AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ; ಆಕೆ ಓಡಾಡಿದ ಜಾಗವನ್ನ ತೀರ್ಥ ಹಾಕಿ ಶುದ್ಧ ಮಾಡಿದ ಗ್ರಾಮಸ್ಥರು

2022, ಅಕ್ಟೋಬರ್ 4 ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ್ತಿಯಾಗಿ ಚೈತ್ರ ಕುಂದಾಪುರ ಆಗಮಿಸಿದ್ದರು. ಈ ವೇಳೆ ಎರಡು ಕೋಮುಗಳ ನಡುವೆ ಗಲಾಟೆಯಾಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅಂದೇ ಗ್ರಾಮಸ್ಥರು ಚೈತ್ರಾ ಭಾಷಣವನ್ನು ವಿರೋಧಿಸಿ ದೇವರಿಗೆ ಪ್ರಾರ್ಥನೆ ಮಾಡಿದ್ದರು.

ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ; ಆಕೆ ಓಡಾಡಿದ ಜಾಗವನ್ನ ತೀರ್ಥ ಹಾಕಿ ಶುದ್ಧ ಮಾಡಿದ ಗ್ರಾಮಸ್ಥರು
ಚಿಕ್ಕಮಗಳೂರು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 17, 2023 | 4:15 PM

ಚಿಕ್ಕಮಗಳೂರು, ಸೆ.17: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ ಬಿಳುತ್ತಿದ್ದಂತೆ ಚಿಕ್ಕಮಗಳೂರು (Chikkamagalur) ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಚೈತ್ರಾ ಓಡಾಡಿದ ಜಾಗವನ್ನು ಗ್ರಾಮಸ್ಥರು ಸೇರಿ ತೀರ್ಥ ಹಾಕಿ ಶುದ್ಧ ಮಾಡಿದ ಘಟನೆ ಕೂಡ ನಡೆದಿದೆ. ಹೌದು, ಕಳೆದ ವರ್ಷ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚೈತ್ರಾ ಕುಂದಾಪುರ(Chaitra Kundapura) ಅವರು ಚಿಕ್ಕ ವಿಷಯವನ್ನ ದೊಡ್ಡದು ಮಾಡಿ ಭಾಷಣ ಮಾಡುವ ಮೂಲಕ ಗ್ರಾಮದಲ್ಲಿ ಎರಡು ಬಣಗಳ ನಡುವೆ ಗಲಾಟೆ ತಂದಿಟ್ಟಿದ್ದರಂತೆ. ಹೀಗಾಗಿ ಗ್ರಾಮ ದೇವರಿಗೆ ಚೈತ್ರಾ ವಿರುದ್ಧ ಪ್ರಾರ್ಥನೆ ಮಾಡಿ, ಒಂದು ವರ್ಷದೊಳಗೆ ಶಿಕ್ಷೆ ನೋಡುವಂತೆ ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದರು.

ಭಗವದ್ವಜ ವಿಚಾರವಾಗಿ ಗ್ರಾಮದಲ್ಲಿ ನಡೆದಿದ್ದ ಗಲಾಟೆ

ಹೌದು, 2022, ಅಕ್ಟೋಬರ್ 4 ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ್ತಿಯಾಗಿ ಚೈತ್ರ ಕುಂದಾಪುರ ಆಗಮಿಸಿದ್ದರು. ಈ ವೇಳೆ ಎರಡು ಕೋಮುಗಳ ನಡುವೆ ಗಲಾಟೆಯಾಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಅಂದೇ ಗ್ರಾಮಸ್ಥರು ಚೈತ್ರಾ ಭಾಷಣವನ್ನು ವಿರೋಧಿಸಿ ದೇವರಿಗೆ ಪ್ರಾರ್ಥನೆ ಮಾಡಿದ್ದರು. ಇದೀಗ ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿಳುತ್ತಿದ್ದಂತೆ ದೇವರಿಗೆ ವಿಶೇಷ ಪೂಜೆ ನಡೆಸಿದ ಗ್ರಾಮಸ್ಥರು, ಹರಕೆ ತಿರಿಸಿದ್ದಾರೆ.

ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ ಕೇಸ್: ಉದ್ಯಮಿಗೆ ನಂಬಿಸಲು ಸಾಲುಮರದ ತಿಮ್ಮಕ್ಕನ ಸರ್ಕಾರಿ ಕಾರು ದುರ್ಬಳಕೆ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿದ ಚೈತ್ರಾ ಕುಂದಾಪುರ

ಇನ್ನು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಐದುವರೆ ಕೋಟಿ ಚೈತ್ರಾ ಕುಂದಾಪುರ ಪಡೆದಿದ್ದಳು. ಇನ್ನೊಂದುವರೆ ಕೋಟಿಗೆ ಹೊಂಚು ಹಾಕಿದ್ದ ಸ್ವಯಂ ಘೋಷಿತ ಹಿಂದೂ ಹೆಣ್ಣು ಹುಲಿ ಖ್ಯಾತಿಯ ಚೈತ್ರಾ ಕುಂದಾಪುರ ಅರೆಸ್ಟ್ ಆಗಿದ್ದಾಳೆ. ಇದಾದ ಮೇಲೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರಿಗೆ ಮತ್ತಷ್ಟು ಆರೋಪಿಗಳು ಬಂಧಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚೈತ್ರಾ ಮತ್ತು ಗ್ಯಾಂಗ್​ ಮಾಡಿದ್ದ ಖತರ್ನಾಕ್​ ಪ್ಲ್ಯಾನ್​ ಹೊರಬಿದ್ದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ