AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆಯಾಯ್ತು ಭಾರತಕ್ಕೆ ಬರುವ ರಷ್ಯಾ ತೈಲ; ಹೆಚ್ಚಾಯ್ತು ಸೌದಿ ತೈಲ; ಏನು ಕಾರಣ?

Indian Oil Imports: ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.

ಕಡಿಮೆಯಾಯ್ತು ಭಾರತಕ್ಕೆ ಬರುವ ರಷ್ಯಾ ತೈಲ; ಹೆಚ್ಚಾಯ್ತು ಸೌದಿ ತೈಲ; ಏನು ಕಾರಣ?
ಕಚ್ಛಾ ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 11:48 AM

Share

ನವದೆಹಲಿ, ನವೆಂಬರ್ 1: ರಷ್ಯಾದಿಂದ ತೈಲ ಆಮದನ್ನು ಭಾರತ ಕಡಿಮೆ ಮಾಡಿದೆ. ರಷ್ಯಾದಿಂದ ಶೇ. 43ರಷ್ಟು ಇದ್ದ ಕಚ್ಚಾ ತೈಲ ಆಮದು (crude oil imports) ಈಗ ಶೇ. 35ಕ್ಕೆ ಬಂದಿದೆ. ಇನ್ನೊಂದೆಡೆ ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳಿಂದ ತೈಲ ಪೂರೈಕೆಯನ್ನು ಭಾರತ ಹೆಚ್ಚಿಸಿದೆ. ರಷ್ಯಾದಿಂದ ತೈಲ ಪಡೆಯುವುದನ್ನು ಭಾರತ ಕಡಿಮೆ ಮಾಡಲು ಪ್ರಮುಖ ಕಾರಣವೆಂದರೆ, ಬೆಲೆ ಹೆಚ್ಚಳ. ರಷ್ಯಾ ಈಗ ಮೊದಲಿನಂತೆ ದೊಡ್ಡ ಮಟ್ಟದ ಡಿಸ್ಕೌಂಟ್ ಕೊಡುತ್ತಿಲ್ಲ. ರಿಯಾಯಿತಿ ಬಹಳಷ್ಟು ಕಡಿಮೆ ಮಾಡಿದೆ. ಇದರಿಂದ ಭಾರತದ ತೈಲ ಕಂಪನಿಗಳಿಗೆ ಹೆಚ್ಚಿನ ಅನುಕೂಲ ತರುತ್ತಿಲ್ಲ. ಈ ಕಾರಣಕ್ಕೆ ಪೆಟ್ರೋಲಿಯಂ ಕಂಪನಿಗಳು ರಷ್ಯಾದ ಉರಲ್ (ತೈಲ) ಆಮದು ಕಡಿಮೆ ಮಾಡಿವೆ.

ರಷ್ಯಾದ ತೈಲ ಆಮದನ್ನು ಭಾರತೀಯ ಕಂಪನಿಗಳು ಕಡಿಮೆ ಮಾಡಲು ಇನ್ನೊಂದು ಅಸ್ಪಷ್ಟ ಕಾರಣ ಇದೆ. ರಷ್ಯಾದ ತೈಲ ಆಮದಿಗೆ ಅಮೆರಿಕ ಒಂದು ಬ್ಯಾರಲ್​ಗೆ 60 ಡಾಲರ್ ದರದ ಮಿತಿ ಹಾಕಿದೆ. ಈ ನಿಯಮ ಮೀರಿ ರಷ್ಯಾ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರುಗಳನ್ನು ಅಮೆರಿಕ ತನಿಖೆಗೊಳಪಡಿಸಿದೆ. ಈ ಮೂಲಕ ಅಮೆರಿಕ ಬಹಿಷ್ಕಾರ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಸೂಚನೆ ಇದೆ. ಹೀಗಾಗಿ, ಭಾರತೀಯ ಕಂಪನಿಗಳು ರಷ್ಯಾದಿಂದ ತೈಲ ಪೂರೈಕೆಯನ್ನು ಕಡಿಮೆ ಮಾಡುತ್ತಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: LPG Cylinder Price: ದೀಪಾವಳಿ ಹೊಸ್ತಿಲಲ್ಲಿ ಗ್ರಾಹಕರಿಗೆ ಶಾಕ್, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಯುಎಇ ಮೀರಿಸಿದ ಸೌದಿ

ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.

ಅಕ್ಟೋಬರ್ ತಿಂಗಳಲ್ಲಿ ರಷ್ಯಾದಿಂದ ಭಾರತ ದಿನಕ್ಕೆ 15 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಅದೇ ವೇಳೆ, ಸೌದಿ ಅರೇಬಿಯಾದಿಂದ ದಿನಕ್ಕೆ ಮಾಡಿಕೊಳ್ಳುವ ತೈಲ ಆಮದು 8.71 ಲಕ್ಷದಷ್ಟಿದೆ. ಹಿಂದಿನ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಇದೇ ಸೌದಿ ಅರೇಬಿಯಾದಿಂದ ಭಾರತೀಯ ಕಂಪನಿಗಳು ಸರಾಸರಿಯಾಗಿ ದಿನವೊಂದಕ್ಕೆ 4.84 ಲಕ್ಷ ಬ್ಯಾರಲ್ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಅಕ್ಟೋಬರ್​ನಲ್ಲಿ ಈ ಪ್ರಮಾಣ ಬಹುತೇಕ ಡಬಲ್ ಆಗಿದೆ. ಇನ್ನೊಂದೆಡೆ, ಸೆಪ್ಟೆಂಬರ್​ಗೆ ಹೋಲಿಸಿದರೆ ಅಕ್ಟೋಬರ್​ನಲ್ಲಿ ರಷ್ಯಾದಿಂದ ಆದ ತೈಲ ಅಮದು ಶೇ. 15ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಗಂಡಸರಿಗಿಂತ ಹೆಂಗಸರು ಒಳ್ಳೆಯ ಇನ್ವೆಸ್ಟರ್​ಗಳಾಗ್ತಾರಂತೆ; ಸೆಬಿ ಸದಸ್ಯ ಅನಂತನಾರಾಯಣ್ ಕೊಟ್ಟ ಕಾರಣ ಬಹಳ ಇಂಟರೆಸ್ಟಿಂಗ್

ರಷ್ಯಾ ದೇಶ ಜನವರಿಯಲ್ಲಿ ತನ್ನ ಕಚ್ಛಾ ತೈಲವನ್ನು ಬ್ಯಾರಲ್​ಗೆ ಸರಾಸರಿಯಾಗಿ 60 ಡಾಲರ್​ನಂತೆ ಮಾರುತ್ತಿತ್ತು. ಮಾರುಕಟ್ಟೆ ದರಕ್ಕಿಂತ 22 ಡಾಲರ್​ನಷ್ಟು ಕಡಿಮೆ ಬೆಲೆಗೆ ಅದು ನೀಡುತ್ತಿತ್ತು. ಈಗ ಅದು ಬ್ಯಾರಲ್​ಎ 86 ಡಾಲರ್​ನಂತೆ ಮಾರುತ್ತಿದೆ. ಡಿಸ್ಕೌಂಟ್ ಪ್ರಮಾಣ 22 ಡಾಲರ್ ಇದ್ದದ್ದು 7 ಡಾಲರ್​ಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್