AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ?

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೋಗೇ ಹೋಗ್ತಾರೆ. ಹೀಗೆ ಬಗೆ ಬಗೆಯ ಖಾದ್ಯಗಳನ್ನು ಸವಿಯಲೆಂದು ರೆಸ್ಟೋರೆಂಟ್‌ಗಳಿಗೆ ಹೋದಾಗ ಫುಡ್‌ ಆರ್ಡರ್‌ ಮಾಡುವ ಮೊದಲೇ ವೈಟರ್‌ ನೀರು ತಂದು ಕೊಡುತ್ತಾರೆ. ಅಷ್ಟಕ್ಕೂ ಹೋಟೆಲ್‌ಗಳಲ್ಲಿ ಮೊದಲು ನೀರನ್ನು ಸರ್ವ್‌ ಮಾಡುವುದೇಕೆ, ಇದರ ಹಿಂದಿನ ಆಸಕ್ತಿದಾಯಕ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳಿ.

ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ಒಂದು ಗ್ಲಾಸ್‌ ನೀರು ನೀಡುವುದೇಕೆ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Jul 01, 2026 | 5:53 PM

Share

ಮುಖ್ಯಾಂಶಗಳು

  • ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರು ನೀಡವುದು ಆತಿಥ್ಯದ ಒಂದು ಭಾಗ
  • ಇದು ಕೇವಲ ಆತಿಥ್ಯದ ಸೂಚಕವಲ್ಲ, ಬದಲಾಗಿ ಸ್ಮಾರ್ಟ್ ವ್ಯವಹಾರ ತಂತ್ರವೂ ಹೌದು
  • ವ್ಯವಹಾರವನ್ನು ಬೆಳೆಸುವ ಒಂದು ಬುದ್ಧಿವಂತ ಮಾರ್ಗ ಹೌದು

ಪ್ರತಿಯೊಬ್ಬರೂ ಸಹ ಫ್ರೆಂಡ್ಸ್‌ ಅಥವಾ ಫ್ಯಾಮಿಲಿಯ ಜೊತೆಗೆ ಆಗಾಗ್ಗೆ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ (restaurants) ಹೋಗ್ತಾರೆ. ನಿಮಗೂ ಸಹ ಆಗ್ಗಾಗೆ ರೆಸ್ಟೋರೆಂಟ್‌ಗಳಿಗೆ ಹೋಗುವ ಅಭ್ಯಾಸ ಇರಬಹುದಲ್ವಾ, ಹೀಗೆ ರೆಸ್ಟೋರೆಂಟ್‌ಗೆ ಹೋದಾಗ ಫುಡ್‌ ಆರ್ಡರ್‌ ಮಾಡುವ ಮೊದಲೇ ವೈಟರ್‌ ಟೇಬಲ್‌ ಮೇಲೆ ಒಂದು ಗ್ಲಾಸ್‌ ನೀರು ತಂದಿಡುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಹೆಚ್ಚಿನವರು ಇದನ್ನು ಆತಿಥ್ಯದ ಒಂದು ಭಾಗವೆಂದು ಭಾವಿಸುತ್ತಾರೆ. ಇದು ಕೇವಲ ಆತಿಥ್ಯದ ಸೂಚಕವಲ್ಲ, ಬದಲಾಗಿ ಮನೋವಿಜ್ಞಾನ ಮತ್ತು ಸ್ಮಾರ್ಟ್ ವ್ಯವಹಾರ ತಂತ್ರವೂ ಆಗಿದೆ. ಹಾಗಾದರೆ ಇದರ ಹಿಂದಿನ ಆಸಕ್ತಿದಾಯಕ ಕಾರಣಗಳೇನು ಎಂಬುದನ್ನು ಅನ್ವೇಷಿಸೋಣ.

ರೆಸ್ಟೋರೆಂಟ್‌ಗಳಲ್ಲಿ ಮೊದಲು ಒಂದು ಗ್ಲಾಸ್‌ ನೀರು ನೀಡುವುದೇಕೆ?

ಆತಿಥ್ಯದ ಸಂಕೇತ: ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು. ಭಾರತದಲ್ಲಿ, ಅತಿಥಿಗೆ ಮೊದಲು ನೀರು ನೀಡುವುದನ್ನು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವನ್ನು ರೆಸ್ಟೋರೆಂಟ್‌ಗಳಲ್ಲಿಯೂ ಆಚರಿಸಲಾಗುತ್ತದೆ. ನೀರು ನೀಡಿದ ತಕ್ಷಣ, ನಮ್ಮಲ್ಲಿ ಸ್ವಾಗತ ಮತ್ತು ಕಾಳಜಿಯ ಭಾವನೆ ಉಂಟಾಗುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಮಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿಯೇ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರು ನೀಡುವುದು.

ಆಯಾಸ ಮತ್ತು ಬಾಯಾರಿಕೆಯನ್ನು ನಿವಾರಿಸುತ್ತದೆ: ಅನೇಕ ಜನರು ಕೆಲಸ, ಶಾಪಿಂಗ್ ಅಥವಾ ಪ್ರಯಾಣದಿಂದ ನೇರವಾಗಿ ರೆಸ್ಟೋರೆಂಟ್‌ಗೆ ಬರುತ್ತಾರೆ. ಆಗ ಆಯಾಸ ಮತ್ತು ವಿಪರೀತ ಬಾಯಾರಿಕೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ದೇಹ ಉಲ್ಲಾಸಗೊಳ್ಳುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ.  ಮನಸ್ಸು ಶಾಂತವಾಗಿದ್ದಾಗ, ನಾವು ನಿಧಾನವಾಗಿ ಮೆನುವನ್ನು ಬ್ರೌಸ್ ಮಾಡಬಹುದು ಮತ್ತು ಯಾವುದೇ ಆತುರವಿಲ್ಲದೆ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು. ಈ ಕಾರಣಕ್ಕೂ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರನ್ನು ನೀಡಲಾಗುತ್ತದೆ.

ಹಸಿವನ್ನು ಹೆಚ್ಚಿಸುವ ತಂತ್ರಗಳು: ಕೆಲವು ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ, ಇದು ನಮಗೆ ಇನ್ನಷ್ಟು ಹಸಿವನ್ನುಂಟು ಮಾಡುತ್ತದೆ. ಹೀಗೆ ತುಂಬಾ ಹಸಿವಾದಾಗ,  ಸೂಪ್, ಸ್ಟಾರ್ಟರ್, ಮುಖ್ಯ ಖಾದ್ಯ  ಎಲ್ಲವನ್ನು ಆರ್ಡರ್ ಮಾಡುತ್ತೇವೆ. ಇದು ಕೂಡ ರೆಸ್ಟೋರೆಂಟ್‌ಗಳಲ್ಲಿ ಫುಡ್‌ ಆರ್ಡರ್‌ ಮಾಡುವ ಮುನ್ನ ನೀರು ನೀಡುವುದರ  ಹಿಂದಿನ ಕಾರಣ.

ಇದನ್ನೂ ಓದಿ: ಮಾತ್ರೆಗಳ ಮಧ್ಯೆ ಗೆರೆ ಏಕಿರುತ್ತವೆ? ಲೈನ್‌ಮಹತ್ವವೇನು?

ಕಾಯುವಿಕೆಯನ್ನು ಸುಲಭಗೊಳಿಸುವುದು: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ನಂತರ, ಆಹಾರವು ಟೇಬಲ್‌ಗೆ ಬರಲು 15 ರಿಂದ 20 ನಿಮಿಷಗಳು ತೆಗೆದುಕೊಳ್ಳಬಹುದು. ಸುಮ್ಮನೆ ಕುಳಿತಾಗ, ಈ ಕಾಯುವಿಕೆ ತುಂಬಾ ದೀರ್ಘ ಮತ್ತು ನೀರಸವೆನಿಸಬಹುದು. ಆದರೆ ಮೇಜಿನ ಮೇಲೆ ಒಂದು ಲೋಟ ನೀರು ಇದ್ದಾಗ, ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಚಿಟ್‌ಚಾಟ್‌ ಮಾಡುತ್ತಾ  ನಿಧಾನವಾಗಿನೀರು ಕುಡಿಯುತ್ತೇವೆ. ಇದರಿಂದ ಆ 15 ರಿಂದ 20 ನಿಮಿಷಗಳು ಹೇಗೆ ಕಳೆದವು ಎಂಬುದೇ ಗೊತ್ತಾಗುವುದಿಲ್ಲ.

ವ್ಯವಹಾರವನ್ನು ಬೆಳೆಸುವ ಒಂದು ಬುದ್ಧಿವಂತ ತಂತ್ರ: ರೆಸ್ಟೋರೆಂಟ್ ವ್ಯವಹಾರಕ್ಕೆ ಆರಂಭದಲ್ಲಿ ಉಚಿತ ನೀರು ನೀಡುವುದು ತುಂಬಾ ಪ್ರಯೋಜನಕಾರಿ. ಗ್ರಾಹಕರು ಉತ್ತಮ ಸೇವೆ ಮತ್ತು ಗೌರವವನ್ನು ಪಡೆದಾಗ, ಅವರು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಹೆಚ್ಚು. ಸಕಾರಾತ್ಮಕ ಅನುಭವವು ಅವರು ಅದೇ ರೆಸ್ಟೋರೆಂಟ್‌ಗೆ ಪದೇ ಪದೇ ಬರುವಂತೆ ಮಾಡುತ್ತದೆ. ಹೀಗೆ ವ್ಯವಹಾರವನ್ನು ಹೆಚ್ಚಿಸುವ ಸಲುವಾಗಿಯೂ ಉತ್ತಮ ಆಥಿತ್ಯದ ಭಾಗವಾಗಿ ನೀರನ್ನು ನೀಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Wed, 1 July 26

Follow Us
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್