AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಕಾರು ಬಾಗಲಕೋಟೆಯಲ್ಲಿ ಪತ್ತೆ, ಯಾರ ಮನೆಯಲ್ಲಿ ಗೊತ್ತಾ? ಇಲ್ಲಿವೆ ಫೋಟೋಸ್

MLA ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ಪಡೆದುಕೊಂಡು ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ಗ್ಯಾಂಗ್​ ವಂಚನೆ ಮಾಡಿದೆ. ಉದ್ಯಮಿಯಿಂದ ಕಿತ್ತುಕೊಂಡ ಕೋಟ್ಯಾಂತರ ರೂಪಾಯಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೈಫೈ ಜೀವನ ಆರಂಭಿಸಿದ್ದಾರೆ. ಅಲ್ಲದೇ ಅದೇ ದುಡ್ಡಿನಲ್ಲಿ ಚೈತ್ರಾ ಕಿಯಾ ಕಂಪನಿಯ ಕಾರು ಖರೀದಿಸಿದ್ದು, ಇದೀಗ ಆ ಕಾರು ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.

ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ|

Updated on:Sep 17, 2023 | 2:09 PM

Share
ಉದ್ಯಮಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ 5 ಕೋಟಿ ಹಣ ಪಡೆದು ವಂಚನೆ ಕೇಸ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಕಾರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆಯಾಗಿದೆ.

1 / 8
ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಮನೆಯಲ್ಲಿ ಚೈತ್ರಾ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದೆ.

2 / 8
ಚೈತ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್​ನ ಕಿಯಾ ಕಾರನ್ನು ಕಿರಣ್, ಸೆಪ್ಟೆಂಬರ್ 9ರಂದು ತಂದು  ತನ್ನ ಬಳಿ ಇಟ್ಟುಕೊಂಡಿದ್ದ.

3 / 8
ಮುಧೋಳ‌ದಲ್ಲಿ ಡ್ರೈವಿಂಗ್ ಸ್ಕೂಲ್‌ ಹೊಂದಿರುವ ಕಿರಣ್ ಗಣಪ್ಪಗೋಳ, ಈ ಹಿಂದೆ ಮುಧೋಳ ಕಾರ್ಯಕ್ರಮಕ್ಕೆ ಬಂದಿದ್ದ ಚೈತ್ರಾ ಕುಂದಾಪುರ ಪರಿಚಯವಾಗಿತ್ತು.

4 / 8
ಸದ್ಯ ಸಿಸಿಬಿ ಪೊಲೀಸರು ಚೈದ್ರಾ ಕುಂದಾಪುರಗೆ ಸೇರಿದ  KA 20 ME 7253 ನಂಬರ್​ನ ಕಿಯಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

5 / 8
ಚೈದ್ರಾ ಕುಂದಾಪುರಗೆ ಸೇರಿದ ಕಾರು ತಂದು ಇಟ್ಟುಕೊಂಡಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳನನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

6 / 8
ಡೀಲ್ ಪ್ರಕರಣ ಹೊರಬಿದ್ದ ವೇಳೆ ಚೈತ್ರಾ ಪಿಎ ಶ್ರೀಕಾಂತ್, ಕಿರಣ್​ಗೆ ಕರೆ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು‌ ನಿಮ್ಮ‌ಬಳಿ ಇಟ್ಕೊಳ್ಳಿ ಎಂದು ಹೇಳಿದ್ದ. ಅದರಂತೆ ಕಿರಣ್, ಸೆಪ್ಟೆಂಬರ್ 9ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ ತಂದಿದ್ದ.

7 / 8
ಬಳಿಕ ಸಿಸಿಬಿ ಪೊಲೀಸರು ಚೈತ್ರಾ, ಪಿಎ ಶ್ರೀಕಾಂತ್, ಶ್ರೀಕಾಂತ್ ‌ನಿಂದ ಕಿರಣ್​ಗೆ ಕರೆ ಟ್ರೈಸೌಟ್ ಮಾಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

8 / 8

Published On - 1:48 pm, Sun, 17 September 23