World Music Day 2026: ವಿಶ್ವ ಸಂಗೀತ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಸಂಗೀತ ಅಂದರೇನೇ ಹಾಗೆ, ಒಂದು ಕ್ಷಣ ಎಲ್ಲಾ ನೋವನ್ನು ಮರೆಸುತ್ತದೆ. ನೆಚ್ಚಿನ ಹಾಡುಗಳು ನೋವಿಗೆ ಸಾಂತ್ವನ ನೀಡುತ್ತದೆ. ಹೀಗಾಗಿ ಈ ಸಂಗೀತಕ್ಕಾಗಿಯೇ ಒಂದು ದಿನವನ್ನು ಮೀಸಲಾಗಿಡಲಾಗಿದ್ದು ಅದುವೇ ಜೂನ್ 21. ಪ್ರತಿ ವರ್ಷ ಈ ದಿನದಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಮಹತ್ವವೇನು? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಸಂಗೀತ, ಹಾಡುಗಳೆಂದರೆ ಎಲ್ಲರಿಗೂ ಇಷ್ಟನೇ. ತಮ್ಮ ಇಷ್ಟದ ಹಾಡುಗಳನ್ನು ಕೇಳಿದಾಗ ಮನಸ್ಸು ನಿರಾಳವಾಗುತ್ತದೆ. ಈ ಸಂಗೀತ ಮನಸ್ಸಿನ ಕಾಯಿಲೆಗೆ ಉತ್ತಮ ಔಷಧಿಯಾಗಿದೆ. ದಿನನಿತ್ಯ ಹಾಡುಗಳನ್ನು ಕೇಳುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದಲ್ಲದೇ ಈ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸಂಗೀತ ದಿನವನ್ನು (World Music Day) ಜೂನ್ 21 ರಂದು ಆಚರಿಸಲಾಗುತ್ತದೆ.
ವಿಶ್ವ ಸಂಗೀತ ದಿನದ ಇತಿಹಾಸವೇನು?
ವಿಶ್ವ ಸಂಗೀತ ದಿನದ ಆಚರಣೆಯೂ ಮೊದಲು ಶುರುವಾಗಿದ್ದು 1982 ರಲ್ಲಿ. ಫ್ರೆಂಚ್ ಸಾಂಸ್ಕೃತಿಕ ಸಚಿವ ಮೌರೈಸ್ ಫ್ಲುರೆಟ್ ವಿಶ್ವ ಸಂಗೀತ ದಿನ ಆಚರಣೆಗೆ ಅಧಿಸೂಚನೆ ಮಂಡಿಸಿದರು. ಈ ಮಂಡನೆಯನ್ನು ಫ್ರಾನ್ಸ್ ಸಾಂಸ್ಕೃತಿಕ ಸಚಿವರಾದ ಜಾಕ್ವೆಸ್ ಲ್ಯಾಂಗ್ 1981ರಲ್ಲಿ ಅಂಗೀಕರಿಸಲಾಯಿತು. ಇದಾದ ಒಂದು ವರ್ಷದ ಬಳಿಕ 1982 ರಲ್ಲಿ ವಿಶ್ವ ಸಂಗೀತ ದಿನದ ಆಚರಿಸುವ ಮೂಲಕ ಈ ದಿನದ ಆಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಹೀಗಾಗಿ ಮೊಟ್ಟಮೊದಲ ಬಾರಿಗೆ ಪ್ರಾನ್ಸ್ನಲ್ಲಿ ಜೂನ್ 21ರಂದು ಸಂಗೀತ ದಿನವನ್ನು ಆಚರಿಸಲಾಯಿತು. ಅಂದಿನಿಂದ ವಿಶ್ವ ಸಂಗೀತ ದಿನದ ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು?
ವಿಶ್ವ ಸಂಗೀತ ದಿನದ ಆಚರಣೆಯ ಮಹತ್ವವೇನು?
ವಿಶ್ವ ಸಂಗೀತ ದಿನದ ಮೂಲ ಉದ್ದೇಶವೇ ಹವ್ಯಾಸಿಗಳು ಮತ್ತು ವೃತ್ತಿಪರ ಕಲಾವಿದರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುವುದಾಗಿದೆ. ಈ ವಿಶೇಷ ದಿನದಂದು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಂಗೀತಗಾರರನ್ನು ಗೌರವಿಸಲಾಗುತ್ತದೆ. ಯುವಪೀಳಿಗೆಯನ್ನು ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಸಂಗೀತ ದಿನದ ಹಿನ್ನಲೆ ಸಂಗೀತ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಶಾಸ್ತ್ರೀಯ ಸಂಗೀತ, ಪ್ರಾದೇಶಿಕ ಸಂಗೀತದ ಪ್ರದರ್ಶನಗಳು, ವಿಶೇಷ ಕಾರ್ಯಾಗಾರಗಳು ಪ್ರದರ್ಶನಗಳನ್ನು ಆಯೋಜಸಲಾಗುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




