World Braille Day 2025 : ಲೂಯಿಸ್ ಬ್ರೈಲ್ ಜನ್ಮದಿನದಂದೇ ವಿಶ್ವ ಬ್ರೈಲ್ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2025 | 6:51 PM

ಬ್ರೈಲ್ ಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದಿನ ಸವಿನೆನಪಿಗಾಗಿ ಪ್ರತಿವರ್ಷ ಜನವರಿ 4ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. ದೃಷ್ಟಿ ವಿಶೇಷ ಚೇತನರರು, ಅಂಧರು ಓದಲು ಹಾಗೂ ಬರೆಯಲು ಈ ಬ್ರೈಲ್ ಲಿಪಿಯನ್ನು ಬಳಸುತ್ತಾರೆ. ಈ ಬ್ರೈಲ್ ಲಿಪಿಯನ್ನು ನೀಡಿದ ಕೊಡುಗೆ ಲೂಯಿಸ್ ಬ್ರೈಲ್ ಅವರಿಗೆ ಸಲ್ಲುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಏನಿದರ ಮಹತ್ವ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

World Braille Day 2025 : ಲೂಯಿಸ್ ಬ್ರೈಲ್ ಜನ್ಮದಿನದಂದೇ ವಿಶ್ವ ಬ್ರೈಲ್ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ದೃಷ್ಟಿಯೊಂದಿದ್ದರೆ ಇಡೀ ಜಗತ್ತನ್ನೇ ನೋಡಬಹುದು. ಆದರೆ ಕಣ್ಣಿಲ್ಲದ ವ್ಯಕ್ತಿಯೂ ಬದುಕುವ ರೀತಿಯನ್ನು ಒಮ್ಮೆ ಊಹಿಸಿ ನೋಡಿ. ಹೌದು ಎಲ್ಲಾ ಸರಿಯಿದ್ದ ನಾವುಗಳೇ ಬದುಕಿನಲ್ಲಿ ಏನಾದರೂ ಸಮಸ್ಯೆಗಳು ಬಂದರೆ ನಿಭಾಯಿಸಲು ಒದ್ದಾಡುತ್ತೇವೆ. ಆದರೆ ಈ ಕಣ್ಣಿಲ್ಲದವರ, ಅಂಧರ ಬದುಕುವ ರೀತಿಯನ್ನೊಮ್ಮೆ ಯೋಚಿಸಿದರೆ ಮಾತೇ ಬರುವುದಿಲ್ಲ. ಈ ದೃಷ್ಟಿಹೀನರು ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದು ಹೇಳಿದ್ದಷ್ಟು ಸುಲಭವಲ್ಲ. ಓದಲು ಬರೆಯುವುದಂತೂ ತೀರಾ ಕಷ್ಟವೇ ಆಗಿದೆ. ಇಂತಹವರಿಗೆ ಸಹಾಯ ಮಾಡಲು ಲೂಯಿಸ್ ಎಂಬಾತ ಬ್ರೈಲ್ ಭಾಷೆಯನ್ನು ಕಂಡುಹಿಡಿದರು. ಈ ಲಿಪಿ ಕಣ್ಣು ಇಲ್ಲದವರಿಗೆ ಹಾಗೂ ದೃಷ್ಟಿಹೀನರಿಗೆ ವರದಾನವಾಯಿತು. ಈ ಬೈಲ್ ಲಿಪಿಯ ಸಂಶೋಧಕ ಲೂಯಿಸ್ ಬೈಲ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 4ರಂದು ವಿಶ್ವ ಬೈಲ್ ಡೇ ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಬ್ರೈಲ್ ದಿನದ ಇತಿಹಾಸ

2018ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 4 ರಂದು ವಿಶ್ವ ಬ್ರೈಲ್ ದಿನವಾಗಿ ನವೆಂಬರ್ ನಲ್ಲಿ ಅಧಿಕೃತವಾಗಿ ಆಚರಿಸಲು ನಿರ್ಧರಿಸಿತು. 2019ರ ಜನವರಿ 4 ರಂದು ಮೊದಲ ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಯಿತು. ಅಂಧರು ಹಾಗೂ ಕಡಿಮೆ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನದ ಉದ್ದೇಶವಾಗಿತ್ತು. ಅಂದಿನಿಂದ ವಿಶ್ವ ದೃಷ್ಟಿವಿಕಲಚೇತನರ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ವಿಶ್ವ ಬ್ರೈಲ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಬ್ರೈಲ್ ದಿನದ ಮಹತ್ವ ಹಾಗೂ ಆಚರಣೆ

ಲೂಯಿಸ್‌ ಬ್ರೈಲ್‌ ಅವರ ಜನ್ಮದಿನದ ನೆನಪಿಗಾಗಿ ವಿಶ್ವ ಬ್ರೈಲ್ ದಿನದ ಆಚರಣೆಯು ಚಾಲ್ತಿಯಲ್ಲಿದ್ದರೂ, ಅಷ್ಟಕ್ಕೇ ಈ ಆಚರಣೆ ಸೀಮಿತವಾಗಿಲ್ಲ. ದೃಷ್ಟಿಹೀನ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಬ್ರೈಲ್ ಲಿಪಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಅಂಧರು ಹಾಗೂ ದೃಷ್ಟಿಹೀನರಿಗೆ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳನ್ನು ನೀಡುವ ಸಂಘ ಸಂಸ್ಥೆಗಳು ಶ್ರಮಿಸುತ್ತದೆ. ಈ ವಿಶೇಷ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಯಾರು ಲೂಯಿಸ್ ಬ್ರೈಲ್?

ಬ್ರೈಲ್ ಲಿಪಿಯ ಪಿತಾಮಹ ಎಂದೇ ಖ್ಯಾತರಾದ ಲೂಯಿಸ್ ಬ್ರೈಲ್, ಜನವರಿ 4, 1809 ರಂದು ಫ್ರಾನ್ಸ್ ನ ಕುಪ್ರೆಯಲ್ಲಿ ಜನಿಸಿದರು. ಲೂಯಿಸ್ ಬ್ರೈಲ್ ತನ್ನ ಬಾಲ್ಯದಲ್ಲಿ ಅಪಘಾತದಿಂದಾಗಿ ತನ್ನ ದೃಷ್ಟಿ ಕೊಂಡಿದ್ದರು. ಆ ವೇಳೆಯಲ್ಲಿ ಸರಿಯಾದ ಚಿಕಿತ್ಸೆ ಪಡೆಯಲಾಗಲಿಲ್ಲ..ಕ್ರಮೇಣವಾಗಿ ಅವರು ಇನ್ನೊಂದು ಕಣ್ಣನ್ನು ಕಳೆದುಕೊಂಡರು. ತಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಲೂಯಿಸ್ ಧೈರ್ಯಗೆಡಲಿಲ್ಲ. ತನ್ನ 15 ನೇ ವಯಸ್ಸಿನಲ್ಲಿ ಬ್ರೈಲ್ ಲಿಪಿಯನ್ನು ಕಂಡುಹಿಡಿದರು. ಒಂದು ಕಾಗದದ ತುಂಡಿನಲ್ಲಿ ಚುಕ್ಕಿಗಳನ್ನು ಜೋಡಿಸುವ ಮೂಲಕ ಬ್ರೈಲ್‌ ಲಿಪಿಯನ್ನು ಅಭಿವೃದ್ಧಿಪಡಿಸಿದರು. ತದನಂತರದ ದಿನಗಳಲ್ಲಿ ಈ ಲಿಪಿಯಲ್ಲಿ ಸಾಕಷ್ಟು ಬದಲಾವಣೆ ತಂದರು, ಇಂದು ಈ ಲಿಪಿಯು ಅಂಧರಿಗೆ ವರದಾನವಾಗಿದೆ.

ಇದನ್ನೂ ಓದಿ: ಕಿವಿ ಚುಚ್ಚಿಸಿಕೊಂಡ ನಂತರ ಅದರ ನೋವು ಕಡಿಮೆ ಮಾಡುವುದು ಹೇಗೆ? ಈ ಕ್ರಮ ಅನುಸರಿಸಿ

ಅಂಧರ ಶಿಕ್ಷಣದಲ್ಲಿ ಬ್ರೈಲ್ ಲಿಪಿ ಬಳಕೆ ಹೇಗೆ?

ಬ್ರೈಲ್ ಲಿಪಿಯು ದೃಷ್ಟಿಹೀನ ಜನರಿಗೆ ಕಲಿಸಲು ಬಳಸುವ ಒಂದು ಸ್ಕ್ರಿಪ್ಟ್ ಆಗಿದ್ದು, ಅಂಧರಿಗೆ ಕಾಗದದಲ್ಲಿ ಎತ್ತರವಿರುವ ಅಕ್ಷರಗಳ ಸ್ಪರ್ಶದಿಂದ ಶಿಕ್ಷಣ ನೀಡಲಾಗುತ್ತದೆ. ಹೀಗಾಗಿ ಈ ಲಿಪಿಯ ಸ್ಪರ್ಶದ ಮೂಲಕ ಓದುತ್ತಾರೆ ಬರೆಯುತ್ತಾರೆ. ಆದರೆ ಪ್ರಾರಂಭಿಕ ಆರಂಭಿಕ ಶಿಕ್ಷಣದಲ್ಲಿ ಬ್ರೈಲ್‌ ಲಿಪಿ ಬಳಸುತ್ತಾರೆ. ಈ ಲಿಪಿ ಮೂಲಕ ಓದುವುದರಿಂದ ದೃಷ್ಟಿ ವಿಶೇಷ ಚೇತನರ ಗ್ರಹಿಕಾ ಸಾಮರ್ಥ್ಯ ಹೆಚ್ಚಿರುತ್ತದೆ. ಪ್ರಾರಂಭದಲ್ಲಿ ಮಾತ್ರ ಲಿಪಿ ಮೂಲಕ ಶಿಕ್ಷಣವನ್ನು ನೀಡಲಾಗುತ್ತದೆಯಾದರೂ ಆ ಬಳಿಕ ಸಿಡಿ, ಮೊಬೈಲ್‌ ಫೋನ್‌ ಸೇರಿದಂತೆ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:24 pm, Fri, 3 January 25