- Kannada News Photo gallery Cricket photos Happy Birthday Ashwin Ravichandran Ashwin 37th Birthday Here R Ashwin and Prithi Love Story
R Ashwin: ಆರ್. ಅಶ್ವಿನ್ಗೆ ಹುಟ್ಟುಹಬ್ಬದ ಸಂಭ್ರಮ: ರವಿಚಂದ್ರನ್ ಸ್ಕೂಲ್ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತೇ?
Happy Birthday Ravichandran Ashwin: ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವರ್ಷಕ್ಕೆ ಅಶ್ವಿನ್ ಕಾಲಿಟ್ಟಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಸಂದರ್ಭ ಅಶ್ವಿನ್ ಹಾಗೂ ಅವರ ಮಡದಿ ಪ್ರೀತಿ ಕುರಿತ ಲವ್ಸ್ಟೋರಿ ಬಗ್ಗೆ ಒಂದಿಷ್ಟು ವಿಚಾರ ತಿಳಿದುಕೊಳ್ಳೋಣ.
Updated on: Sep 17, 2023 | 9:58 AM

ರವಿಚಂದ್ರನ್ ಅಶ್ವಿನ್ ಅವರು ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುವ ಆರ್. ಅಶ್ವಿನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 37ನೇ ವರ್ಷಕ್ಕೆ ಕಾಲಿಟ್ಟಿರುವ ಸ್ಪಿನ್ ಮಾಂತ್ರಿಕನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಅಶ್ವಿನ್ ಕ್ರಿಕೆಟ್ ಜಗತ್ತಿನ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅವರ ಪತ್ನಿ ಪ್ರೀತಿ, ಅಶ್ವಿನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಕೆಲ ವಿಚಾರಗಳನ್ನು ಇತ್ತೀಚೆಗಷ್ಟೆ ಹಂಚಿಕೊಂಡಿದ್ದರು. ಅವರು ಏನು ಹೇಳಿದ್ದಾರೆ ನೋಡಿ.

ನಾವು ಚಿಕ್ಕಂದಿನಿಂದಲೂ ಜೊತೆಗೇ ಇದ್ದೆವು, ಒಂದೇ ಸ್ಕೂಲ್ನಲ್ಲಿ ಓದಿದೆವು ಎಂಬ ಗುಟ್ಟನ್ನು ಪ್ರೀತಿ ಅಶ್ವಿನ್ ಅವರು ಜಿಯೋ ಸಿನಿಮಾದ ಹ್ಯಾಂಗೌಟ್ ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾರೆ.

ಸಣ್ಣವರಿದ್ದಾಗ ನಾವು ಒಂದೇ ಶಾಲೆಗೆ ಹೋಗುತ್ತಿದ್ದೆವು. ಮದುವೆಗೂ ಮುನ್ನ ನಮ್ಮಿಬ್ಬರ ನಡುವೆ ಪರಿಚಯವಿತ್ತು. ಶಾಲಾ ದಿನಗಳಿಂದ ಹಿಡಿದು ವಯಸ್ಕರಾಗುವವರೆಗೂ ನಾವು ಜತೆಯಾಗಿಯೇ ಬೆಳೆದೆವು ಎಂದು ಪ್ರೀತಿ ಅಶ್ವಿನ್ ಹೇಳಿದ್ದಾರೆ.

ಅಶ್ವಿನ್ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕ್ರಶ್ ಇತ್ತು. ಈ ವಿಚಾರ ಇಡೀ ಶಾಲೆಗೆ ತಿಳಿದಿತ್ತು. ಆಮೇಲೆ ಅವರು ಕ್ರಿಕೆಟ್ ಕಡೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಬೇರೆಡೆ ತೆರಳಿದರು. ಹೀಗಿದ್ದರೂ ನಾವಿಬ್ಬರು ಹುಟ್ಟುಹಬ್ಬ, ಫ್ಯಾಮಿಲಿ ಕಾರ್ಯಕ್ರಮದಲ್ಲಿ ಆಗಾಗ ಭೇಟಿ ಆಗುತ್ತಿದ್ದೆವು - ಪ್ರೀತಿ.

ತುಂಬಾ ಸಮಯದ ಬಳಿಕ ಅಶ್ವಿನ್ ನನ್ನನ್ನು ಒಂದು ದಿನ ಭೇಟಿ ಆದರು. ಆಗ ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಹೀಗೆ ಅಲ್ಲಿಂದ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿ ಆಯಿತು ಎಂದು ಹೇಳಿದ್ದಾರೆ.

ಇನ್ನು ಅಶ್ವಿನ್ ಪ್ರಪೋಸ್ ಮಾಡಿದ ಬಗ್ಗೆಯೂ ಪ್ರೀತಿ ಅವರು ತಿಳಿಸಿದ್ದು, ನನ್ನನ್ನು ಅಶ್ವಿನ್ ಒಂದು ದಿನ ನೇರವಾಗಿ ಕ್ರಿಕೆಟ್ ಗ್ರೌಂಡ್‌ಗೆ ಕರೆದುಕೊಂಡು ಹೋದರು. ನಾನು ನಿನ್ನನ್ನು ಈ ಜೀವ ಇರುವವರೆಗೆ ಇಷ್ಟಪಡಲು ಬಯಸುತ್ತೇನೆ. ನಮ್ಮಿಬ್ಬರ ಪರಿಚಯವಾಗಿ 10 ವರ್ಷಗಳಾದರೂ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿ ಪ್ರಪೋಸ್ ಮಾಡಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ.

ಅಶ್ವಿನ್ ಅವರ ಪ್ರಪೋಸಲ್ಗೆ ಯೆಸ್ ಎಂದ ಪ್ರೀತಿ ನವೆಂಬರ್ 13, 2011ರಂದು ಮದುವೆ ಆದರು. ಇದೀಗ ಇವರಿಬ್ಬರಿಗೆ ಅಖಿರಾ ಹಾಗೂ ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಶ್ವಿನ್ ಸದ್ಯ ಭಾರತ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ್ ತಂಡದ ಪರ ಆಡುತ್ತಾರೆ.
