ಮಹಿಳಾ ರಿಪೋರ್ಟರ್​​ಗೆ ಬಲವಂತವಾಗಿ ಹಿಜಾಬ್​​ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ

ವೈರಲ್​​ ವಿಡಿಯೋದಲ್ಲಿ ವ್ಯಕ್ತಿ ಬಲವಂತವಾಗಿ ಮಹಿಳೆಯ ತಲೆಯ ಮೇಲೆ ಶಾಲು ಹಾಕುತ್ತಿರುವುದನ್ನು ಕಾಣಬಹುದು. ಆದರೆ, ಮಹಿಳೆ ಕೂಡಲೇ ಶಾಲನ್ನು ತೆಗೆದು ಖಡಕ್ಕಾಗಿ ಪ್ರತ್ಯುತ್ತರ ಕೊಟ್ಟಿದ್ದಾಳೆ. ಮಹಿಳೆಯ ತೀಕ್ಷ್ಣವಾದ ಮತ್ತು ಕಟುವಾದ ಉತ್ತರವು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಮಹಿಳಾ ರಿಪೋರ್ಟರ್​​ಗೆ ಬಲವಂತವಾಗಿ ಹಿಜಾಬ್​​ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ
Follow us
|

Updated on:Apr 20, 2024 | 3:40 PM

ಪಾಕಿಸ್ತಾನದಲ್ಲಿ ಮಹಿಳಾ ಸಂದರ್ಶಕಿಯೊಬ್ಬಳು ಹಿಜಾಬ್​​ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಸಂದರ್ಶನ ಮಾಡುತ್ತಿರುವ ಮಾಡುವ ವೇಳೆ ವ್ಯಕ್ತಿಯೊಬ್ಬ ಬಂದು ಆಕೆಯ ತಲೆಯ ಮೇಲೆ ಬಲವಂತವಾಗಿ ಶಾಲು ಹೊದಿಸಿದ್ದಾನೆ. ಆತನ ಯುವತಿಯ ಕೂದಲನ್ನು ಬಟ್ಟೆಯಿಂದ ಮುಚ್ಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದಲ್ಲದೇ ವ್ಯಕ್ತಿಯ ಈ ನಡವಳಿಕೆ ಕಂಡು ಯುವತಿ ಸರಿಯಾಗಿ ಪ್ರತ್ಯುತ್ತರ ನೀಡಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವೈರಲ್​​ ವಿಡಿಯೋದಲ್ಲಿ ವ್ಯಕ್ತಿ ಬಲವಂತವಾಗಿ ಮಹಿಳೆಯ ತಲೆಯ ಮೇಲೆ ಶಾಲು ಹಾಕುತ್ತಿರುವುದನ್ನು ಕಾಣಬಹುದು. ಆದರೆ, ಮಹಿಳೆ ಕೂಡಲೇ ಶಾಲನ್ನು ತೆಗೆದು ಖಡಕ್ಕಾಗಿ ಪ್ರತ್ಯುತ್ತರ ಕೊಟ್ಟಿದ್ದಾಳೆ. ಮಹಿಳೆಯ ತೀಕ್ಷ್ಣವಾದ ಮತ್ತು ಕಟುವಾದ ಉತ್ತರವು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹೃದಯವನ್ನು ಗೆದ್ದಿದೆ.

ಇದನ್ನೂ ಓದಿ: ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?

” ಮಹಿಳೆಯ ಅನುಮತಿಯಿಲ್ಲದೇ ಪರಪುರುಷ ಮಹಿಳೆಯನ್ನು ಮುಟ್ಟುವುದು ಇಸ್ಲಾಂ ನಲ್ಲಿ ದೊಡ್ಡ ಅಪರಾಧ ಎಂದು ನಿಮಗೆ ತಿಳಿದಿಲ್ಲವೇ?” ಎಂದು ವ್ಯಕ್ತಿಯನ್ನು ಕೇಳಿದ್ದಾಳೆ. ಇದಲ್ಲದೇ “ಅನುಮತಿಯಿಲ್ಲದೆ ಮಹಿಳೆಯನ್ನು ಸ್ಪರ್ಶಿಸುವುದು. ಇದು ಸಾಮಾಜಿಕ ಕಿರುಕುಳ,” ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಮಹಿಳೆಯ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಯಾವುದೇ ಹೆಣ್ಣಿನ ಮೇಲೆ ದುಪ್ಪಟ್ಟಾ ಹಾಕುವ ಅಧಿಕಾರ ಯಾರಿಗೂ ಇಲ್ಲ. ಅದನ್ನು ಧರಿಸುವುದು ಅಥವಾ ಧರಿಸದಿರುವುದು ಸಂಪೂರ್ಣವಾಗಿ ಅವಳ ಆಯ್ಕೆಯಾಗಿದೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Sat, 20 April 24

ತಾಜಾ ಸುದ್ದಿ