November Changes: ನವೆಂಬರ್​ನಲ್ಲಿ ಇರುವ ಪ್ರಮುಖ ಹಣಕಾಸು ಬದಲಾವಣೆಗಳು

financial Rules Changes: ಅಕ್ಟೋಬರ್ ಮುಗಿದು ನವೆಂಬರ್ ತಿಂಗಳು ಅಡಿ ಇಟ್ಟಿದೆ. ಈ ವೇಳೆ ಹಣಕಾಸು ಕ್ಷೇತ್ರದಲ್ಲಿ ಕೆಲವಿಷ್ಟು ಬದಲಾವಣೆಗಳು ಮತ್ತು ಬೆಳವಣಿಗೆಗಳು ಹಲವು ಇವೆ. ಜನಸಾಮಾನ್ಯರಿಗೆ ಮತ್ತು ಉದ್ಯಮಗಳಿಗೆ ಆರ್ಥಿಕವಾಗಿ ಪರಿಣಾಮ ಬೀರುವ ಸಂಗತಿಗಳು ಕೆಲವಿವೆ. ನವೆಂಬರ್ 1ರಿಂದ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ. ಇವುಗಳ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

November Changes: ನವೆಂಬರ್​ನಲ್ಲಿ ಇರುವ ಪ್ರಮುಖ ಹಣಕಾಸು ಬದಲಾವಣೆಗಳು
ಹಣಕಾಸು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 2:03 PM

ಅಕ್ಟೋಬರ್ ಮುಗಿದು ನವೆಂಬರ್ ತಿಂಗಳು (November 2023) ಅಡಿ ಇಟ್ಟಿದೆ. ಈ ವೇಳೆ ಹಣಕಾಸು ಕ್ಷೇತ್ರದಲ್ಲಿ ಕೆಲವಿಷ್ಟು ಬದಲಾವಣೆಗಳು ಮತ್ತು ಬೆಳವಣಿಗೆಗಳು (financial rules changes) ಹಲವು ಇವೆ. ಜನಸಾಮಾನ್ಯರಿಗೆ ಮತ್ತು ಉದ್ಯಮಗಳಿಗೆ ಆರ್ಥಿಕವಾಗಿ ಪರಿಣಾಮ ಬೀರುವ ಸಂಗತಿಗಳು ಕೆಲವಿವೆ. ನವೆಂಬರ್ 1ರಿಂದ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ. ಇವುಗಳ ಒಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

ನವೆಂಬರ್​ನಲ್ಲಿ ಅನಿಲ ದರ ಪರಿಷ್ಕರಣೆ

ಪೆಟ್ರೋಲಿಯಂ ಮಾರ್ಕೆಟಿಂಗ್ ಕಂಪನಿಗಳು ಪ್ರತೀ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್​ಗಳ ಬೆಲೆ ಪರಿಷ್ಕರಿಸುತ್ತವೆ. ಅಡುಗೆಗೆ ಬಳಸುವ ಎಲ್​ಪಿಜಿ ಮತ್ತು ವಾಹನಗಳಿಗೆ ಬಳಸುವ ಸಿಎನ್​ಜಿ ಗ್ಯಾಸ್ ಸಿಲಿಂಡರ್​ಗಳ ಪರಿಷ್ಕೃತ ಬೆಲೆ ಪ್ರತೀ ತಿಂಗಳ ಒಂದನೇ ತಾರೀಖು ಪ್ರಕಟವಾಗುತ್ತದೆ. ಇಂದು ನವೆಂಬರ್ 1ರಂದು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 101.50 ರೂನಷ್ಟು ಹೆಚ್ಚಾಗಿದೆ.

ಷೇರುಪೇಟೆಯಲ್ಲಿ ವಹಿವಾಟು ಶುಲ್ಕ

ಭಾರತದ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ನವೆಂಬರ್ 1ರಿಂದ ಈಕ್ವಿಟಿ ಡಿರೈವೇಟಿಂಗ್ ಸೆಗ್ಮೆಂಟ್​ನಲ್ಲಿ ಟ್ರಾನ್ಸಾಕ್ಷನ್ ಶುಲ್ಕವನ್ನು ಹೆಚ್ಚಿಸಿದೆ. ಅಕ್ಟೋಬರ್ 20ರಂದು ಈ ನಿಟ್ಟಿನಲ್ಲಿ ಬಿಎಸ್​ಇಯಿಂದ ಘೋಷಣೆಯಾಗಿತ್ತು.

ಇದನ್ನೂ ಓದಿ: LPG Cylinder Price: ದೀಪಾವಳಿ ಹೊಸ್ತಿಲಲ್ಲಿ ಗ್ರಾಹಕರಿಗೆ ಶಾಕ್, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಇ-ಚಲನ್ ಪೋರ್ಟಲ್​ಗೆ ಜಿಎಸ್​ಟಿ ಚಲನ್ ಹಾಕುವುದು

ಕನಿಷ್ಠ 100 ಕೋಟಿ ರೂಗೂ ಹೆಚ್ಚು ಮೌಲ್ಯದ ಸಂಸ್ಥೆಗಳು ಇ-ಚಲನ್ ಪೋರ್ಟಲ್​ನಲ್ಲಿ ಜಿಎಸ್​ಟಿ ಚಲನ್ ಅಪ್​ಲೋಡ್ ಮಾಡಬೇಕು. ಬಿಲ್ ರಚನೆಯಾಗಿ 30 ದಿನದೊಳಗೆ ಅಪ್​ಲೋಡ್ ಆಗಬೇಕು ಎಂದು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್​ಐಸಿ) ಹೇಳಿದೆ.

ಲ್ಯಾಪ್​ಟಾಪ್ ಆಮದು ನಿರ್ಬಂಧ

ಎಚ್​ಎಸ್ಎನ್ 8741 ಕೆಟಗರಿ ಅಡಿಯಲ್ಲಿ ಲ್ಯಾಪ್​ಟಾಪ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ ಏಳು ಉತ್ಪನ್ನಗಳ ಆಮದುಗಳ ಮೇಲೆ ಸರ್ಕಾರ ಆಗಸ್ಟ್ 3ರಂದು ನಿರ್ಬಂಧ ಹೇರಿತ್ತು. ಈಗ ನಿರ್ಬಂಧಿತ ಆಮದುಗಳಿಗೆ ಪರವಾನಿಗೆ ಹೊಂದಿದ್ದರೆ ಈ ಏಳು ಉತ್ಪನ್ನಗಳ ಆಮದು ಮಾಡಲು ಅವಕಾಶ ಕೊಡಲಾಗಿದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಲ್ಯಾಪ್ಸ್ ಆದ ಎಲ್​ಐಸಿ ಪಾಲಿಸಿಗಳಿಗೆ ಮರುಜೀವ

ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಅನ್ನು ನಿರ್ದಿಷ್ಟ ಅವಧಿಯವರೆಗೆ ಕಟ್ಟದೇ ಹೋದರೆ ಅವುಗಳು ಲ್ಯಾಪ್ಸ್ ಆಗುತ್ತವೆ. ಇವುಗಳ ರಿನಿವಲ್​ಗೆ ಸರ್ಕಾರ ಅವಕಾಶ ಕೊಟ್ಟಿತ್ತು. ಅಕ್ಟೋಬರ್ 31ರವರೆಗೂ ಇದಕ್ಕೆ ಅವಕಾಶ ಇತ್ತು. ಈಗ ಈ ಡೆಡ್​ಲೈನ್ ಮುಗಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್