
ಇಂದಿನ ಈ ಇಂಟರ್‌ನೆಟ್ ಯುಗದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಪ್ರಪಂಚದಾದ್ಯಂತ ನಡೆಯುವ ಪ್ರತಿಯೊಂದು ಕ್ಷಣ ಕ್ಷಣದ ಮಾಹಿಯನ್ನು ಬೇಕಾದರೂ ತಿಳಿಯಬಹುದು ಜೊತೆಗೆ ಇಂದು ಸಾಕಷ್ಟು ಮನೋರಂಜನೆಯ ಆಯ್ಕೆಗಳೂ ಇವೆ. ಆದ್ರೆ ಒಂದು ಕಾಲದಲ್ಲಿ ರೇಡಿಯೋವೇ ಎಲ್ಲಾ ಆಗಿತ್ತು. ಹೌದು ಪ್ರಚಲಿತ ಘಟನೆಗಳ ಮಾಹಿತಿಯನ್ನು ನೀಡುವ ಸಂವಹನ ಮಾಧ್ಯಮವಾಗಿತ್ತು, ಇದರ ಮೂಲಕವೇ ಜನ ಸುದ್ದಿಗಳನ್ನು ತಿಳಿಯುತ್ತಿದ್ದರು. ಇಂದಿಗೂ ಕೂಡ ರೇಡಿಯೋ (Radio) ಅತ್ಯಂತ ಪ್ರಭಾವಶಾಲಿ ಸಮೂಹ ಮಾಧ್ಯಮವಾಗಿ, ವಿಶ್ವಾಸಾರ್ಹ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೇಡಿಯೋದ ಮಹತ್ವ ಮತ್ತು ಅದರ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲಿರುವ ವಿಶೇಷ ದಿನವಿದು
ರೇಡಿಯೋ ಇಂದು ಮರದ ಅಥವಾ ಪ್ಲಾಸ್ಟಿಕ್ ಪೆಟ್ಟಿಗೆಗೆ ಸೀಮಿತವಾಗಿಲ್ಲ. ಇದು ಈಗ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಆಗಿ ಅಸ್ತಿತ್ವದಲ್ಲಿದೆ. ಈ ಎಫ್‌ಎಂಗಳ ಮೂಲಕ ಪಾಡ್‌ಕ್ಯಾಸ್ಟ್, ಸುದ್ದಿ, ಹಾಡು ಇತ್ಯಾದಿ ಕಾರ್ಯಕ್ರಮಗಳನ್ನೂ ಕೇಳಬಹುದು. ಎಫ್‌ಎಂ ರೇಡಿಯೋ ಸ್ಟೇಷನ್‌ಗಳ ಮುಖಾಂತರ ಮನೋರಂಜನೆಯ ವ್ಯಾಪ್ತಿಯೂ ದೊಡ್ಡದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ