ಸಾಗರದಲ್ಲಿ ಹಲವು ಬಗೆಯ ಸಮುದ್ರ ಜೀವಿಗಳಿವೆ. ಅವುಗಳಲ್ಲಿ ಜೆಲ್ಲಿ ಫಿಶ್ (Jelly Fish) ಕೂಡಾ ಒಂದು. ಜೆಲ್ಲಿ ಫಿಶ್, ಒಂದು ಬಗೆಯ ಸಮುದ್ರ ಜೀವಿಯಾಗಿದ್ದು, ಪ್ರಪಂಚದಾದ್ಯಂತ ಸುಮಾರು 1500 ಕ್ಕೂ ಹೆಚ್ಚು ಜಾತಿಯ ಜೆಲ್ಲಿ ಫಿಶ್ಗಳಿವೆ. ಇವುಗಳು ಹೆಚ್ಚಾಗಿ ಸಮುದ್ರದ ಆಳದಲ್ಲಿ ಜೀವಿಸುತ್ತವೆ. ನೋಡಲು ವಿಚಿತ್ರವಾಗಿ ಕಾಣುವ ಜೆಲ್ಲಿ ಫಿಶ್ಗಳ ದೇಹವು 95% ಶೇಕಡದಷ್ಟು ನೀರಿನಿಂದ ಕೂಡಿದೆ. ಈ ಕಾರಣದಿಂದಲೇ ಇವುಗಳು ಪಾರದರ್ಶಕವಾಗಿ ಕಾಣುತ್ತದೆ. ಈ ಜೆಲ್ಲಿ ಫಿಶ್ ಸಮುದ್ರದ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಜೀವಿಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ಗಳಾಗಿವೆ. ಅಂದರೆ ಇವು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಇಂತಹ ಜೆಲ್ಲಿ ಫಿಶ್ಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ನವೆಂಬರ್ 3 ರಂದು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.
ಜೆಲ್ಲಿ ಫಿಶ್ಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿನ ಸಮುದ್ರದಲ್ಲಿ ವಾಸಿಸುತ್ತವೆ. ಆದರೆ ಹವಾಮಾನವು ಬದಲಾಗುತ್ತಿದ್ದಂತೆ ಜೆಲ್ಲಿ ಫಿಶ್ಗಳು ದಕ್ಷಿಣದಿಂದ ಉತ್ತರ ಗೋಳಾರ್ಧದ ಕಡೆಗೆ ವಲಸೆ ಹೋಗುತ್ತವೆ. ದಕ್ಷಿಣ ಗೋಳಾರ್ಧದಲ್ಲಿ ನವೆಂಬರ್ ತಿಂಗಳಲ್ಲಿ ವಸಂತಕಾಲ ಆರಂಭವಾಗುತ್ತದೆ. ಈ ಸಮಯದಲ್ಲಾಗುವ ಹವಮಾನ ಬದಲಾವಣೆಯ ಕಾರಣದಿಂದಾಗಿ ಜೆಲ್ಲಿ ಫಿಶ್ಗಳು ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ. ಈ ಕಾರಣದಿಂದಾಗಿ ನವೆಂಬರ್ 2014 ರಿಂದ ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಸಸ್ಯಾಹಾರಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ, ಮಹತ್ವ ತಿಳಿದುಕೊಳ್ಳಿ
ಜೆಲ್ಲಿ ಫಿಶ್ಗಳು ಸಮುದ್ರದ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಇವುಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ಗಳಾಗಿವೆ. ಅಂದರೆ ಇವು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಅಲ್ಲದೆ ಇವುಗಳು ಸಂಶೋಧನೆಗೆ ಒಳಪಡುವ ಪ್ರಮುಖ ಸಮುದ್ರ ಜೀವಿಯಾಗಿದೆ. ಹೆಚ್ಚಾಗಿ ಚೀನಾದಲ್ಲಿ ಇವುಗಳನ್ನು ಆಹಾರ ರೂಪದಲ್ಲಿ ಸೇವಿಸಲಾಗುತ್ತದೆ ಮತ್ತು ಹಲವಾರು ಸಾಂಪ್ರದಾಯಿಯ ಚಿಕಿತ್ಸೆಗಳಲ್ಲೂ ಬಳಸಲಾಗುತ್ತದೆ. ಇವುಗಳು ಮೆದುಳು ಇಲ್ಲದ ಜೀವಿಯಾಗಿದ್ದು, ಈ ಜೀವಿಯ ಬಗ್ಗೆ ಜನರಿಗೆ ಇನ್ನಷ್ಟು ತಿಳುವಳಿಕೆ ಮೂಡಿಸಲು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ