Asia Cup 2023: ಏಷ್ಯಾಕಪ್ ಫೈನಲ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಹೇಗಿದೆ ಗೊತ್ತಾ?

Rohit Sharma: ಇಂದು ಭಾರತ ಮತ್ತು ಶ್ರೀಲಂಕಾ ನಡುವೆ 2023 ರ ಏಷ್ಯಾಕಪ್​ನ ಫೈನಲ್ ಪಂದ್ಯ ನಡೆಯುತ್ತಿದೆ. ಈ ಉಭಯ ತಂಡಗಳ ನಡುವಿನ ಕದನಕ್ಕೆ ಆರ್. ಪ್ರೇಮದಾಸ ಮೈದಾನ ಆತಿಥ್ಯವಹಿಸುತ್ತಿದೆ. ಇನ್ನು ಇದೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಕೂಡ ಬರೆಯಲಿದ್ದಾರೆ.

|

Updated on: Sep 17, 2023 | 2:16 PM

ಇಂದು ಭಾರತ ಮತ್ತು ಶ್ರೀಲಂಕಾ ನಡುವೆ 2023 ರ ಏಷ್ಯಾಕಪ್​ನ ಫೈನಲ್ ಪಂದ್ಯ ನಡೆಯುತ್ತಿದೆ. ಈ ಉಭಯ ತಂಡಗಳ ನಡುವಿನ ಕದನಕ್ಕೆ ಆರ್. ಪ್ರೇಮದಾಸ ಮೈದಾನ ಆತಿಥ್ಯವಹಿಸುತ್ತಿದೆ. ಇನ್ನು ಇದೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಕೂಡ ಬರೆಯಲಿದ್ದಾರೆ.

1 / 8
ವಾಸ್ತವವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ವೃತ್ತಿಜೀವನದ 250 ನೇ ಏಕದಿನ ಪಂದ್ಯವಾಗಿದೆ. ಅಲ್ಲದೆ ಇದು ರೋಹಿತ್ ಶರ್ಮಾ ಅವರ ಐದನೇ ಏಷ್ಯಾಕಪ್ ಫೈನಲ್ ಪಂದ್ಯವಾಗಿದೆ.

2 / 8
ಇದುವರೆಗೆ ರೋಹಿತ್ ಶರ್ಮಾ ನಾಲ್ಕು ಏಷ್ಯಾಕಪ್ ಫೈನಲ್‌ಗಳಲ್ಲಿ ಆಡಿದ್ದಾರೆ. 2018ರಲ್ಲಿ ನಡೆದ ಏಷ್ಯಾಕಪ್‌ನ ಫೈನಲ್‌ನಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ದರು. ಇನ್ನು ಈ ಮೆಗಾ ಈವೆಂಟ್​ನಲ್ಲಿ ರೋಹಿತ್ ಆಟ ಹೇಗಿದೆ ಎಂಬುದನ್ನು ನೋಡುವುದಾದರೆ..

3 / 8
ರೋಹಿತ್ ಶರ್ಮಾ ಇದುವರೆಗೆ ಆಡಿರುವ ನಾಲ್ಕು ಏಷ್ಯಾಕಪ್ ಫೈನಲ್‌ ಪಂದ್ಯಗಳಲ್ಲಿ ಒಟ್ಟು 93 ರನ್ ಕಲೆಹಾಕಿದ್ದು, ರೋಹಿತ್ ಬ್ಯಾಟ್​​ನಿಂದ ಒಂದೇ ಒಂದು ಶತಕ ಬಾರಿಸಿಲ್ಲ. ಅಲ್ಲದೆ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಬ್ಯಾಟ್ ಕೊಂಚ ಮಂಕಾಗಿರುವುದನ್ನು ಇಲ್ಲಿ ಕಾಣಬಹುದಾಗಿದೆ.

4 / 8
ರೋಹಿತ್ ಶರ್ಮಾ ಅವರ ಮೊದಲ ಏಷ್ಯಾಕಪ್ ಫೈನಲ್ 2008 ರಲ್ಲಿ ಶ್ರೀಲಂಕಾ ವಿರುದ್ಧವಾಗಿತ್ತು. ಕರಾಚಿಯಲ್ಲಿ ನಡೆದಿದ್ದ ಆ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 100 ರನ್‌ಗಳಿಂದ ಸೋತಿತ್ತು. ಇನ್ನು ಆ ಪಂದ್ಯದಲ್ಲಿ ರೋಹಿತ್ ಶರ್ಮಾ 8 ಎಸೆತಗಳಲ್ಲಿ 3 ರನ್ ಗಳಿಸಿದ್ದರು.

5 / 8
2010ರಲ್ಲಿ ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ, ಶ್ರೀಲಂಕಾ ತಂಡವನ್ನು ಎದುರಿಸಿತ್ತು. ಅದು ರೋಹಿತ್ ಶರ್ಮಾ ಅವರ ಎರಡನೇ ಏಷ್ಯಾಕಪ್ ಫೈನಲ್ ಆಗಿತ್ತು.  ಆ ಪಂದ್ಯವನ್ನು ಭಾರತ 81 ರನ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ 52 ಎಸೆತಗಳಲ್ಲಿ 41 ರನ್ ಗಳಿಸಿದ್ದರು.

6 / 8
ಇನ್ನು 2016ರಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಜಯ ಸಾಧಿಸಿತ್ತು.  ಈ ಪಂದ್ಯದಲ್ಲಿ ರೋಹಿತ್ ಶರ್ಮಾ 5 ಎಸೆತಗಳಲ್ಲಿ ಒಂದು ರನ್ ಬಾರಿಸಲಷ್ಟೇ ಶಕ್ತರಾಗಿದ್ದರು.

7 / 8
ಇನ್ನು 2018 ರಲ್ಲಿ ನಡೆದ ಏಷ್ಯಾಕಪ್‌ಗೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ದರಿಂದ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದ್ದರು.  ಬಾಂಗ್ಲಾದೇಶ ವಿರುದ್ಧ ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಮೂರು ವಿಕೆಟ್‌ಗಳ ಜಯ ಸಾಧಿಸಿತ್ತು. ಬಾಂಗ್ಲಾ ನೀಡಿದ 223 ರನ್‌ಗಳ ಗುರಿ ಬೆನ್ನತ್ತಿದ ಭಾರತದ ಪರ ರೋಹಿತ್ ಶರ್ಮಾ ಅಗ್ರ ಸ್ಕೋರರ್ ಎನಿಸಿಕೊಂಡರು. ಈ ಪಂದ್ಯದಲ್ಲಿ ರೋಹಿತ್ 55 ಎಸೆತಗಳಲ್ಲಿ 48 ರನ್ ಗಳಿಸಿದ್ದರೆ, ಕೊನೆಯ ಎಸೆತದಲ್ಲಿ ಭಾರತ ಗೆಲುವು ಸಾಧಿಸಿತ್ತು.

8 / 8
Follow us