಮೊಳಗಿದ ಮಂತ್ರ ಪಠಣ; ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್
1 ಸಾವಿರ ದೇವಾಲಯಗಳಲ್ಲಿ ಮಂತ್ರ ಪಠಣೆ ಶುರುವಾಗಿದೆ. ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ದೇವಸ್ಥಾನಗಳ ಮೇಲೆ ಲೌಡ್ಸ್ಪೀಕರ್ ಅಳವಡಿಸಬಾರದು ಎಂದು ಎಚ್ಚರಿಕೆ ನೀಡಿರುವ ಮುಜರಾಯಿ ಇಲಾಖೆ ಅಧಿಕಾರಿಗಳು.
ಬೆಂಗಳೂರು: ಆಜಾನ್ ವಿರುದ್ಧ ಮಂತ್ರ ಪಠಣಕ್ಕೆ ಶ್ರೀರಾಮಸೇನೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನೀಲಸಂದ್ರದ ಆಂಜನೇಯಸ್ವಾಮಿ ದೇಗುಲದ ಮೇಲೆ ಲೌಡ್ಸ್ಪೀಕರ್ ಅಳವಡಿಸಲಾಗಿದೆ. ಮುಂಜಾನೆ 5ರಿಂದ ಹನುಮಾನ್ ಚಾಲೀಸಾ ಪಠಣೆ ಮಾಡಲಾಗಿದೆ. ಶ್ರೀಜಯ ಆಂಜನೇಯಸ್ವಾಮಿ ದೇಗುಲದ ಬಳಿ ಬಂದೋಬಸ್ತ್ ನಿಯೋಜಿಸಲಾಗಿದೆ. ಭದ್ರತೆಗಾಗಿ 2 ಎಸಿಪಿ, 4 ಇನ್ಸ್ಪೆಕ್ಟರ್ 10ಕ್ಕೂ ಹೆಚ್ಚು ಎಸ್ಐ, 30ಕ್ಕೂ ಹೆಚ್ವು ಪೊಲೀಸ್ ಕಾನ್ಸ್‌ಟೇಬಲ್, 1 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹನುಮಾನ್ ಚಾಲೀಸಾ ಪಠಣಕ್ಕೆ ತೆರಳುತ್ತಿದ್ದ ವೇಳೆ ವಾಗ್ವಾದ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತರನ್ನು ನೀಲಸಂದ್ರದ ಜಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಪಾದರಾಯನಪುರದ ಮಸೀದಿಗಳಲ್ಲಿ ಆಜಾನ್ ಮೊಳಗಿದ್ರೂ ದೇಗುಲದಲ್ಲಿ ಸುಪ್ರಭಾತ ಸದ್ದುಮಾಡಿಲ್ಲ. ಕೋದಂಡರಾಮಸ್ವಾಮಿ ದೇಗುಲದತ್ತ ಕಾರ್ಯಕರ್ತರು ಸುಳಿದಿದ್ದು, ಲೌಡ್ಸ್ಪೀಕರ್ ಅಳವಡಿಸಲು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ದೇವಸ್ಥಾನದ ಬಳಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಪಾದರಾಯನಪುರ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.
ಪಾದರಾಯನಪುರದ ಕೋದಂಡರಾಮಸ್ವಾಮಿ ದೇವಸ್ಥಾಕ್ಕೆ ksrp ತುಕಡಿ ಆಗಮಿಸಿದ್ದು, ದೇಗುಲದ ಮುಂದೆ ಹಾದುಹೋದ ಮುಸ್ಲಿಂ ವಾಹನವನ್ನು ಬಂದ ದಾರಿಯಲ್ಲೇ ಮುಸ್ಲಿಂ ಯುವಕರ ವಾಹನವನ್ನ ಖಾಕಿ ಪಡೆ ವಾಪಾಸ್ ಕಳುಹಿಸಿದ್ದಾರೆ. ಧಾರವಾಡದ ಟಿಕಾರೆ ರಸ್ತೆಯಲ್ಲಿನ ಶ್ರೀರಾಮ ಮಂದಿರಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದು, ದೇವಸ್ಥಾನದಲ್ಲಿ ರಾಮ ಭಜನೆ ಮಾಡಿದ್ದಾರೆ. ಟಿವಿ9ಗೆ ಶ್ರೀರಾಮಸೇನೆಯ ಧಾರವಾಡ ತಾಲೂಕು ಅಧ್ಯಕ್ಷ ಮೈಲಾರ ಗುಡ್ಡಪ್ಪನವರ ಹೇಳಿಕೆ ನೀಡಿದ್ದು, ಸರ್ಕಾರಕ್ಕೆ ಗಡುವು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಸೀದಿಗಳಲ್ಲಿನ ಅನಧಿಕೃತ ಮೈಕ್ಗಳನ್ನು ತೆರವುಗೊಳಿಸಿಲ್ಲ. ಒಂದು ವಾರಗಳ ಕಾಲ ನಿತ್ಯ ಬೆಳಗ್ಗೆ ಸುಪ್ರಭಾತ ಹಾಕುತ್ತೇವೆ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಕೇವಲ ಐದಾರು ಶ್ರೀರಾಮಸೇನೆ ಕಾರ್ಯಕರ್ತರಿಂದಕ್ಕೆ ದೇವಸ್ಥಾನಕ್ಕೆ ಎಂಟ್ರಿಯಾಗಿದ್ದು, ಲೌಡ್ ಸ್ಪೀಕರ್ ಹಾಕಿ ಅಭಿಯಾನ ಮಾಡಿದ್ದಾರೆ. ಸ್ಥಳಕ್ಕೆ ಭೇ ಡಿಸಿಪಿ ಸಾಹಿಲ್ ಬಾಗ್ಲಾ ಭೇಟಿ ನೀಡಿದ್ದಾರೆ. ನಗರದ ಜಂಗಳಿ ಪೇಟೆ ದೇವಸ್ಥಾನಕ್ಕೂ ಎಂಟ್ರಿ ಕೊಟ್ಟ ಶ್ರೀರಾಮಸೇನೆ ಕಾರ್ಯಕರ್ತರು. ದಿಡ್ಡಿ ಹನುಮಾನ ದೇವಸ್ಥಾನದಿಂದ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಜಾನ್ಗೆ ಪರ್ಯಾಯವಾಗಿ ಶ್ರೀಶೈಲ ಮಲ್ಲಿಕಾರ್ಜುನ ಭಕ್ತಿ ಹಾಡು ಹಾಕಿ ಪ್ರಾರ್ಥನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸ್ಪೀಕರ್ ಮೂಲಕ ದೇವಸ್ಥಾನದಲ್ಲಿ ಭಕ್ತಿ ಗೀತೆಗಳ ನಾದ ಮೊಳಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ಶ್ರೀರಾಮಮಂತ್ರ ಮೊಳಗಿದೆ. ಚನ್ನರಾಯಪಟ್ಟಣ, ಹಾಸನ ಸೇರಿದಂತೆ ಹಲವೆಡೆ ಕಾಳಿಸ್ವಾಮಿ ಹಾಡಿರೋ ಶ್ರೀರಾಮಸ್ತ್ರೋತ್ರ ಹಿಂದೂ ಕಾರ್ಯಕರ್ತರು ಮೊಳಗಿಸಿದ್ದಾರೆ. ಮಸೀದಿಗಳ ಮೇಲೆ ಮೈಕ್ ತೆರವುಗೊಳಿಸದಿದ್ರೆ ಪ್ರತೀ ದಿನವೂ ಮಂತ್ರ ಮೊಳಗಿಸುವುದಾಗಿ ಹಿಂದೂ ಕಾರ್ಯಕರ್ತರು ಹೇಳಿಕೆ ನೀಡಿದ್ದಾರೆ. ಯಾದಗಿರಿ ನಗರದ ಬೆಟ್ಟದ ಮೇಲಿನ ಬಸವೇಶ್ವರ ದೇವಸ್ಥಾನದಲ್ಲಿಯೂ ಭಜನೆ ಮಾಡಿದ್ದು, ಹನುಮಾನ್ ಚಾಲಿಸಾ ಪಠಣ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ಜಯನಗರದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಬೆಳ್ಳಂಬೆಳಿಗ್ಗೆ ಭಕ್ತಿಗೀತೆಗಳ ಸಿಂಚನವಾಗಿದೆ.
1 ಸಾವಿರ ದೇವಾಲಯಗಳಲ್ಲಿ ಮಂತ್ರ ಪಠಣೆ ಶುರುವಾಗಿದೆ. ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ದೇವಸ್ಥಾನಗಳ ಮೇಲೆ ಲೌಡ್ಸ್ಪೀಕರ್ ಅಳವಡಿಸಬಾರದು ಎಂದು ಎಚ್ಚರಿಕೆ ನೀಡಿರುವ ಮುಜರಾಯಿ ಇಲಾಖೆ ಅಧಿಕಾರಿಗಳು, ಈಗಾಗಲೇ ಪೊಲೀಸರಿಂದ ದೇವಸ್ಥಾನದ ಅರ್ಚಕರಿಗೆ ಎಚ್ಚರಿಕೆ ನೀಡಿದ್ದು, ಲೌಡ್ಸ್ಪೀಕರ್ ವಿವಾದದಿಂದ ಅನಾಹುತ ಸಂಭವಿಸಿದರೆ ಕೇಸ್ ಹಾಕುವುದಾಗಿ ದೇವಸ್ಥಾನದ ಅರ್ಚಕರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 am, Mon, 9 May 22