AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ರಜೆ: ಚಿಕ್ಕಮಗಳೂರಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡು, ಫುಲ್ ಟ್ರಾಫಿಕ್​ ಜಾಮ್

ರಜೆಗಳ ಸರಮಾಲೆಯೇ ಇರುವುದರಿಂದ ಏಕಕಾಲದಲ್ಲಿ ಪ್ರವಾಸಿಗರು ಬರುತ್ತಿದ್ದು, ಮುಳ್ಳಯ್ಯನಗಿರಿ ದತ್ತಪೀಠ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆ ಗಟ್ಟಲೆ ಪ್ರವಾಸಿಗರು ಪರದಾಡುವಂತೆ ಆಗಿದೆ. ಮುಂಜಾನೆಯಿಂದ ಮುಳ್ಳಯ್ಯನಗಿರಿ ದತ್ತಪೀಠಕ್ಕೆ ಬರೊಬ್ಬರಿ 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆ.

ಸಾಲು ಸಾಲು ರಜೆ: ಚಿಕ್ಕಮಗಳೂರಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರ ದಂಡು, ಫುಲ್ ಟ್ರಾಫಿಕ್​ ಜಾಮ್
ಚಿಕ್ಕಮಗಳೂರು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್|

Updated on:Oct 01, 2023 | 2:43 PM

Share

ಚಿಕ್ಕಮಗಳೂರು, ಅ.01: ಪ್ರವಾಸಿಗರ ಹಾಟ್​ಸ್ಪಾಟ್​ ಕಾಫಿನಾಡಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಸಾಲು ಸಾಲು ರಜೆ ಇರುವ ಹಿನ್ನೆಲೆ ಚಿಕ್ಕಮಗಳೂರಿನ(Chikkamagaluru) ಮಳ್ಳಯ್ಯನಗಿರಿ, ದತ್ತಪೀಠ ಹಾಗೂ ಚಂದ್ರದ್ರೋಣ ಪರ್ವತ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಪ್ರವಾಸಿಗರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಇದರ ಪರಿಣಾಮ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್​ಪೋಸ್ಟ್ ಬಳಿ ಟ್ರಾಫಿಕ್​ಜಾಮ್ ಉಂಟಾಗಿದ್ದು, ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಸಾಲುಗಟ್ಟಿ ನಿಂತಿರುವ ಸಾವಿರಾರು ಪ್ರವಾಸಿಗರ ವಾಹನಗಳು

ಹೌದು, ರಜೆಗಳ ಸರಮಾಲೆಯೇ ಇರುವುದರಿಂದ ಏಕಕಾಲದಲ್ಲಿ ಪ್ರವಾಸಿಗರು ಬರುತ್ತಿದ್ದು, ಮುಳ್ಳಯ್ಯನಗಿರಿ ದತ್ತಪೀಠ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆ ಗಟ್ಟಲೆ ಪ್ರವಾಸಿಗರು ಪರದಾಡುವಂತೆ ಆಗಿದೆ. ಮುಂಜಾನೆಯಿಂದ ಮುಳ್ಳಯ್ಯನಗಿರಿ ದತ್ತಪೀಠಕ್ಕೆ ಬರೊಬ್ಬರಿ 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದಾರೆ. ಈ ಹಿನ್ನಲೆ  ಪ್ರವಾಸಿ ತಾಣಗಳಿಗೆ ತೆರಳಲಾಗದೆ ಕೆಲ ಪ್ರವಾಸಿಗರು ವಾಪಸ್ ಹೋಗುತ್ತಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ

ನಿನ್ನೆ ಭಾರಿ ಮಳೆಗೆ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗುರುಳಿದ್ದ ಮರಗಳು

ಹೌದು, ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಕುಸಿದು ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಇನ್ನು ಕಾಫಿನಾಡಿನ ಮಲೆನಾಡಿಗರು ಮಳೆ ಇಲ್ಲದೆ ಕಂಗಾಲಾಗಿದ್ದರು. ನೀರಿಗೂ ಸಂಕಷ್ಟವಾಗುವ ಆತಂಕದಲ್ಲಿದ್ದ ಮಲೆನಾಡಿಗರಿಗೆ ನಿನ್ನೆಯಿಂದ ಸುರಿಯುತ್ತಿರುವ ವರುಣ, ಜನರ ಆತಂಕ ದೂರ ಮಾಡಿದ್ದಾನೆ. ಆದರೆ, ಒಂದೇ ದಿನದ ಮಳೆಗೆ ಮರಗಳು ಉರುಳಿ ಬಿದ್ದಿದೆ. ಹೌದು, ಭಾರಿ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮ ಸಮೀಪ ಚಾರ್ಮಾಡಿ ಘಾಟ್‌ನ 8ನೇ ತಿರುವಿನಲ್ಲಿ 3 ಮರಗಳು ರಸ್ತೆಗುರುಳಿವೆ.

ನಿನ್ನೆಯಿಂದ ಸುರಿಯುತ್ತಿರುವ ದಿಢೀರ್​ ಮಳೆಯ ಪರಿಣಾಮ ಅಪಾಯಗಳು ಸಂಭವಿಸಬಹುದು ಎಂಬ ಆತಂಕ ಜನರಲ್ಲಿ ಶುರುವಾಗಿದೆ. ಕೇವಲ 3 ಮರಗಳು ರಸ್ತೆಗುರುಳಿದ್ದು,  ಪರಿಣಾಮ  ಬರೊಬ್ಬರಿ 3 ಗಂಟೆಗಳ ಕಾಲ ಟ್ರಾಫಿಕ್‌ಜಾಮ್ ಉಂಟಾಗಿ, ವಾಹನ ಸವಾರರು ಪರದಾಡಿದ್ದಾರೆ. ಬಳಿಕ ಮೂರು ಯಂತ್ರಗಳಿಂದ ಪೊಲೀಸರ ಜೊತೆ ಸೇರಿದ ಸ್ಥಳಿಯರು ನಿರಂತರ ಕಾರ್ಯಾಚರಣೆ ಮಾಡಿ ಮರ ತೆರವು ಮಾಡಿದ್ದಾರೆ. ಇದೀಗ ಪ್ರವಾಸಿಗರ ದಂಡು ಚಿಕ್ಕಮಗಳೂರಿಗೆ ಆಗಮಿಸಿದ್ದು, ಟ್ರಾಫಿಕ್​ ಜಾಮ್​ ಉಂಟಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sun, 1 October 23