ನೀವು ಯಾವುದೇ ಸ್ಥಳಕ್ಕೂ ಪ್ರಯಾಣ ಬೆಳೆಸುವ ಮೊದಲು ಅಲ್ಲಿನ ಹವಾಮಾನ ಯಾವ ರೀತಿ ಇದೆ ಎಂದು ಮುಂಚಿತವಾಗಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಆದ್ದರಿಂದ ನೀವು ನವೆಂಬರ್ ತಿಂಗಳಲ್ಲಿ ಪ್ರಯಾಣ ಬೆಳೆಸಲು ಬಯಸಿದರೆ ಈ ಹವಾಮಾನಕ್ಕೆ ತಕ್ಕಂತೆ ಉತ್ತರ ಭಾರತದ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಈ ಸ್ಥಳಗಳು ಪ್ರಧಾನಿ ಮೋದಿಯವರು ಭೇಟಿ ನೀಡಿ ಇಷ್ಟಪಟ್ಟಿರುವ ಸ್ಥಳಗಳಾಗಿವೆ. ನವೆಂಬರ್ ನಂತರ, ಉತ್ತರ ಭಾರತದ ಅನೇಕ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ನಿಮಗೆ ರೋಮಾಂಚನವನ್ನು ನೀಡುವುದಂತೂ ಖಂಡಿತಾ.
ಕಾರ್ಗಿಲ್ ಮತ್ತು ಲಡಾಖ್:
ಕಳೆದ ವರ್ಷ ದೀಪಾವಳಿಯಂದು ಪ್ರಧಾನಿ ಮೋದಿ ಲಡಾಖ್‌ನ ಕಾರ್ಗಿಲ್ ಗೆ ಭೇಟಿ ನೀಡಿದ್ದರು. ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಅಂದಹಾಗೆ, ಪ್ರಧಾನಿ ಮೋದಿ ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಾರ್ಗಿಲ್ ತಂಪಾದ ಪ್ರದೇಶವಾಗಿದ್ದು, ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಹವಾಮಾನವು ಹೆಚ್ಚು ಅದ್ಭುತವಾಗಿರುತ್ತದೆ. ಚಳಿ ಹೆಚ್ಚಾಗುವ ಮುನ್ನ ಈ ತಿಂಗಳಲ್ಲೇ ಇಲ್ಲಿಗೆ ಪ್ರವಾಸ ಹೋಗಬೇಕು.
ಜಾಗೇಶ್ವರ ಧಾಮ್, ಅಲ್ಮೋರಾ:
ಪ್ರಧಾನಿ ಮೋದಿ ಆಗಾಗ್ಗೆ ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗಷ್ಟೇ ಪ್ರಧಾನಿ ಉತ್ತರಾಖಂಡದ ಅಲ್ಮೋರಾದಲ್ಲಿರುವ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿದ್ದರು. ಕೇದಾರನಾಥ ಮತ್ತು ಬದರಿನಾಥದಂತೆಯೇ ಈ ಧಾಮವೂ ವಿಶ್ವವಿಖ್ಯಾತವಾಗಿದೆ. ಗಿರಿಧಾಮಗಳ ಭದ್ರಕೋಟೆಯಾದ ಉತ್ತರಾಖಂಡದ ಈ ಧಾಮವು ಪ್ರಕೃತಿ ಸೌಂದರ್ಯದಿಂದ ಆವೃತವಾಗಿದೆ. ದರ್ಶನದ ಹೊರತಾಗಿ ಇಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ವಿಶೇಷವೆಂದರೆ ಬರುವ ಚಳಿಯಲ್ಲಿ ಅಂದರೆ ನವೆಂಬರ್ ತಿಂಗಳಿನಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.
ಇದನ್ನೂ ಓದಿ: ರಾವಣನ ಕಥೆಗಳನ್ನು ಸಾರುವ ಶ್ರಿಲಂಕಾದ ಈ ಪ್ರದೇಶಗಳಿಗೆ ಭೇಟಿ ನೀಡಿ
ಪಾರ್ವತಿ ಕುಂಡ್, ಪಿಥೋರಗಢ್:
ಪ್ರಧಾನಿ ಮೋದಿ ಅವರು ಉತ್ತರಾಖಂಡ್ ಪ್ರವಾಸದ ವೇಳೆ ಪಿಥೋರಗಢದ ಪಾರ್ವತಿ ಕುಂಡ್ ಭೇಟಿ ನೀಡಿದ್ದಾರೆ . ಉತ್ತರಾಖಂಡದಲ್ಲಿ ಭೇಟಿ ನೀಡಲು ಇದು ಉತ್ತಮ ಸ್ಥಳ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಇಲ್ಲಿಗೆ ತಲುಪಲು ನೀವು ಮೊದಲು ಪಿಥೋರಗಢಕ್ಕೆ ಬಂದು, ಪಾರ್ವತಿ ಕುಂಡಕ್ಕೆ ನೀವು ಬಸ್ ಅಥವಾ ಟ್ಯಾಕ್ಸಿಯ ಮೂಲಕ ಪ್ರಯಾಣ ಬೆಳೆಸಬಹುದು. ಇಲ್ಲಿಗೆ ತಲುಪಲು ಸುಮಾರು 4 ಅಥವಾ 5 ಗಂಟೆಗಳು ತೆಗೆದುಕೊಳ್ಳಬಹುದು. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿದೆ. ಇಲ್ಲಿಂದ ಪರ್ವತಗಳು ಮತ್ತು ನೀಲಿ ಆಕಾಶದ ನೋಟವು ಆಕರ್ಷಕವಾಗಿದೆ.
ನವೆಂಬರ್‌ನಲ್ಲಿ ನೀವು ಮನಾಲಿ, ಶಿಮ್ಲಾ ಮುಂತಾದ ಸ್ಥಳಗಳಿಗೆ ಹೋಗಬಹುದು. ಏಕೆಂದರೆ ಇಲ್ಲಿ ಡಿಸೆಂಬರ್‌ನಲ್ಲಿ ಹಿಮಪಾತವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಯಾಣಿಸಲು ಕಷ್ಟವಾಗುತ್ತದೆ. ಇದಲ್ಲದೆ, ನವೆಂಬರ್‌ನಲ್ಲಿ ಈಶಾನ್ಯ ಭಾರತಕ್ಕೆ ಭೇಟಿ ನೀಡುವುದು ಸಹ ಒಳ್ಳೆಯದು. ಮಾನ್ಸೂನ್ ನಂತರ, ಈಶಾನ್ಯ ಭಾರತದ ಭಾಗಗಳು ಹಸಿರಿನಿಂದ ಹೆಚ್ಚು ಸುಂದರವಾಗಿ ಕಾಣುತ್ತವೆ. ನೋಡಿದರೆ, ಸಿಕ್ಕಿಂ ಮತ್ತು ನಾಗಾಲ್ಯಾಂಡ್‌ಗೆ ಭೇಟಿ ನೀಡಲು ನವೆಂಬರ್ ಅತ್ಯುತ್ತಮ ತಿಂಗಳು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: