ಕೆಲವರು ಬಿಡುವು ಸಿಕ್ಕಾಗಲೆಲ್ಲಾ ಪೆನ್ನು ಪುಸ್ತಕ ಹಿಡಿದು ತನ್ನಷ್ಟಕ್ಕೆ ಏನನ್ನೋ ಗೀಚುವುದನ್ನು ನೋಡಿರಬಹುದು. ಅಂತಹವರನ್ನು ನೋಡಿದಾಗ ಇದೇನಪ್ಪಾ ಒಬ್ಬರೇ ಇಷ್ಟೊಂದು ಗಾಢವಾದ ಆಲೋಚನೆಯಲ್ಲಿ ಮುಳುಗಿದ್ದಾರೆ ಎಂದೇನಿಸಬಹುದು. ಮನಸ್ಸಿನ ಭಾವನೆಯನ್ನು ಅಕ್ಷರ ರೂಪಕ್ಕೆ ಇಳಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ ಕವಿಯ ಮನಸ್ಸು ನಿಮ್ಮದಾಗಿದ್ದರೆ ಸಾಮಾನ್ಯ ಎನಿಸುವ ವಸ್ತುಗಳ ಮೇಲು ಕವಿತೆಯೊಂದು ಹುಟ್ಟಬಹುದು. ಕವನಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಕಾವ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಬರೆಯುವ ತುಡಿತವಿರುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1999 ರಲ್ಲಿ ವಿಶ್ವಸಂಸ್ಥೆಯ ಸದಸ್ಯರು ಈ ದಿನವನ್ನು ಆಚರಿಸಲು ಮುಂದಾದರು. ಹೀಗಾಗಿ ಮೊದಲ ಬಾರಿಗೆ ಅಂದರೆ ಅಕ್ಟೋಬರ್ ತಿಂಗಳಲ್ಲಿ ಪ್ಯಾರಿಸ್ ನಲ್ಲಿ ವಿಶ್ವ ಕಾವ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಕಾವ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿವೆ.
ಇದನ್ನೂ ಓದಿ: ಸ್ವಾರ್ಥವನ್ನು ಬಿಟ್ಟು ಸಂಪತ್ತು ಭರಿತವಾದ ಅರಣ್ಯ ಉಳಿಸಿ
ವಿಶ್ವ ಕಾವ್ಯ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶವೇನೆಂದರೆ ಜನರಿಗೆ ಕವಿತೆಗಳ ಮಹತ್ವವನ್ನು ತಿಳಿಸುವುದು. ಕವಿಗಳನ್ನು ಗೌರವಿಸುವುದು ಹಾಗೂ ಕವನ ವಾಚನದ ಮೌಖಿಕ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವುದಾಗಿದೆ. ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಆಸಕ್ತಿಯುಳ್ಳವವರನ್ನು ಪ್ರೋತ್ಸಾಹಿಸುವುದು. ಇಂದಿನ ಯುವಜನರಿಗೆ ಈ ದಿನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಎಲ್ಲಾ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಕಾವ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಶಾಲಾ ಕಾಲೇಜುಗಳು, ರಾಷ್ಟ್ರೀಯ ಆಯೋಗಗಳು, ಎನ್‌ಜಿಒಗಳು, ಕಾವ್ಯ ಸಮುದಾಯಗಳು, ಸಾಂಸ್ಕೃತಿಕ ಗುಂಪುಗಳು ಹೀಗೆ ಹತ್ತು ಹಲವು ಸಂಸ್ಥೆಗಳು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ