ಇಂದು ವಿಶ್ವ ಹವಾಮಾನ ದಿನ (world Meteorological Day). ಭೂಮಿಯ ಮೇಲಿನ ಪ್ರತೀ ಜೀವಿಗೆ ಹವಾಮಾನ (Weather) ಬದಲಾವಣೆ ಪರಿಣಾಮ ಬೀರುತ್ತದೆ. ದೈನಂದಿನ ಜೀವನದ ಪ್ರಮುಖವಾಗಿ ಬೆಸೆದಕೊಂಡಿರುವ ಅಂಶವಾಗಿದೆ. ಮನುಷ್ಯನ, ಪ್ರಕೃತಿಯ ಜೀವಿ ಅವಲಂಬಿತವಾಗಿರವುದೇ ಹವಾಮಾನದಿಂದ. ಹವಾಮಾನ ವೈಪರಿತ್ಯ ನೂರಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಹವಾಮಾನದಿಂದಲೇ ಕೃಷಿ ಬದುಕು ನಿಂತಿರುವುದು, ಪ್ರಾಣಿ ಸಂಕುಲಗಳ ಬದುಕು, ಮರ ಗಿಡಗಳ ಬೆಳವಣಿಗೆ ಮುಂದುವರೆಯುವುದು. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಆ ದಿನವೇ ಮಾರ್ಚ್ 23. ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಒಂದೊಂದು ಥೀಮ್‌ನಡಿಯಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
2022 ರ ಥೀಮ್ ‘ಆರಂಭಿಕ ಎಚ್ಚರಿಕೆ ಮತ್ತು ಆರಂಭಿಕ ಕ್ರಿಯೆ’ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಅಂತರ್ಸರ್ಕಾರಿ ಸಂಸ್ಥೆಯಾಗಿರುವ ಇಸು ಹವಾಮಾನ ಬದಲಾವಣೆಯ ಮೇಲೆ ತಮ್ಮ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತದೆ. ಈ ವರ್ಷ ಸಮಯಕ್ಕೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳುವುದು ದೊಡ್ಡ ಸಮಸ್ಯೆಗಳನ್ನು ತಡೆಗಟ್ಟುವ ಉತ್ತಮ ಮಾರ್ಗವಾಗಿದೆ ಎಂದು ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ವಿಶ್ವ ಹವಾಮಾನ ಸಂಸ್ಥೆ 193 UN ಸದಸ್ಯ ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿದೆ.
ಇತಿಹಾಸ:
1950ರ ಮಾರ್ಚ್ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದಿತು. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು. ವಿಶ್ವ ಹವಾಮಾನ ಸಂಸ್ಥೆಯು 1950 ಮಾರ್ಚ್ 23ರಂದು ಈ ದಿನಾಚರಣೆಯನ್ನು ಆರಂಭಿಸಿತು.ಜನರ ಸುರಕ್ಷೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವದ್ದು ಎಂಬುದನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂಸ್ಥೆಯು ಹವಾಮಾನ, ಭೌಗೋಳಿಕ ವಿಜ್ಞಾನ ಹಾಗೂ ಆಪರೇಷನಲ್ ಹೈಡ್ರಾಲಜಿ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಮಹತ್ವ:
ವಿಶ್ವ ಹವಾಮಾನ ದಿನವನ್ನು ಭೂಮಿಯ ಮೇಲಿನ ಹವಾಮಾನ ವೈಪರಿತ್ಯವನ್ನು ತಡೆಯಲು ಮತ್ತು ಅದರ ಬಗ್ಗೆ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಚರಿಸಲಾಗುತ್ತದೆ. ಇದರೊಂದಿಗೆ ಹವಾಮಾನ ವೈಪರಿತ್ಯದಿಂದಾಗುವ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ವಿಶ್ವ ಹವಾಮಾನ ಸಂಸ್ಥೆ ಈ ದಿನವನ್ನು ಆಚರಿಸುತ್ತದೆ.
ಇದನ್ನೂ ಓದಿ: