Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಕೇಸ್​​ಗೆ ಸ್ಫೋಟಕ ತಿರುವು, ಕೊಟ್ಯಂತರ ರೂಪಾಯಿ ಡೀಲ್​ಗೆ ಬಿಜೆಪಿ ಕಚೇರಿ ಲಿಂಕ್

ಚೈತ್ರಾ ಕುಂದಾಪುರ ಕೇಸ್​​ಗೆ ಸ್ಫೋಟಕ ತಿರುವು, ಕೊಟ್ಯಂತರ ರೂಪಾಯಿ ಡೀಲ್​ಗೆ ಬಿಜೆಪಿ ಕಚೇರಿ ಲಿಂಕ್

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 17, 2023 | 10:39 AM

ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಂಡದ ವಂಚನೆ ಕೃತ್ಯ ಕೇಸ್ ಕ್ಷಣ ಕ್ಷಣಕ್ಕೂ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ವಾಗ್ಮಿಯೊಬ್ಬರ ಹೆಸರು ಹೇಳಿಬರುತ್ತಿದೆ. ಅಲ್ಲದೇ ಮಾಜಿ ಸಚಿವ, ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೆಸರು ಸಹ ಬಲವಾಗಿ ಕೇಳಿಬಂದಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿಗೂ ಲಿಂಕ್​ ಇರುವ ಸ್ಫೋಟಕ ಅಂಶ ಬಟಾಬಯಲಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 17): ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಗೆ ತೀವ್ರಗೊಳಿಸಿದ್ದು, ಬಗೆದಷ್ಟು ಒಂದೊಂದೇ ಮಹತ್ವದ ಅಂಶಗಳು ಬಯಲಿಗೆ ಬೀಳುತ್ತಿವೆ. ಹೀಗಾಗಿ ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಂಡದ ವಂಚನೆ ಕೃತ್ಯ ಕೇಸ್ ಕ್ಷಣ ಕ್ಷಣಕ್ಕೂ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ವಾಗ್ಮಿಯೊಬ್ಬರ ಹೆಸರು ಹೇಳಿಬರುತ್ತಿದೆ. ಅಲ್ಲದೇ ಮಾಜಿ ಸಚಿವ, ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೆಸರು ಸಹ ಬಲವಾಗಿ ಕೇಳಿಬಂದಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಕಚೇರಿಗೂ ಲಿಂಕ್​ ಇರುವ ಸ್ಫೋಟಕ ಅಂಶ ಬಯಲಿಗೆ ಬಂದಿದೆ.