ಒಂದು ಸಮಾಜವನ್ನು ರೂಪಿಸುವಲ್ಲಿ, ಜೀವನವನ್ನು ಸುಧಾರಿಸುವಲ್ಲಿ ಮತ್ತು ತಿಳುವಳಿಕೆಯುಳ್ಳ ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಂಕಿಅಂಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ಸಮಾಜದ ಅಥವಾ ಒಂದು ದೇಶದ ವ್ಯಾಪಾರ ವ್ಯವಹಾರದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಅಂಕಿಅಂಶಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಒಂದು ದೇಶದ ಅಭಿವೃದ್ಧಿಯಲ್ಲಿ ಅಂಕಿಅಂಶಗಳು ವಹಿಸುವ ಪಾತ್ರದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಪ್ರತಿವರ್ಷ ಅಕ್ಟೋಬರ್ 20 ರಂದು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.
ವಿಶ್ವಸಂಸ್ಥೆಯ ಅಂಕಿಅಂಶಗಳ ಆಯೋಗವು (UNSD) ಫೆಬ್ರವರಿ 2010 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 41 ನೇ ಅಧಿವೇಶನದಲ್ಲಿ ವಿಶ್ವ ಅಂಕಿಅಂಶಗಳ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿದ ನಿರ್ಣಯದ ಮೇರೆಗೆ ಮೊದಲ ಬಾರಿಗೆ ಅಕ್ಟೋಬರ್ 20, 2010 ರಲ್ಲಿ ವಿಶ್ವ ಅಂಕಿಅಂಶಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 20 ನೇ ತಾರೀಕಿನಂದು ವಿಶ್ವ ಮಟ್ಟದಲ್ಲಿ ಅಂಕಿಅಂಶಗಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇಂದಿನ ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ ವಿಶ್ವಾಸಾರ್ಹ ಮತ್ತು ನವೀಕೃತ ಮಾಹಿತ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅಂಕಿಅಂಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಂಕಿ ಅಂಶಗಳು ನೀತಿ ನಿರೂಪಕರಿಗೆ ಸಾಮಾಜಿಕ ಪ್ರವೃತ್ತಿಗಳು, ಜನಸಂಖ್ಯೆ, ಆರ್ಥಿಕ ಕಾರ್ಯಕ್ಷಮತೆ ಸೇರಿದಂತೆ ಇತ್ಯಾದಿ ಪ್ರಮುಖ ಡೇಟಾಗಳ ಒಳನೋಟವನ್ನು ಒದಗಿಸುತ್ತವೆ. ನಮ್ಮ ದೈನಂದಿನ ವ್ಯವಹಾರ ಮಾತ್ರವಲ್ಲದೆ ಯಾವುದೇ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಂಕಿಅಶಗಳು ತುಂಬಾನೇ ಮುಖ್ಯ. ಹಾಗಾಗಿ ಅಂಕಿ ಅಂಶಗಳ ಮಹತ್ವವನ್ನು ಸಾರಲು ಹಾಗೂ ಅಂಕಿಅಂಶಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಇದು ಕೋಟಿ ಕೋಟಿ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ನೇಲ್ ಪಾಲಿಶ್; ಏನಿದರ ವಿಶೇಷತೆ
ಅಂಕಿಅಂಶಗಳನ್ನು ಆಧುನಿಕ ಆಡಳಿತ ಮತ್ತು ಅರ್ಥಶಾಸ್ತ್ರ ಬೆನ್ನೆಲು ಅಂತಾನೇ ಹೇಳಬಹುದು. ಸರಿಯಾದ ಅಂಕಿಅಂಶಗಳಿಲ್ಲದೆ ಜನಸಾಮಾನ್ಯರ ಜೀವನದಲ್ಲಿಯೇ ಲೆಕ್ಕದ ವಿಚಾರದಲ್ಲಿ ಅಥವಾ ಹಣಕಾಸಿನ ವಿಚಾರದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನೂ ರಾಜ್ಯ, ದೇಶ, ವಿಶ್ವ ಮಟ್ಟದಲ್ಲಿ ಸರಿಯಾದ ಅಂಕಿಅಂಶ ಅಥವಾ ಸ್ಟಾಟಿಸ್ಟಿಕ್ ಇಲ್ಲದೆ ಯಾವುದೇ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ-ಆರ್ಥಿಕ ಪ್ರಗತಿಗಳನ್ನು ಮೇಲ್ವಿಚಾರಣೆ ಮಾಡಲು, ಸಾಕ್ಷ್ಯ ಆಧಾರಿತ ನೀತಿಗಳನ್ನು ಅನುಷ್ಠಾನಗೊಳಿಸಲು ಮತ್ತು ಜಾಗತಿಕ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಿಖರವಾದ, ಸಮಯೋಚಿತ ಅಂಕಿಅಂಶಗಳು ಅತ್ಯಗತ್ಯ. ಹೌದು ಗುಣಮಟ್ಟದ ಅಂಕಿಅಂಶಗಳಿಲ್ಲದೆ ಶಿಕ್ಷಣ, ಆರೋಗ್ಯ, ಹವಮಾನ ಬದಲಾವಣೆ ಮತ್ತು ಆರ್ಥಿಕ ಬೆಳವಣಿಗೆಯಂತಹ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಅಳೆಯಲು ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ಸಮಾಜವನ್ನು ರೂಪಿಸುವಲ್ಲಿ ಮತ್ತು ಜೀವನವನ್ನು ಸುಧಾರಿಸುವಲ್ಲಿ ಅಂಕಿಅಂಶಗಳು ತುಂಬಾನೇ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ