AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Earth Day 2024: Googleನ ಪ್ರತಿ ಅಕ್ಷರದಲ್ಲಿ ಭೂಮಿಯ ಚಿತ್ರಣ, ಡೂಡಲ್​​​ ಮೂಲಕ ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ ಗೌರವ

Google Doodle: ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ ಗೌರವ ತಿಳಿಸಿದೆ. Googleನ ಪ್ರತಿ ಅಕ್ಷರದಲ್ಲಿ ಭೂಮಿಯ ಚಿತ್ರಣ ತೋರಿಸಿದೆ. ಈ ಮೂಲಕ ಭೂ ದಿನದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದೆ. ಭೂಮಿಯ ಪರಿಸರ ವ್ಯವಸ್ಥೆಗಳ ಸೌಂದರ್ಯದತ್ತ ಗಮನ ಸೆಳೆಯುತ್ತಿದೆ ಹಾಗೂ ಪರಿಸರವನ್ನು ಸಂರಕ್ಷಿಸುವ ಜಾಗತಿಕ ಬದ್ಧತೆಯನ್ನು ಒತ್ತಿ ಹೇಳುತ್ತಿದೆ.

World Earth Day 2024: Googleನ ಪ್ರತಿ ಅಕ್ಷರದಲ್ಲಿ ಭೂಮಿಯ ಚಿತ್ರಣ, ಡೂಡಲ್​​​ ಮೂಲಕ ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ ಗೌರವ
ಗೂಗಲ್ ಡೂಡಲ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 22, 2024 | 11:10 AM

ಇಂದು ವಿಶ್ವ ಭೂ ದಿನ, (Earth Day 2024) ಈ ದಿನವನ್ನು ಗೂಗಲ್ (Google)​​ ವಿಶೇಷವಾಗಿ ಆಚರಣೆ ಮಾಡಿಕೊಳ್ಳುತ್ತಿದೆ. ಗೂಗಲ್​​ ಯಾವುದೇ ಪ್ರಮುಖ ಆಚರಣೆಗಳಿದ್ದರು. ಅದಕ್ಕೆ ವಿಶೇಷ ಡೂಡಲ್​​​ ಮೂಲಕ ಶುಭಾಶಯಗಳನ್ನು ತಿಳಿಸುತ್ತದೆ. ಈ ಬಾರಿಯ ಪರಿಸರ ದಿನಕ್ಕೆ ಸ್ವಲ್ಪ ಡಿಫರೆಂಟ್​​ ಆಗಿ ಶುಭಾಶಯಗಳನ್ನು ತಿಳಿಸಿದೆ. ಹವಾಮಾನ ಬದಲಾವಣೆಯ ಮೇಲೆ ಗಮನ ಸೆಳೆಯಲು ಪ್ರಪಂಚದಾದ್ಯಂತದ ನೈಸರ್ಗಿಕ ಭೂದೃಶ್ಯಗಳ ಬಿಗಿ ವಾತಾವರಣವನ್ನು ವೈಮಾನಿಕ ಚಿತ್ರಣ ಒಳಗೊಂಡ ವಿಶೇಷ ಡೂಡಲ್​​ನ್ನು ಗೂಗಲ್ ಅನಾವರಣಗೊಳಿಸಿದೆ. ಈ ಡೂಡಲ್ ಭೂಮಿಯ ಪರಿಸರ ವ್ಯವಸ್ಥೆಗಳ ಸೌಂದರ್ಯದತ್ತ ಗಮನ ಸೆಳೆಯುತ್ತಿದೆ ಹಾಗೂ ಪರಿಸರವನ್ನು ಸಂರಕ್ಷಿಸುವ ಜಾಗತಿಕ ಬದ್ಧತೆಯನ್ನು ಒತ್ತಿ ಹೇಳುತ್ತಿದೆ.

Google ನಲ್ಲಿನ ಈ ವರ್ಷದ ಭೂ ದಿನದ ಆಚರಣೆಯ ವಿಶೇಷ ವಿಡಿಯೋವನ್ನು ನೀಡಿದೆ. ತನ್ನ Google ಲೋಗೋದ ಪ್ರತಿ ಅಕ್ಷರವನ್ನು ಪ್ರಕೃತಿಯ ಮೂಲಕ ಈ ವಿಡಿಯೋ ತಿಳಿಸಿದ್ದಾರೆ. ಪ್ರತಿಯೊಂದು ಅಕ್ಷರವನ್ನು ಕೂಡ ಬೇರೆ ಭೂಮಿಯ ಭಾಗಗಳಿಂದ ಸಂಗ್ರಹ ಮಾಡಲಾಗಿದೆ. ಇದು ಪ್ರಕೃತಿಯ ರಕ್ಷಣೆ ಹಾಗು ವನ್ಯಜೀವಿಗಳ ಅಭಿವೃದ್ಧಿಗೆ ಹೆಚ್ಚು ಬಲ ನೀಡುತ್ತದೆ.

Google ಡೂಡಲ್‌ನಲ್ಲಿನ ಮೊದಲ ‘G’ ಅಕ್ಷೆರ ಕೈಕೋಸ್ ದ್ವೀಪಗಳನ್ನು ತೋರಿಸುತ್ತದೆ. ನಂತರ ಮೊದಲ ‘O’ವನ್ನು ಮೆಕ್ಸಿಕೋದಲ್ಲಿನ ಸ್ಕಾರ್ಪಿಯನ್ ರೀಫ್ ರಾಷ್ಟ್ರೀಯ ಉದ್ಯಾನವನ ತೋರಿಸುತ್ತೆದೆ. ಎರಡನೇ ‘O’ ಐಸ್‌ಲ್ಯಾಂಡ್‌ನಲ್ಲಿರುವ ವಟ್ನಾಜೊಕುಲ್ ರಾಷ್ಟ್ರೀಯ ಉದ್ಯಾನವನ ತೋರಿಸುತ್ತದೆ. ನಂತರ ‘G’ ನ್ನು ಬ್ರೆಜಿಲ್‌ನ ಜಾಯು ರಾಷ್ಟ್ರೀಯ ಉದ್ಯಾನವನ ತೋರಿಸುತ್ತದೆ. ನೈಜೀರಿಯಾದಲ್ಲಿನ ಗ್ರೇಟ್ ಗ್ರೀನ್ ವಾಲ್ ‘L’ ನ್ನು ತೋರಿಸಿದೆ. ಕೊನೆಯದಾಗಿ ‘E’ನ್ನು ಆಸ್ಟ್ರೇಲಿಯಾದ ಪಿಲ್ಬರಾ ದ್ವೀಪಗಳ ಪ್ರಕೃತಿ ಮೀಸಲುಗಳನ್ನು ತೋರಿಸಿದೆ.

ಇದನ್ನೂ ಓದಿ: ಬದುಕಲು ಯೋಗ್ಯವಾದ ವಾತಾವರಣ ಬೇಕಾ? ಹಾಗಾದರೆ ಭೂಮಿಯ ರಕ್ಷಣೆ ಮಾಡಿ

Googleನ ಪ್ರತಿ ಅಕ್ಷರದಲ್ಲಿ ಭೂಮಿಯ ಚಿತ್ರಣ

ಡೂಡಲ್‌ನಲ್ಲಿ ಚಿತ್ರಣ ಏರ್‌ಬಸ್, ಸಿಎನ್‌ಇಎಸ್/ಏರ್‌ಬಸ್, ಕೋಪರ್ನಿಕಸ್, ಮ್ಯಾಕ್ಸರ್ ಟೆಕ್ನಾಲಜಿ ಮತ್ತು ಯುಎಸ್‌ಜಿಎಸ್/ನಾಸಾ ಲ್ಯಾಂಡ್‌ಸ್ಯಾಟ್ ಸೇರಿದಂತೆ ಹಲವಾರು ಗೌರವಾನ್ವಿತ ಸಂಸ್ಥೆಗಳು ಒದಗಿಸಿವೆ. ಇದು ಭೂ ದಿನದ ಸಂದೇಶವನ್ನು ಪ್ರಚಾರ ಮಾಡುವಲ್ಲಿನ ಸಹಯೋಗವನ್ನು ಹೊಂದಿದೆ ಎಂದು ಹೇಳಲಾಗಿದೆ. 1969ರಲ್ಲಿ ಸ್ಯಾನ್‌ಫ್ರಾನಿಸ್ಕೊದಲ್ಲಿ ನಡೆದ ಯುನೆಸ್ಕೊ ಸಮ್ಮೇಳನದಲ್ಲಿ ಭೂಮಿ ದಿನ ಆಚರಿಸುವ ಬಗ್ಗೆ ನಿರ್ಧರಿಸಲಾಯಿತು. ಮೊದಲು ವಿಶ್ವ ಭೂಮಿ ದಿನವನ್ನು ಮಾರ್ಚ್‌ 21 ರಂದು ಆಚರಿಸಲು ಪ್ರಸ್ತಾಪವಿಡಲಾಯಿತು. ಆ ಬಳಿಕ ಅಮೆರಿಕದ ಸೆನೆಟರ್‌, ಗೇಲಾರ್ಡ್‌ ನೆಲ್ಸನ್‌ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಏಪ್ರಿಲ್‌ 22, 1970 ರಂದು ಈ ದಿನವನ್ನು ಆಚರಿಸುವ ಬಗ್ಗೆ ಮತ್ತೆ ಪ್ರಸ್ತಾಪವಿಟ್ಟರು. ಹೀಗಾಗಿ ಏಪ್ರಿಲ್ 22 ರಂದು ಭೂಮಿ ದಿನ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಭೂಮಿ ದಿನ ಎಂದು ಆಚರಿಸುತ್ತ ಬರಲಾಗುತ್ತಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Mon, 22 April 24

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ