ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದ ಆ್ಯಂಕರ್

ದೂರದರ್ಶನ ಆ್ಯಂಕರ್​ವೊಬ್ಬರು ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದಿರುವ ಘಟನೆ ನಡೆದಿದೆ. ದೂರದರ್ಶನದ ಕೋಲ್ಕತ್ತಾ ಶಾಖೆಯ ಆ್ಯಂಕರ್ ಲೋಪಮುದ್ರಾ ಅವರು ರಕ್ತದೊತ್ತಡ ಹೆಚ್ಚಾಗಿ ಕುಸಿದುಬಿದ್ದಿದ್ದರು, ಇದರ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದ ಆ್ಯಂಕರ್
ನಿರೂಪಕಿ ಲೋಪಮುದ್ರಾ
Follow us
ನಯನಾ ರಾಜೀವ್
|

Updated on: Apr 22, 2024 | 10:41 AM

ಹೀಟ್​ ವೇವ್(Heat Wave)​ ಕುರಿತ ವರದಿ ಓದುತ್ತಲೇ ದೂರದರ್ಶನದ ಆ್ಯಂಕರ್(Anchor)​ ತಲೆ ತಿರುಗಿ ಬಿದ್ದಿರುವ ಘಟನೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳು ವಿಪರೀತ ಬಿಸಿಲಿನ ಝಳಕ್ಕೆ ಸಿಲುಕಿ ನಲುಗುತ್ತಿವೆ. ಟಿವಿ ಆ್ಯಂಕರ್​ ಒಬ್ಬರು ಇತ್ತೀಚೆಗೆ ಹೀಟ್​ವೇವ್​ನ ಲೈವ್​ ಅಪ್​ಡೇಟ್​ಗಳನ್ನು ಓದುವಾಗಲೇ ಎಚ್ಚರತಪ್ಪಿ ಬಿದ್ದಿದ್ದಾರೆ.

ದೂರದರ್ಶನದ ಕೋಲ್ಕತ್ತಾ ಶಾಖೆಯ ಆ್ಯಂಕರ್ ಲೋಪಮುದ್ರಾ ಅವರು ರಕ್ತದೊತ್ತಡ ಹೆಚ್ಚಾಗಿ ಕುಸಿದುಬಿದ್ದಿದ್ದರು, ಇದರ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಬಂದಾಗಲೇ ಬಾಯಿ ಒಣಗುತ್ತಿತ್ತು, ಸುಸ್ತಾಗುತ್ತಿತ್ತು, ಹೊರಗೆ ಅತಿಯಾದ ಶಾಖ ಒಳಗೆ ತಂಪಾದ ವಾತಾವರಣವು ರಕ್ತದೊತ್ತಡದಲ್ಲಿ ಏರುಪೇರಾಗಲು ಕಾರಣವಾಯಿತು ಎಂದಿದ್ದಾರೆ.

ನಾನು ಎಂದಿಗೂ ನನ್ನ ಬಳಿ ನೀರಿನ ಬಾಟಲಿಯನ್ನು ಇಟ್ಟುಕೊಂಡಿದ್ದೇ ಇಲ್ಲ, ಹದಿನೈದು ನಿಮಿಷಗಳು ಅಥವಾ ಅರ್ಧಗಂಟೆ ಇರಲಿ, ಇದುವರೆಗೂ ನೀರನ್ನು ಇಟ್ಟುಕೊಂಡಿದ್ದೇ ನೆನಪಿಲ್ಲ, ಆದರೆ ವಾತೆ್ ಮುಗಿಯುವ 15 ನಿಮಿಷಗಳ ಮೊದಲೇ ಬಾಯಿ ಒಣಗಲು ಶುರುವಾಗಿತ್ತು.

ಮತ್ತಷ್ಟು ಓದಿ: ಮಹಿಳಾ ರಿಪೋರ್ಟರ್​​ಗೆ ಬಲವಂತವಾಗಿ ಹಿಜಾಬ್​​ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ

ಫ್ಲೋರ್​ ಮ್ಯಾನೇಜರ್​ ಬಳಿ ನೀರು ಕೊಡುವಂತೆ ಕೇಳಿದೆ, ಬ್ರೇಕ್​ ತೆಗೆದುಕೊಂಡು ನೀರು ಕುಡಿದೆ, ಅದಾದ ಬಳಿಕ ಸುಧಾರಿಸಿಕೊಂಡು ಹೇಗೋ ಎರಡು ಸುದ್ದಿಗಳನ್ನು ಓದಿದ್ದಷ್ಟೇ ತಲೆ ತಿರುಗಿ ಬಿದ್ದೆ ಎಂದು ಬರೆದುಕೊಂಡಿದ್ದಾರೆ.

ಬಿಸಿಲ ಝಳ, ಹೀಟ್​ ವೇವ್​ ಸುದ್ದಿ ಓದುವಾಗ ನನ್ನ ಧ್ವನಿ ಕಂಪಿಸಿತು, ಅದೃಷ್ಟವಶಾತ್ ಇದು ದೂರದರ್ಶನದಲ್ಲಿ 30 ರಿಂದ 40 ಸೆಕೆಂಡುಗಳ ಅನಿಮೇಷನ್ ಪ್ಲೇ ಆಗುತ್ತಿರುವಾಗ ಸಂಭವಿಸಿತು. ಆ ಸಮಯದಲ್ಲಿ ನಾನು ನನ್ನ ಕುರ್ಚಿಯ ಮೇಲೆ ಬಿದ್ದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ