World Earth Day 2024 : ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ದಾಖಲೆ, ಕುತೂಹಲಕಾರಿ ಸಂಗತಿಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2024 | 11:21 AM

ಮಾನವನ ಸ್ವಾರ್ಥಕ್ಕೆ ಸಂಪತ್ತು ಭರಿತ, ಬದುಕಲು ಯೋಗ್ಯವಾದ ಭೂಮಿಯು ನಾಶವಾಗುತ್ತಿದೆ. ಈ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ನಾವು ಏಪ್ರಿಲ್ 22ರಂದು ವಿಶ್ವ ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಆದರೆ ವಿಶ್ವ ಭೂಮಿ ದಿನದಂದು ಹಲವಾರು ಕುತೂಹಲಕಾರಿ ಸಂಗತಿಗಳ ಬಗೆಗಿನ ಮಾಹಿತಿಗಳು ಇಲ್ಲಿವೆ.

World Earth Day 2024 : ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ದಾಖಲೆ, ಕುತೂಹಲಕಾರಿ ಸಂಗತಿಗಳಿವು
ಸಾಂದರ್ಭಿಕ ಚಿತ್ರ
Follow us on

ಮನುಷ್ಯನಿಗೆ ಮಾತ್ರವಲ್ಲದೇ ಅದೆಷ್ಟೋ ಜೀವರಾಶಿಗಳಿಗೆ ವಾಸಿಸಲು ಯೋಗ್ಯವಾದ ತಾಣವು ಈ ಭೂಮಿಯಾಗಿದೆ. 1969ರಲ್ಲಿ ಸ್ಯಾನ್‌ಫ್ರಾನಿಸ್ಕೊದಲ್ಲಿ ನಡೆದ ಯುನೆಸ್ಕೊ ಸಮ್ಮೇಳನದಲ್ಲಿ ಭೂಮಿ ದಿನ ಆಚರಿಸುವ ಬಗ್ಗೆ ನಿರ್ಧರಿಸಲಾಯಿತು. ಮೊದಲು ವಿಶ್ವ ಭೂಮಿ ದಿನವನ್ನು ಮಾರ್ಚ್‌ 21 ರಂದು ಆಚರಿಸಲು ಪ್ರಸ್ತಾಪವಿಡಲಾಯಿತು. ಆ ಬಳಿಕ ಅಮೆರಿಕದ ಸೆನೆಟರ್‌, ಗೇಲಾರ್ಡ್‌ ನೆಲ್ಸನ್‌ ಅವರು ಏಪ್ರಿಲ್‌ 22, 1970 ರಂದು ಈ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪವಿಟ್ಟರು. ಅಂದಿನಿಂದ ಪ್ರತಿ ವರ್ಷವು ಪೃಥ್ವಿಯನ್ನು ಉಳಿಸುವ ನಿಟ್ಟಿನಲ್ಲಿ ವಿಶ್ವ ಭೂಮಿ ದಿನವನ್ನು (World Earth Day) ಆಚರಿಸುತ್ತ ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ಥೀಮ್ ಮೂಲಕ ಭೂಮಿ ದಿನ ಆಚರಿಸಲಾಗುತ್ತಿದೆ. ಈ ವರ್ಷ, ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ಎಂಬ ಥೀಮ್ ನಡಿಯಲ್ಲಿ 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ವಿಶ್ವ ಭೂಮಿ ದಿನದ ಕುತೂಹಲಕಾರಿ ವಿಚಾರಗಳು:

* ಪರಿಸರವನ್ನು ರಕ್ಷಿಸುವ ಕಾರ್ಯವಿಧಾನಗಳನ್ನು ನಿಯಂತ್ರಿಸುವ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಪರಿಸರ ಸಂರಕ್ಷಣಾ ಸಂಸ್ಥೆ) ಯನ್ನು ಡಿಸೆಂಬರ್ 2, 1970 ರಂದು ಮೊದಲ ಭೂ ದಿನದ ಆಚರಣೆ ಬಳಿಕ ರಚಿಸಲಾಯಿತು.

* ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಹವಾಮಾನ ಒಪ್ಪಂದವನ್ನು 2016 ರಲ್ಲಿ ಭೂ ದಿನದಂದು ಮಾಡಲಾಯಿತು. ಈ ಒಪ್ಪಂದಕ್ಕೆ 190 ಕ್ಕೂ ಹೆಚ್ಚು ದೇಶದ ಸದಸ್ಯರು ಸಹಿ ಹಾಕಿದರು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಇತರ ಕ್ರಮಗಳನ್ನು ಕೈಗೊಳ್ಳುವುದು ಈ ಒಪ್ಪಂದ ಪ್ರಮುಖ ಉದ್ದೇಶವಾಗಿತ್ತು.

* ಭೂಮಿಯ ದಿನವು ಒಂದು ಗೀತೆಯನ್ನು ಹೊಂದಿದ್ದು ಇದು ವಿಶ್ವದ ಪ್ರಮುಖ 8 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ ಭಾಷೆಯಲ್ಲಿಯು ಲಭ್ಯವಿದ್ದು, ಈ ಗೀತೆಯನ್ನು 2013ರಲ್ಲಿ ಕವಿ ಅಭಯ್ ಕುಮಾರ್ ಅವರು ರಚಿಸಿದ್ದರು.

ಇದನ್ನೂ ಓದಿ: Googleನ ಪ್ರತಿ ಅಕ್ಷರದಲ್ಲಿ ಭೂಮಿಯ ಚಿತ್ರಣ, ಡೂಡಲ್​​​ ಮೂಲಕ ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ ಗೌರವ

* ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಅರಣ್ಯನಾಶದಿಂದಾಗಿ ಪ್ರತಿ ವರ್ಷ ಸುಮಾರು 18 ಮಿಲಿಯನ್ ಎಕರೆಯಷ್ಟು ಅರಣ್ಯವು ನಾಶವಾಗುತ್ತಿದೆ. ಹೀಗಾಗಿ earthday.org 2010 ರಲ್ಲಿ ಕ್ಯಾನೋಪಿ ಪ್ರಾಜೆಕ್ಟ್ ಅನ್ನು ಸ್ಥಾಪಿಸಿತು. ಈ ಪ್ರಾಜೆಕ್ಟ್ ನಡಿಯಲ್ಲಿ ಪ್ರಪಂಚದಾದ್ಯಂತ ಹತ್ತು ಮಿಲಿಯನ್ ಮರಗಳನ್ನು ನೆಡುವ ಕಾರ್ಯವಾಗಿದೆ.

* ಭೂಮಿಯ ದಿನವನ್ನು ದ್ವಜಾರೋಹಣೆವನ್ನು ಮಾಡಿ ಆಚರಿಸಲಾಗುತ್ತದೆ. ಈ ದಿನದ ಧ್ವಜವು ಬಾರಿ ವಿಶೇಷತೆಗಳಿಂದ ಕೂಡಿದ್ದು, ಅಪೊಲೊ 17 ಸಿಬ್ಬಂದಿ 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಫೋಟೋವನ್ನು ಈ ಧ್ವಜದಲ್ಲಿ ಕಾಣಬಹುದು.

* 2018ರ ಏಪ್ರಿಲ್‌ನಲ್ಲಿ ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ದಾಖಲೆಗಳನ್ನು ಬರೆದಿದ್ದರು.

* ಜುಲೈ 11, 2018 ರಂದು 24 ಗಂಟೆಗಳಲ್ಲಿ 49.3 ಮಿಲಿಯನ್ ಮರಗಳನ್ನು ನೆಡಲು 800,000 ಜನರು ಒಂದೆಡೆ ಸೇರಿದ್ದರು. ಈ ದಿನದಂದು ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ನೆಟ್ಟು ದಾಖಲೆ ಸೃಷ್ಟಿಸಿದ್ದರು.

* ಜಾಗತಿಕ ಸಾಂಕ್ರಾಮಿಕ ರೋಗದ ಕಾರಣದಿಂದ 50 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ, EarthDay.Org ಹಲವಾರು ಯುವ ಕಾರ್ಯಕರ್ತರೊಂದಿಗೆ ಸೇರಿ ಅರ್ಥ್ ಡೇ ಲೈವ್ ಅನ್ನು ಆಯೋಜಿಸಿತು. ಹೀಗಾಗಿ ಮೂರು ದಿನಗಳ ಲೈವ್‌ಸ್ಟ್ರೀಮನ್ನು 100 ಮಿಲಿಯನ್ ವೀಕ್ಷಕರು ವೀಕ್ಷಿಸಿದರು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ