ಕಿವಿ ಚುಚ್ಚಿಸಿಕೊಂಡ ನಂತರ ಅದರ ನೋವು ಕಡಿಮೆ ಮಾಡುವುದು ಹೇಗೆ? ಈ ಕ್ರಮ ಅನುಸರಿಸಿ

ಫ್ಯಾಷನ್ ಮಾಡಿಕೊಳ್ಳಲು ಅನೇಕ ಕಿವಿಯಲ್ಲಿ ಎಲ್ಲಿ ಎಲ್ಲ ಜಾಗವಿದೆ ಅಲ್ಲೆಲ್ಲ ಕಿವಿ ಚುಚ್ಚಿಸಿಕೊಳ್ಳುತ್ತಾರೆ. ಆದರೆ ಅದರ ನಂತರದ ನೋವು ಕೂಡ ಅನುಭವಿಸಬೇಕು. ಒಂದು ವೇಳೆ ಆ ನೋವು ಹೆಚ್ಚಾದರೆ ಕಿವಿಗೆ ಸಮಸ್ಯೆಯಾಗಬಹುದು. ಅದಕ್ಕಾಗಿ ಅದರ ಆರೈಕೆ ಅಗತ್ಯವಾಗಿರುತ್ತದೆ.ಕಿವಿ ಚುಚ್ಚಿಸಿಕೊಂಡ ನಂತರ ಯಾವ ರೀತಿಯ ಆರೈಕೆ ಮಾಡಬೇಕು. ಅದಕ್ಕಾಗಿ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಕಿವಿ ಚುಚ್ಚಿಸಿಕೊಂಡ ನಂತರ ಅದರ ನೋವು ಕಡಿಮೆ ಮಾಡುವುದು ಹೇಗೆ? ಈ ಕ್ರಮ ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 03, 2025 | 5:11 PM

ಹೆಣ್ಣಿನ ಅಂದ -ಚಂದ ಹೆಚ್ಚಿಸುವ ಕಿವಿಯೋಲೆ ಇದ್ದರೆ ಅದೊಂದು ಲಕ್ಷಣ, ಚಿಕ್ಕ ವಯಸ್ಸಿನಲ್ಲೇ ಕಿವಿ ಚುಚ್ಚಿಸಿಕೊಳ್ಳುವ ಕ್ರಮ ನಮ್ಮ ಭಾರತದಲ್ಲಿದೆ. ಹೀಗಾಗಿ ಅದು ಚಿಕ್ಕ ವಯಸ್ಸಿನಲ್ಲೇ ಚುಚ್ಚಿಸಿಕೊಳ್ಳುವ ಕ್ರಮ, ಆದರೆ ದೊಡ್ಡವರದ ಮೇಲೆಯೂ ಅನೇಕರು ಫ್ಯಾಷನ್​​​ಗಾಗಿ ಕಿವಿ ಚುಚ್ಚಿಸಿಕೊಳ್ಳತ್ತಾರೆ. ಇತ್ತೀಚಿನ ದಿನಗಳಲ್ಲಿ, ಹುಡುಗಿಯರು ಮತ್ತು ಹುಡುಗರು ಕಿವಿ ಚುಚ್ಚುಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಕಿವಿಯೋಲೆಗಳು ಅತ್ಯಂತ ಸೊಗಸಾದ ಮತ್ತು ಚಿತ್ತಾಕರ್ಷಕ ಪರಿಕರಗಳಲ್ಲಿ ಒಂದಾಗಿದೆ. ಸೊಗಸಾಗಿ ಕಾಣುತ್ತಾರೆ ಮತ್ತು ನಿಮ್ಮ ಒಟ್ಟಾರೆ ನೋಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಅದರ ನೋವು ಗುಣವಾಗಲು ಬಹಳ ದಿನ ತೆಗೆದುಕೊಳ್ಳುತ್ತದೆ. ಅದನ್ನು ಗುಣಪಡಿಸುವ ಪ್ರಕ್ರಿಯೆಯು ಕೆಲವೊಮ್ಮೆ ಸವಾಲಾಗಿರಬಹುದು. ಚುಚ್ಚಿಸಿಕೊಂಡ ನಂತರ ಅದರ ನೋವನ್ನು ತ್ವರಿತವಾಗಿ ಗುಣವಾಗಲು ತುಂಬಾ ಆರೈಕೆಯು ಮುಖ್ಯವಾಗಿದೆ.

ಸರಿಯಾದ ಕಿವಿ ಚುಚ್ಚಿಸಿಕೊಳ್ಳುವುದು ನಂತರದ ಆರೈಕೆ

ಸರಿಯಾದ ಚುಚ್ಚುವ ವೃತ್ತಿಪರರನ್ನು ಆರಿಸಿ;

ಕಿವಿ ಚುಚ್ಚಿಕೊಳ್ಳುವುದಕ್ಕೂ ಒಂದು ಕ್ರಮವಿದೆ. ಅದಕ್ಕೆ ಕೂಡ ಜಾಗೃತೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಅದಕ್ಕಾಗಿ ಪರಿಣಿತಿ ಹೊಂದಿರುವವರಿಂದ ಕಿವಿ ಚುಚ್ಚಿಸಿಕೊಳ್ಳುವುದು ಅನಿರ್ವಾಯವಾಗಿರುತ್ತದೆ. ಕಿವಿ ಚುಚ್ಚಿಸಿಕೊಳ್ಳುವ ಸರಿಯಾದ ತಂತ್ರವು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕಿವಿ ನೋವಿನಿಂದ ವೇಗವಾಗಿ ಗುಣಪಡಿಸಲು ಅಡಿಪಾಯ.

ನಂತರದ ಆರೈಕೆಯನ್ನು ಅನುಸರಿಸಿ

ಕಿವಿ ಚುಚ್ಚಿಸಿಕೊಂಡ ನಂತರ ಆರೈಕೆ ಬಗ್ಗೆಯೂ ಅವರು ಸಲಹೆ ನೀಡುತ್ತಾರೆ. ಕಿವಿಯು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಹಾಗೂ ಅದನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವುದು ಅಗತ್ಯ

ಸಲೈನ್ ದ್ರಾವಣವನ್ನು ಬಳಸಿ

ಲವಣಯುಕ್ತ ದ್ರಾವಣವು ಚುಚ್ಚಿಸಿಕೊಂಡ ಭಾಗವನ್ನು ಸ್ವಚ್ಛಗೊಳಿಸಿ, ಇದು ಆಭರಣವನ್ನು ಸ್ವಚ್ಛ ಮಾಡುವ ವಿಧಾನವಾಗಿದೆ. ಒಂದು ಕಪ್ ಬೆಚ್ಚಗಿನ ನೀರಿಗೆ 1/4 ಟೀ ಚಮಚ ಅಯೋಡೈಸ್ಡ್ ಅಲ್ಲದ ಉಪ್ಪನ್ನು ಮಿಶ್ರಣ ಮಾಡಿ. ಆ ನೀರಿಗೆ ಹತ್ತಿನ್ನು ಉಂಡೆ ರೀತಿ ಮಾಡಿಕೊಂಡು ಅದ್ದಿ, ಕಿವಿ ಚುಚ್ಚಿರುವ ಜಾಗದಲ್ಲಿ ನಿಧಾನವಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಗೆ ಏಲಕ್ಕಿ ನಾಡು ಎಂದು ಹೆಸರು ಬಂದದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

ಕಿವಿ ಚುಚ್ಚಿದ ಜಾಗವನ್ನು ಪದೇ ಪದೇ ಮುಟ್ಟಬೇಡಿ;

ಕಿವಿ ಚುಚ್ಚಿದ ಭಾಗದಲ್ಲಿ ಅನಗತ್ಯವಾಗಿ ಮುಟ್ಟಬೇಡಿ, ಆಭರಣವನ್ನು ಸ್ಪರ್ಶಿಸುವುದು ಅಥವಾ ತಿರುಚುವುದರಿಂದ ಬ್ಯಾಕ್ಟೀರಿಯಾವನ್ನು ಸೃಷ್ಟಿಸುವುದು. ಇದು ನಿಮ್ಮ ಕಿವಿ ನೋವನ್ನು ಹೆಚ್ಚು ಮಾಡಬಹುದು.

ನೋವು ಗುಣ ಆಗುವವರೆಗೆ ಯಾವುದೇ ಆಭರಣ ಧರಿಸಬೇಡಿ:

ಇನ್ನು ಕೆಲವರಿಗೆ ಹೊಸ ಹೊಸ ಕಿವಿಯೋಲೆ ಧರಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಕಿವಿ ಚುಚ್ಚಿಕೊಂಡ ನಂತರ ಅದರ ನೋವು ಇರುತ್ತದೆ. ಆ ನೋವು ಕಡಿಮೆ ಆಗುವವರೆಗೆ ಯಾವುದೇ ಆಭರಣಗಳನ್ನು ಧರಿಸಬಾರದು. ಇದಕ್ಕಾಗಿ ತಾಳ್ಮೆ ತುಂಬಾ ಅಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:08 pm, Fri, 3 January 25